2018 ರಲ್ಲಿ ಬಿಡುಗಡೆಗೊಂಡಿರುವ ಪ್ರಮುಖ ಗೇಮಿಂಗ್ ಲ್ಯಾಪ್ ಟಾಪ್ ಗಳು

|

ಹಲವು ವರ್ಷಗಳ ಹಿಂದೆ ಒಂದು ಗೇಮಿಂಗ್ ಲ್ಯಾಪ್ ಟಾಪ್ ನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಕಷ್ಟದ ವಿಚಾರವಾಗಿತ್ತು ಆದರೆ ಈಗಿನ ಜಮಾನದಲ್ಲಿ ಖಂಡಿತ ಈಗಿಲ್ಲ. ಕಡಿಮೆ ಬಜೆಟ್ ನದ್ದೇ ಆಗಿರಲಿ ಅಥವಾ ಉತ್ತವ ಗುಣಮಟ್ಟದ ಹೆಚ್ಚು ಬಜೆಟ್ ನ ಲ್ಯಾಪ್ ಟಾಪೇ ಆಗಿರಲಿ ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಇಂಡಸ್ಟ್ರಿಯಲ್ಲಿ ಹಲವು ಆಯ್ಕೆಗಳಿವೆ.

ಲ್ಯಾಪ್ ಟಾಪ್ ತಯಾರಕರು ಪವರ್ ಮತ್ತು ಡಿಸೈನ್ ವಿಚಾರದಲ್ಲಿ ಇತರೆ ಡೆಸ್ಕ್ ಟಾಪ್ ಮತ್ತು ಇತರ ಘಟಕಗಳಿಗೆ ಹೋಲಿಸಿದರೆ ಬಹಳ ಅಭಿವೃದ್ಧಿ ಹೊಂದಿದ್ದಾರೆ. ಬೆಲೆ, ಸೈಜ್ ಇವೆಲ್ಲವೂ ಗಣನೆಗೆ ತೆಗೆದುಕೊಂಡು ಒಂದು ಗೇಮಿಂಗ್ ಲ್ಯಾಪ್ ಟಾಪ್ ನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಕಷ್ಟದ ವಿಚಾರವೇ ಸರಿ. ಆದರೆ ನಿಮ್ಮ ಕಷ್ಟದ ಕೆಲಸವನ್ನು ಸರಳಗೊಳಿಸುವ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. 2018 ರಲ್ಲಿ ಬಿಡುಗಡೆಗೊಂಡಿರುವ ಬೆಸ್ಟ್ ಗೇಮಿಂಗ್ ಲ್ಯಾಪ್ ಟಾಪ್ ಗಳ ಬಗೆಗಿನ ವಿವರಣೆಯನ್ನು ಇಲ್ಲಿ ನೀಡುತ್ತಿದ್ದೇವೆ. ಮುಂದೆ ಓದಿ.

ಏಲಿಯನ್ವೇರ್ 17 R5

ಏಲಿಯನ್ವೇರ್ 17 R5

ಈ ವರ್ಷ ಡೆಲ್ ಸಂಸ್ಥೆಯಿಂದ ಬಿಡುಗಡೆಗೊಂಡಿರುವ ಏಲಿಯನ್ವೇರ್ 17 R5 ಅತ್ಯುತ್ತಮ ಗೇಮಿಂಗ್ ಲ್ಯಾಪ್ ಟಾಪ್ ಆಗಿದೆ. ಇದರ ಬೆಲೆ 1,86,400. ಗ್ರಾಫಿಕ್ಸ್ ಗಳಿರುವ ಗೇಮ್ ಗಳನ್ನು ಆಡುವಾಗ ಅಧ್ಬುತ ಅನುಭವವನ್ನು ಈ ಲ್ಯಾಪ್ ಟಾಪ್ ನಿಮಗೆ ಒದಗಿಸುತ್ತದೆ. ಇದರಲ್ಲಿ ಹೈ ಎಂಡ್ ಎಡಿಟಿಂಗ್ ತು ರೆಂಡಿಂಗ್ ಅನ್ನು ಸುಲಭದಲ್ಲಿ ಮಾಡುವುದಕ್ಕೆ ಸಾಧ್ಯವಿದೆ. ಆದರೆ ಡಿವೈಸ್ ನ ತೂಕ 4.5 ಕೆಜಿ ಇದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯುವವರಿಗೆ ಮುರಿದುಹೋಗಿ ಬಿಡುತ್ತೋ ಎಂಬ ಭಯ ಕಾಡುತ್ತೆ ಮತ್ತು ಕಷ್ಟದಾಯಕವೂ ಆಗಿರುತ್ತದೆ.

ಪ್ರಮುಖ ವೈಶಿಷ್ಟ್ಯತೆಗಳು: 17.3-ಇಂಚಿನ FHD ಡಿಸ್ಪ್ಲೇ, 8th ಜನರೇಷನ್ ಇಂಟೆಲ್ ಕೋರ್ i7-8750H ಪ್ರೊಸೆಸರ್, 16GB, 2x8GB, DDR4, 2666MHz RAM, 512GB PCIe M.2 SSD ಕ್ಲಾಸ್ 40 + 1TB 7200RPM HDD ಸ್ಟೋರೇಜ್, 68Wh ಬ್ಯಾಟರಿ, ತೂಕ: 4.42 KG

ಆಸೂಸ್ ROG ಜೆಫಿರಸ್ ಎಂ GM501

ಆಸೂಸ್ ROG ಜೆಫಿರಸ್ ಎಂ GM501

ಇದು ಮತ್ತೊಂದು 2018 ರಲ್ಲ ಬಿಡುಗಡೆಗೊಂಡ ಗೇಮಿಂಗ್ ಲ್ಯಾಪ್ ಟಾಪ್. ಉನ್ನತ ದರ್ಜೆಯ ಇನ್ ಯಾರ್ಡ್ಸ್ ಗಳನ್ನು ಇದು ಹೊಂದಿದೆ ಮತ್ತು ನೋಡುವುದಕ್ಕೆ ಆಕರ್ಷಕ ಡಿಸೈನ್ ನ್ನು ಒಳಗೊಂಡಿದೆ. ಇದೆಲ್ಲವೂ Nvidia Max-Q GPU ಜೊತೆಗೂಡಿದ್ದು ಇದು ಪವರ್ ಎಫೀಷಿಯಂಟ್ ಆಗಿರುವ ಗ್ರಾಫಿಕ್ಸ್ ಗಳನ್ನು ಹೊಂದಿದೆ. ಇದರ ಬೆಲೆ Rs 2,36,666,ಸ್ಲಿಮ್ ಫಾರ್ಮ್ ಫ್ಯಾಕ್ಟರ್ ನಲ್ಲಿ ಉತ್ತಮ ಗೇಮಿಂಗ್ ಪ್ರದರ್ಶನಕ್ಕೆ ಇದು ಬೆಂಬಲಿಸುತ್ತದೆ. ಕೀಬೋರ್ಡ್ ಮತ್ತು ಟ್ರ್ಯಾಕ್ ಪ್ಯಾಡ್ ಗಳು ಉತ್ತಮ ಗೇಮಿಂಗ್ ಲೇಔಟ್ ನ್ನು ಹೊಂದಿದೆ.

ಪ್ರಮುಖ ವೈಶಿಷ್ಟ್ಯತೆಗಳು: 3.9-GHz ಇಂಟೆಲ್ ಕೋರ್ i7-8750H CPU, 15.6-ಇಂಚಿನ ಡಿಸ್ಪ್ಲೇ, Nvidia GeForce GTX 1070 Max-Q GPU, 16GB RAM, 256GB NVMe SSD, 1TB ಸೆಕೆಂಡರಿ SSHD, ವಿಂಡೋಸ್ 10 ಪ್ರೋ OS

ಆಸೂಸ್ ROG ಸ್ಟ್ರೈಕ್ಸ್ ಸ್ಕಾರ್ II

ಆಸೂಸ್ ROG ಸ್ಟ್ರೈಕ್ಸ್ ಸ್ಕಾರ್ II

ROG ಸ್ಟ್ರೈಕ್ಸ್ ಸ್ಕಾರ್ II GL504GS ವಿಶೇಷವಾಗಿ ಹೆಚ್ಚಿನ ರಿಫ್ರೆಶ್ ರೇಟ್ 144Hz IPS ಮಾದರಿಯ ಡಿಸ್ಪ್ಲೇ ಅನ್ನು ನೀಡುವ FPS ಆಟಗಳಿಗಾಗಿ ಮತ್ತು NVIDIA GeForce GTX 1060 ಗಾಗಿ ರಚನೆಯಾಗಿದೆ. ವಿನ್ಯಾಸದಲ್ಲಿ ಕೆಲವು ಟ್ವೀಕ್ ಗಳನ್ನು ಮಾಡಿರುವುದನ್ನು ಹೊರತುಪಡಿಸಿದರೆ ಡಿಸೈನ್ ಹಿಂದಿನ ವರ್ಷನ್ ನಂತೆಯೇ ಇದೆ. ಇದರ ಬೆಲೆ Rs 1,79,990ಯ. ಮಿಡ್ ರೇಂಜಿನ ಗೇಮಿಂಗ್ ಲ್ಯಾಪ್ ಟಾಪ್ ಆಗಿರುವ ಇದು ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ.

ಪ್ರಮುಖ ವೈಶಿಷ್ಟ್ಯತೆಗಳು: 15.6 ಇಂಚಿನ IPS ಡಿಸ್ಪ್ಲೇ ಜೊತೆಗೆ 144 HZ, GSync, ಇಂಟೆಲ್ ಕಾಫಿ ಲೇಕ್ ಕೋರ್ i7-8750H ಪ್ರೊಸೆಸರ್, 32GB DDR4 RAM, 66 Wh ಬ್ಯಾಟರಿ, RGB backlit ಕೀಬೋರ್ಡ್, 2.42 kg ತೂಕ

ಗಿಗಾಬೈಟ್ ಏರೋ 15

ಗಿಗಾಬೈಟ್ ಏರೋ 15

ದೊಡ್ಡದಾಗಿರುವ, ಭಾರವಾಗಿರುವ ಲ್ಯಾಪ್ ಟಾಪ್ ಗಳು ಮಾತ್ರವೇ ಗೇಮಿಂಗ್ ಲ್ಯಾಪ್ ಟಾಪ್ ಗಳು ಎಂದೆನಿಸಿಕೊಳ್ಳುವ ಕಾಲ ಇದೀಗ ಹೊರಟು ಹೋಗಿದೆ. ಗಿಗಾಬೈಟ್ ಏರೋ 15 ಕಾಂಪ್ಯಾಕ್ಟ್ ಬಾಡಿಯನ್ನು ಹೊಂದಿದ್ದು ಉತ್ತಮ ಗೇಮಿಂಗ್ ಲ್ಯಾಪ್ ಟಾಪ್ ಅನ್ನಿಸಿಕೊಂಡಿದೆ. 6-core 8th-ಜನರೇಷನ್ ಇಂಟೆಲ್ ಕೋರ್i7 ಪ್ರೊಸೆಸರ್ ನಿಂದ ಬ್ಯಾಕ್ಡ್ ಅಪ್ ಆಗಿದೆ. ಇದು ಕೇವಲ ಗೇಮಿಂಗ್ ಗೆ ಮಾತ್ರವಲ್ಲದೆ ನಿಮ್ಮ ಕೆಲವು ಕೆಲಸದ ಡಿಮಾಂಡ್ ಗಳನ್ನು ಕೂಡ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಮುಖ ವೈಶಿಷ್ಟ್ಯತೆಗಳು: 15.6-ಇಂಚಿನ FHD LCD ಡಿಸ್ಪ್ಲೇ, ಇಂಟೆಲ್ ಕೋರ್i7 8750H CPU, Nvidia GeForce GTX 1060 GPU, 8GB - 16GB RAM, 512GB SSD, ವಿಂಡೋಸ್ 10

ಏಸರ್ ಪ್ರಿಡೇಟರ್ ಹೆಲಿಯೋಸ್ 300

ಏಸರ್ ಪ್ರಿಡೇಟರ್ ಹೆಲಿಯೋಸ್ 300

ಏಸರ್ ಪ್ರಿಡೇಟರ್ ಹೆಲಿಯೋಸ್ 300 ಖಂಡಿತ ಹಣಕ್ಕೆ ತಕ್ಕ ಲ್ಯಾಪ್ ಟಾಪ್ ಆಗಿದೆ. ಇದು GTX 1060 6GB ಗ್ರಾಫಿಕ್ಸ್ ಕಾರ್ಡ್ ನ್ನು ಹೊಂದಿದ್ದು ಹಲವು 60 fps ನಲ್ಲಿ ಗೇಮ್ ಗಳನ್ನು ರನ್ ಮಾಡುತ್ತದೆ. ಹೆಚ್ಚಿನ ರಿಫ್ರೆಶ್ ದರ ಅಥವಾ ಜಿ-ಸಿಂಕ್ ನಂತಹ ವೈಶಿಷ್ಟ್ಯತೆಗಳೊಂದಿಗೆ ಇರುವ ಡಿಸ್ಪ್ಲೇ ಹೊಂದಿದೆ. ಕೆಲವು ಸಣ್ಣಪುಟ್ಟ ದೋಷಗಳಿದ್ದರೂ ಕೂಡ ಅದು ದೊಡ್ಡ ಪರಿಣಾಮವನ್ನೇನೂ ಮಾಡಲಾರದು.ಬಜೆಟ್ ನಲ್ಲಿ ಕೊಂಡುಕೊಳ್ಳಬಹುದಾದ ಬೆಸ್ಟ್ ಗೇಮಿಂಗ್ ಲ್ಯಾಪ್ ಟಾಪ್ ಗಳಲ್ಲಿ ಇದೂ ಕೂಡ ಒಂದು.

ಪ್ರಮುಖ ವೈಶಿಷ್ಟ್ಯತೆಗಳು: ಇಂಟೆಲ್ ಕೋರ್i7-7700HQ CPU, Nvidia GeForce GTX 1060 6GB GPU, 16GB DDR4 RAM, 15.6-ಇಂಚಿನ FHD 60Hz, 256GB M.2 SATA SSD ಸ್ಟೋರೇಜ್, 48 Whr, 2.6 kg ತೂಕ

Most Read Articles
Best Mobiles in India

Read more about:
English summary
Getting a perfect gaming laptop might be a huge hassle back in the day, but things have definitely changed now. Instead of having to pick either a low-quality and cheap or decent and overpriced, we now have a wide range of great gaming notebooks from industry giants to choose from.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more