ಮಂಗಳಯಾನದೊಂದಿಗೆ ಸೆಲ್ಫೀ ತೆಗೆಯಲು ನೀವು ಸಿದ್ಧರಾಗಿ

Written By:

ಸಿಟಿ ಆಧಾರಿತ ಸ್ಟಾರ್ಟ್‌ ಅಪ್ ಮೊಬೈಲ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದ್ದು ಇದು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮತ್ತು ಐಓಎಸ್ ಡಿವೈಸ್‌ಗಳಿಗೆ ಮುಂದಿನ ವಾರ ಮಾರ್ಸ್‌ನಲ್ಲಿ ಧರೆಗಿಳಿಯುತ್ತಿರುವುದರಿಂದಾಗಿ ಭಾರತೀಯ ಬಾಹ್ಯಾಕಾಶ ಮಂಗಳಯಾನದೊಂದಿಗೆ ಸೆಲ್ಫೀಗಳನ್ನು ಕ್ಲಿಕ್ಕಿಸಬಹುದಾಗಿದೆ.

ಬಾಹ್ಯಾಕಾಶದಲ್ಲೇ ಒಂದು ಮೈಲಿಗಲ್ಲು ಎಂದು ಕರೆಯಲಾಗುವ ಈ ಕಾರ್ಯಕ್ರಮದಲ್ಲಿ ಬಳಕೆದಾರರಿಗೆ ಈ ಸ್ಮಾರ್ಟ್ ಅಪ್ಲಿಕೇಶನ್ ಅವಕಾಶವನ್ನು ಒದಗಿಸುತ್ತಿದೆ. ಸಪ್ಟೆಂಬರ್ 24 ರಂದು ಇಳಿಯಲಿದೆ ಎಂದು ವರದಿಗಳು ತಿಳಿಸಿವೆ. ಈ ಸ್ಮಾರ್ಟರ್ ಅಪ್ಲಿಕೇಶನ್ ಅನ್ನು 3D ಮಾದರಿಯನ್ನು ಬಳಸಿ ಅಭಿವೃದ್ಧಿಪಡಿಸಲಾಗಿದ್ದು ಇವರ ವಾತಾವರಣ ಬದುಕುವ ಪರಿಸರ ಮೊದಲಾದ ಚಿತ್ರಣಗಳನ್ನು ನಮಗೆ ವೀಕ್ಷಿಸಬಹುದಾಗಿದೆ.

ಮಂಗಳಯಾನದ ಸೆಲ್ಫೀಯ ಮಜ ಇನ್ನು ನಿಮಗೂ

ಮಂಗಳಯಾನವನ್ನು ತಮ್ಮ ಕೈಗಳಲ್ಲಿ ಎತ್ತುವ ಅಥವಾ ಕಾರಿನಿಂದ ಹೊರಕ್ಕೆ ಹೀಗೆ ಅನೂಹ್ಯ ಚಿತ್ರಗಳನ್ನು ಬಳಕೆದಾರರಿಗೆ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ತಮ್ಮ ಮೊಬೈಲ್ ಡಿವೈಸ್‌ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಬಳಕೆದಾರರು ಡೌನ್‌ಲೋಡ್ ಮಾಡಬಹುದಾಗಿದ್ದು ಇದರ ಪ್ರಿಂಟ್ ಔಟ್ ಅನ್ನು ಮಾರ್ಕರ್‌ನಲ್ಲಿ ತೆಗೆಯಬಹುದಾಗಿದೆ. ಅಪ್ಲಿಕೇಶನ್ ಮತ್ತು ಮಾರ್ಕರ್‌ನ ಈ ಸಂಯೋಜನೆಯು ಬಳಕೆದಾರರಿಗೆ ಮಂಗಳಯಾನದಲ್ಲಿ ಇರುವಂತಹ ಉತ್ತಮ ಅನುಭವವನ್ನು ಒದಗಿಸಲಿದೆ.

English summary
This article tells about Mobile app for clicking selfie with ISRO's Mangalyaan.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot