ನಿಮ್ಮನ್ನು ಬೆರಗುಗೊಳಿಸುವ ವಿಂಡೋಸ್ ಟಿಪ್ಸ್‌ಗಳಿವು

By Shwetha
|

ನಿಮ್ಮ ವಿಂಡೋಸ್ ಟಾಸ್ಕ್ ಬಾರ್‌ಗೆ ಫೈಲ್ ಪೋಲ್ಡರ್ ಅನ್ನು ಹೇಗೆ ಲಗತ್ತಿಸುವುದು ಎಂದು ವಿಸ್ಮಯಗೊಂಡಿರುವಿರಾ? "ಸೆಂಡ್ ಟು ಮೆನು" ವಿಗೆ ಪ್ರವೇಶವನ್ನು ಹೇಗೆ ಪಡೆದುಕೊಳ್ಳುವುದು ಎಂಬ ರಹಸ್ಯವನ್ನು ಬೇಧಿಸಹೊರಟಿರುವಿರಾ?

ಇದನ್ನೂ ಓದಿ: ನೀವು ಅರಿತಿರಲೇಬೇಕಾದ ಗೂಗಲ್ ಕ್ರೋಮ್ ಸಲಹೆಗಳು

ನೀವು ಅರಿಯದ ವಿಂಡೋಸ್‌ನ ಸಲಹೆಗಳು ಸೂಚನೆಗಳು ಮತ್ತು ಕೀಬೋರ್ಡ್ ಶಾರ್ಟ್‌ಕಟ್‌ಗಳು ಸಾಕಷ್ಟಿದ್ದು ಇದು ನಿಮ್ಮ ಕೆಲಸವನ್ನು ಆದಷ್ಟು ಸರಳ ಮತ್ತು ಹಗುರಗೊಳಿಸಬಲ್ಲುದು. ಇಂದಿನ ಲೇಖನದಲ್ಲಿ ಹೆಚ್ಚು ಉಪಯೋಗಕಾರಿಯಾಗಿರುವ ಕೆಲವೊಂದು ಕೀಬೋರ್ಡ್ ಶಾರ್ಟ್‌ಕಟ್ ಕೀಗಳನ್ನು ನಿಮ್ಮ ಮುಂದೆ ಇರಿಸಲಿದ್ದೇವೆ.

#1

#1

ಟಾಸ್ಕ್ ಬಾರ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಲು ಮತ್ತು ಫೋಕಸ್ ಮಾಡಲು, ವಿಂಡೋಸ್ ಕೀಯನ್ನು ಒತ್ತಿ ಹಿಡಿಯಿರಿ, ಟಿ ಒತ್ತಿ ಮತ್ತು ಬಾಣದ ಗುರುತುಳ್ಳ ಕೀಗಳನ್ನು ಬಳಸಿ. ನಿಮ್ಮ ಮೌಸ್ ಬಳಸದೇ ಅಪ್ಲಿಕೇಶನ್‌ಗಳಾದ್ಯಂತ ನಿಮಗೆ ಸ್ಕ್ರಾಲ್ ಮಾಡಬಹುದು.

#2

#2

ಕಂಟ್ರೋಲ್ ಸಿ, ಕಂಟ್ರೋಲ್ ವಿ ಮತ್ತು ಕಂಟ್ರೋಲ್ ಜೆಡ್ ಅನ್ನು ನಕಲಿಸಲು, ಅಂಟಿಸಲು ಮತ್ತು ಪಠ್ಯ ಅಳಿಸಲು ಬಳಸುವುದು ಸಾಮಾನ್ಯ. ಆದರೆ ಫೈಲ್‌ಗಳಿಗೂ ಈ ಸರಳ ಸಲಹೆಗಳನ್ನು ನಿಮಗೆ ಬಳಸಬಹುದಾಗಿದೆ.

#3

#3

ವಿಂಡೋಸ್ 7 ನೊಂದಿಗೆ ಏರೋ ಸ್ನ್ಯಾಪ್ ಬಂದಿದ್ದು, ಪರದೆಯ ಬದಿಗೆ ವಿಂಡೋವನ್ನು ಎಳೆಯುವ ಮೂಲಕ ಅದನ್ನು ಗರಿಷ್ಟಗೊಳಿಸುವ ಸಾಮರ್ಥ್ಯ ಇದಕ್ಕಿದೆ.

#4

#4

ಟಾಸ್ಕ್‌ಬಾರ್‌ನಲ್ಲಿ ಪಿನ್ ಆಗಿರುವ ಅಪ್ಲಿಕೇಶನ್ ತೆರೆಯಲು, ವಿಂಡೋಸ್ ಕೀಯನ್ನು ಒತ್ತಿಹಿಡಿಯಿರಿ ಮತ್ತು ತನ್ನ ಸ್ಥಾನಕ್ಕೆ ಸಂಯೋಜನೆಗೊಳ್ಳುವ ಸಂಖ್ಯೆಯನ್ನು ಒತ್ತಿರಿ.

#5

#5

ಅದೇ ಅಪ್ಲಿಕೇಶನ್‌ನ ಹೊಸ ವಿಂಡೋವನ್ನು ತೆರೆಯಲು ಶಿಫ್ಟ್ ಕೀ, ವಿಂಡೋ ಕೀ ತದನಂತರ ಒಂದರಿಂದ ಒಂಭತ್ತರವರೆಗೆ ಒತ್ತಿ ಹಿಡಿಯಿರಿ.

#6

#6

ಡೀಫಾಲ್ಟ್ ಮೂಲಕ, ವಿಂಡೋಸ್ 7 ಮಾತ್ರವೇ ಟಾಸ್ಕ್‌ಬಾರ್‌ಗೆ ಅಪ್ಲಿಕೇಶನ್‌ಗಳನ್ನು ಪಿನ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಫೈಲ್ ಅಥವಾ ಫೋಲ್ಡರ್‌ನಂತಹ ವಿಭಿನ್ನ ಐಟಮ್ ಅನ್ನು ನೀವು ಪಿನ್ ಮಾಡುತ್ತೀರಿ ಎಂದಾದಲ್ಲಿ ಈ ಹಂತಗಳನ್ನು ಅನುಸರಿಸಿ
ನಿಮ್ಮ ಡೆಸ್ಕ್‌ಟಾಪ್‌ಗೆ ಫೈಲ್ ಅನ್ನು ಎಳೆಯಿರಿ ಮತ್ತು ಬಿಡಿ.

#7

#7

ಓಪನ್ ಎ ಕಮಾಂಡ್ ಆಪ್ಶನ್ ಪ್ರವೇಶಿಸಲು, ಶಿಫ್ಟ್ ಕೀಯನ್ನು ಕೆಳಕ್ಕೆ ಒತ್ತಿಹಿಡಿಯಿರಿ ಮತ್ತು ಫೋಲ್ಡರ್‌ಗೆ ಬಲ ಕ್ಲಿಕ್ ಮಾಡಿ. ವಿಂಡೋಸ್ 7 ಅಥವಾ ವಿಸ್ತಾಗೆ ಮಾತ್ರವೇ ಈ ಸಲಹೆ ಅನ್ವಯವಾಗುತ್ತದೆ.

#8

#8

ಶಿಫ್ಟ್ ಕೀಯೊಂದಿಗೆ "ಸೆಂಡ್ ಟು ಮೆನು" ರಹಸ್ಯವನ್ನು ಪ್ರವೇಶಿಸಬಹುದಾಗಿದೆ. ಶಿಫ್ಟ್ ಕೀಯನ್ನು ಕೆಳಕ್ಕೆ ಒತ್ತಿ ಹಿಡಿಯಿರಿ, ಫೋಲ್ಡರ್‌ಗೆ ಬಲ ಕ್ಲಿಕ್ ಮಾಡಿ ಮತ್ತು "ಸೆಂಡ್ ಟು" ಮೆನು ಆಯ್ಕೆಮಾಡಿ.

#9

#9

ನಿಮ್ಮ ಡೀಫಾಲ್ಟ್‌ನಲ್ಲಿ "ಸೆಂಡ್ ಟು ಮೆನುವಿನಲ್ಲಿ ಆಯ್ಕೆಗಳನ್ನು ಬದಲಾಯಿಸಲು, ಗೋಚರಿಸುವ ಡೀಫಾಲ್ಟ್‌ನಲ್ಲಿ "ಸೆಂಡ್ ಟು ಮೆನು" ಟೈಪ್ ಮಾಡಿ ಮತ್ತು ಫೋಲ್ಡರ್‌ನ ಲೊಕೇಶನ್ ಬಾರ್‌ಗೆ "ಶೆಲ್:ಸೆಂಡ್ ಟು" ಟೈಪ್ ಮಾಡಿ.

#10

#10

ಯಾವುದೇ ಫೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಅನ್ನು ತೆರೆಯಲು, ರನ್ ಕಮಾಂಡ್ ಸರಳ ವಿಧಾನವಾಗಿದೆ. ರನ್ ಡಯಲಾಗ್ ಬಾಕ್ಸ್ ಅನ್ನು ತೆರೆಯಲು ವಿನ್ + ಆರ್ ಕೀಬೋರ್ಡ್ ಶಾರ್ಟ್ ಕೀಯನ್ನು ಬಳಸಿ.

Best Mobiles in India

English summary
This article tells about Have you ever wondered how to pin a file folder to your Windows taskbar? Or, how to access the secret "Send To" menu.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X