ಆಕಾಶ್ ಕಂಪ್ಯೂಟರಿಗೆ ಮುಗಿಬಿದ್ದ ಗ್ರಾಹಕರು!

Posted By: Staff

ಡಿಜಿಟಲ್ ಸಾಧನಗಳ ಲೋಕದಲ್ಲಿ ಆಕಾಶ್ ಟ್ಯಾಬ್ಲೆಟ್ ಹೊಸ ಮೈಲುಗಲ್ಲು. ಇದು ದೇಶಕ್ಕೆ ಇನ್ನೊಂದು ಗರಿಮೆ. ಈ ಹಿಂದೆ ಜಗತ್ತಿನ ಅಗ್ಗದ ಕಾರು ನ್ಯಾನೊ ಪರಿಚಯಿಸಿದ ಖ್ಯಾತಿಯೂ ದೇಶದ ಬೆನ್ನಿಗಿದೆ. ಇದೀಗ ಅಗ್ಗದ ಆಕಾಶ್ ಟ್ಯಾಬ್ಲೆಟ್ ಜಾಗತಿಕವಾಗಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ಟ್ಯಾಬ್ಲೆಟಿನಿಂದಾಗಿ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲೂ ದರ ಸಮರ ಆರಂಭವಾಗುವ ನಿರೀಕ್ಷೆಯಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಈಗಾಗಲೇ ಆಕಾಶ್ ಕಂಪ್ಯೂಟರಿಗಾಗಿ ಮೂರು ಲಕ್ಷ ಬುಕ್ಕಿಂಗ್ ಆಗಿದೆಯಂತೆ.

ವಾಣಿಜ್ಯ ಮಾರಾಟದ ಆಕಾಶ್ ಟ್ಯಾಬ್ಲೆಟ್ ಸುಮಾರು 2,999 ರುಪಾಯಿಗೆ ದೊರಕಲಿದೆಯಂತೆ. ಇದು ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ದೊರಕಲಿದೆ. ಆದರೆ ಆಕಾಶ್ ಟ್ಯಾಬ್ಲೆಟ್ ಕಂಪ್ಯೂಟರ್ ಬುಕ್ಕಿಂಗ್ ಮಾಡಲು ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ದರಕ್ಕೆ ಈ ಕಂಪ್ಯೂಟರ್ ದೊರಕಲಿದೆ.

ಮತ್ತೊಂದು ವರದಿಯ ಪ್ರಕಾರ ಕಂಪನಿಯು ಆಕಾಶ್ 2 ಎಂಬ ಇನ್ನೊಂದು ಟ್ಯಾಬ್ಲೆಟ್ ಹೊರತರಲು ಯೋಜಿಸಿದೆ. ಇದು ಬೇಸಿಕ್ ಆವೃತ್ತಿಗಿಂತ ಕೊಂಚ ಮುಂದುವರೆದ ಆವೃತ್ತಿಯಂತೆ. ಇದರಲ್ಲಿ ಕೆಲವು ವಿಶೇಷತೆ ಮತ್ತು ಫೀಚರುಗಳು ಹೆಚ್ಚಿರಲಿವೆಯಂತೆ.

ಆಕಾಶ್ 2 ಟ್ಯಾಬ್ಲೆಟ್ 7 ಇಂಚಿನ ಡಿಸ್ ಪ್ಲೇ ಹೊಂದಿರುವ ನಿರೀಕ್ಷೆಯಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿರುವ ಟ್ಯಾಭ್ಲೆಟ್ 336 ಮೆಗಾಹರ್ಟ್ಸ್ ಮತ್ತು 256 ಎಂಬಿ RAM ಹೊಂದಿರಲಿದೆ. ಆಕಾಶ್ 2 ಇದಕ್ಕಿಂತ ಹೆಚ್ಚು ಪವರ್ ಮತ್ತು ಕಾರ್ಯಕ್ಷಮತೆ ಹೊಂದಿರುವ ನಿರೀಕ್ಷೆಯಿದೆ.

ಒಟ್ಟಾರೆ ಮಾರುಕಟ್ಟೆಗೆ ಬರಲಿರುವ ಹೊಸ ಆಕಾಶ್ ಕುರಿತು ಹೆಚ್ಚು ಜನರು ಆಸಕ್ತಿ ವಹಿಸಿರುವುದಂತು ನಿಜ. ಈಗಾಗಲೇ 3 ಲಕ್ಷ ಟ್ಯಾಬ್ಲೆಟಿಗಾಗಿ ಆರ್ಡರ್ ಬಂದಿರುವುದು ಇದಕ್ಕೆ ಪ್ರಮುಖ ಸಾಕ್ಷಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot