Home
ಕಂಪ್ಯೂಟರ್‌‌

6,790 ರೂ. ದರಲ್ಲಿ ಮಿತಾಷಿ ಪ್ಲೇ ಬಿ 100 ಟ್ಯಾಬ್ಲೆಟ್‌ ಬರಲಿದೆ

By Vijeth Kumar Dn

6,790 ರೂ. ದರಲ್ಲಿ ಮಿತಾಷಿ ಪ್ಲೇ ಬಿ 100 ಟ್ಯಾಬ್ಲೆಟ್‌ ಬರಲಿದೆ
ಭಾರತೀಯ ಬಜೆಟ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್ ಮಾರುಕಟ್ಟೆಗೆ 8 ಸಾವಿರ ರೂ. ದರದಲ್ಲಿ 7 ಇಂಚಿನ ದರ್ಶಕ ಹೊಂದಿರುವಂತಹ ತರಾವರಿಯ ಟ್ಯಾಬ್ಲೆಟ್ಸ್‌ಗಳು ಕಾಲಿರಿಸುತ್ತಿದ್ದು, ಇದೀಗ ಮುಂಬೈ ಮೂಲದ ಟ್ಯಾಬ್ಲೆಟ್‌ ತಯಾರಿಕಾ ಸಂಸ್ಥೆಯಾದ ಮಿತಾಷಿ ತನ್ನಯ ನೂತನ ಮಿತಾಷಿ ಪ್ಲೇ ಬಿ 100 ಟ್ಯಾಬ್ಲೆಟ್‌ ರೂ. 6,790 ದರದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಅಂದಹಾಗೆ ಈಗಾಗಲೇ ಆಂಡ್ರಾಯ್ಡ್‌ ಚಾಲಿತ ಬಜೆಟ್‌ ಟ್ಯಾಬ್ಲೆಟ್‌ಗಳಿಂದ ತುಂಬಿ ಹೋಗಿರುವ ಭಾರತೀಯ ಮಾರುಕಟ್ಟೆಗೆ ಕಾಲಿರಿಸಲಿರುವ ನೂತನ ಮಿತಾಷಿ ಪ್ಲೇ ಬಿ 100 ಟ್ಯಾಬ್ಲೆಟ್‌ ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ ಎಂಬುದರ ಕಡೆ ಒಮ್ಮೆ ಗಮನ ಹರಿಸೋಣ.

ಮಿತಾಷಿ ಪ್ಲೇ ಬಿ 100 ನ ವಿಶೇಷತೆ:

ತೂಕ ಹಾಗೂ ಸುತ್ತಳತೆ : ಮಿತಾಷಿ ಪ್ಲೇ ಬಿ 100 ಟ್ಯಾಬ್ಲೆಟ್‌ 193 x 124.5 x 11 mm ಸುತ್ತಳತೆಯೊಂದಿಗೆ 360 ಗ್ರಾಂ ತೂಕವಿದೆ.

ದರ್ಶಕ : 7 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 5 ಪಾಯಿಂಟ್‌ ಮಲ್ಟಿ-ಟಚ್‌ ಸೇರಿದಂತೆ 800 x 480 ಪಿಕ್ಸೆಲ್ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌ : ಮಿತಾಷಿ ಪ್ಲೇ ಬಿ 100 ನಲ್ಲಿ ಬಾಕ್ಸ್ ಚಿಪ್‌ ಎ10 ಚಿಪ್‌ಸೆಟ್‌ ಹಾಗೂ 1.2GHz ARM ಕಾರ್ಟೆಕ್ಸ್‌ A8 ಪ್ರೊಸೆಸರ್‌ ನೊಂದಿಗೆ ಮೇಲ್‌-400 GPU ಒಳಗೊಂಡಿದೆ.

ಆಪರೇಟಿಂಗ್‌ ಸಿಸ್ಟಂ : ಬಜೆಟ್‌ ಟ್ಯಾಬ್ಲೆಟ್‌ ಆದ್ದರಿಂದ ಮಾರುಕಟ್ಟೆಯಲ್ಲಿನ ಇತರೆ ಬಜೆಟ್‌ ಟ್ಯಾಬ್ಲೆಟ್‌ಗಳಂತೆಯೇ ಮಿತಾಷಿ ಪ್ಲೇ ಬಿ 100 ನಲ್ಲಿಯೂ ಕೂಡಾ ಆಂಡ್ರಾಯ್ಡ್‌ 4.0 ಐಸಿಎಸ್‌ ಪ್ಲಾಟ್‌ಫಾರ್ಮ್‌ ನೀಡಲಾಗಿದೆ.

ಕ್ಯಾಮೆರಾ : 2MP ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 1.3MP ಮುಂಬದಿಯ ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌ : 4ಜಿಬಿ ಆಂತರಿಕ ಸ್ಟೋರೇಜ್‌ ಹಾಗೂ 512MB RAM ಹೊಂದಿದ್ದು. ಮೆಮೊರಿ ವಿಸ್ತರಣೆಗಾಗಿ ಮೈಕ್ರೋಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿದೆ.

ಕನೆಕ್ಟಿವಿಟಿ : ನೂತನ ಟ್ಯಾಬ್ಲೆಟ್‌ನಲ್ಲಿ USB ಡಾಂಗಲ್‌ ಮೂಲಕ 3ಜಿ, ವೈ-ಫೈ ಹಾಗೂ ಮೈಕ್ರೋ USB 2.0 ಕನೆಕ್ಟಿವಿಟಿ ಫೀಚರ್ಸ್‌ ಹೊಂದಿದೆ.

ಬ್ಯಾಟರಿ : ಮಿತಾಷಿ ಪ್ಲೇ ಬಿ 100 ನಲ್ಲಿ 3,000 mAh Li-Po ಬ್ಯಾಟರಿ ನಿಡಲಾಗಿದ್ದು 4 ಗಂಟೆಗಳ ಬ್ಯಾಕಪ್‌ ನೀಡುತ್ತದೆ.

ಬೆಲೆ ಹಾಗೂ ಲಭ್ಯತೆ

ಕರೀದಿಸುವುದಾದರೆ ಮಿತಾಷಿ ಪ್ಲೇ ಬಿ 100 ಬಜೆಟ್‌ ಟ್ಯಾಬ್ಲೆಟ್‌ ರೂ. 6,790 ದರದಲ್ಲಿ ಲಭ್ಯವಿದ್ದು, ಮಿತಾಷಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸ ಬಹುದಾಗಿದೆ.

Read In English...

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+