ಈ ವಾಚ್ ಬರಿಯ ಸ್ಮಾರ್ಟ್‌ವಾಚ್ ಅಲ್ಲ ನಿಮ್ಮ ಆರೋಗ್ಯ ರಕ್ಷಕ

Written By:

ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಕಾರ್ಯನಿರ್ವಹಿಸುವ ನಿಮ್ಮ ಮಣಿಗಂಟಿಗೆ ಕಟ್ಟಿಕೊಳ್ಳಬಹುದಾದ ವೇರಿಯೆಬಲ್ ಕುರಿತು ಮೈಕ್ರೋಸಾಫ್ಟ್ ಕಾರ್ಯನಿರ್ವಹಿಸುತ್ತಿದ್ದು ಇದೊಂದು ಸ್ಮಾರ್ಟ್‌ವಾಚ್ ಅಲ್ಲ ಎಂಬುದು ಇಲ್ಲಿ ಆಶ್ಚರ್ಯವನ್ನುಂಟು ಮಾಡುತ್ತಿರುವ ಸುದ್ದಿಯಾಗಿದೆ.

ಟೆಕ್ ಸೈಟ್ ವಿನ್‌ಸೂಪರ್‌ಸೈಟ್ ಹೇಳುವಂತೆ ಮೈಕ್ರೋಸಾಫ್ಟ್‌ನ ಮುಂಬರಲಿರುವ ಡಿವೈಸ್ ಫಿಟ್‌ಬಿಟ್‌ನಂತೆ ಇದು ಫಿಟ್‌ನೆಸ್ ಟ್ರ್ಯಾಕರ್ ಆಗಿದ್ದು ಆರೋಗ್ಯದ ಬಗೆಗಿನ ಮಾಹಿತಿಯನ್ನು ನೀಡಲಿದೆ ಎಂದು ಈ ಸೈಟ್ ವರದಿ ಮಾಡಿದೆ.

ಮೈಕ್ರೋಸಾಫ್ಟ್‌ನಿಂದ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ

ಹೃದಯ ಬಡಿತ, ಕ್ಯಾಲೋರಿ ಬರ್ನ್ ಮತ್ತು ಇದನ್ನು ನಿಯಂತ್ರಿಸಲು ಅನುಸರಿಸಬೇಕಾದ ಹಂತಗಳು ಇದನ್ನೆಲ್ಲಾ ಒಳಗೊಂಡ ಸಮಗ್ರ ಮಾಹಿತಿಯನ್ನು ಈ ಮೈಕ್ರೋಸಾಫ್ಟ್ ಡಿವೈಸ್ ಒಳಗೊಂಡಿದ್ದು ಇದು ಹನ್ನೊಂದು ಸೆನ್ಸಾರ್‌ಗಳನ್ನು ಹೊಂದಿರಬಹುದಾಗಿದೆ.

ಈ ಎಲ್ಲಾ ವದಂತಿಗಳು ನಿಜವಾಗಿದ್ದಲ್ಲಿ, ಇದರ ಮುಖ್ಯ ಮಾರಾಟ ಅಂಶ ಇದರ ಜಾಗತಿಕ ಸಂಯೋಜನೆಯಾಗಿದ್ದು, ಯಾವುದೇ ಸ್ಮಾರ್ಟ್‌ಫೋನ್‌ಗೂ ಇದು ಸಹಕಾರಿಯಾಗಿ ಮೂಡಿ ಬರಲಿದೆ. (ಕೇವಲ ವಿಂಡೋಸ್ ಫೋನ್‌ಗೆ ಮಾತ್ರವಲ್ಲ, ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲೂ) ಮೈಕ್ರೋಸಾಫ್ಟ್‌ನ ಫಿಟ್‌ನೆಸ್ ಆಧಾರಿತ ಅಪ್ಲಿಕೇಶನ್‌ಗಳಾದ ಬಿಂಗ್ ಹೆಲ್ತ್ ಮತ್ತು ಫಿಟ್‌ನೆಸ್ ಕೂಡ ಈ ವೇರಿಯೇಬಲ್‌ನಲ್ಲಿ ಲಭ್ಯವಾಗಲಿದೆ.

ಆಪಲ್ ಕೂಡ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡುತ್ತಿದ್ದು ಇದು ಇನ್ನೂ ನಿಖರವಾಗಿಲ್ಲ, ಇನ್ನೊಂದು ಬದಿಯಲ್ಲಿ ಗೂಗಲ್ ಆಂಡ್ರಾಯ್ಡ್ ವೇರ್ ವಾಚ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ಕಳೆದ ವಾರವಷ್ಟೇ ಪ್ರಸ್ತುಪಡಿಸಿತ್ತು.

ಮೈಕ್ರೋಸಾಫ್ಟ್‌ನ ಈ ಡಿವೈಸ್ 2014 ರ ಮಧ್ಯಭಾಗದಲ್ಲಿ ಬಿಡುಗಡೆಯಾಗಬಹುದೆಂಬ ನಿರೀಕ್ಷೆ ಇದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot