Home
ಕಂಪ್ಯೂಟರ್‌‌

Moto: ಮೊಟೊ ಆಟ ಶುರು.. ಭಾರತದಲ್ಲಿ ಮೊದಲ ಲ್ಯಾಪ್‌ಟಾಪ್ ಬಿಡುಗಡೆ; ದುಬಾರಿ ಬೆಲೆ.. ವಿಶೇಷತೆಗಳೇನು?

ಮೊಟೊರೊಲಾ ಇಂದು ಭಾರತದಲ್ಲಿ ತನ್ನ ಮೊದಲ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದನ್ನು 70,000 ರೂ.ಗಳ ಬಜೆಟ್ ವಿಭಾಗದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹೌದು, ಬಹುನಿರೀಕ್ಷಿತ ಮೋಟೋ ಬುಕ್ 60 ಲ್ಯಾಪ್‌ಟಾಪ್ (Moto Book 60 Laptop) ಅಧಿಕೃತವಾಗಿ ಲಾಂಚ್ ಆಗಿದೆ. ಈ ಲ್ಯಾಪ್‌ಟಾಪ್ ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್, ಸ್ಮಾರ್ಟ್ ಸಂಪರ್ಕ ಮತ್ತು ಸೂಪರ್ ಬ್ಯಾಟರಿಯನ್ನು ಹೊಂದಿದೆ. ಲ್ಯಾಪ್‌ಟಾಪ್ ಪ್ರಿಯರ ಇದನ್ನು ಖರೀದಿಸಲು ಕಾಯುತ್ತಿದ್ದಾರೆ. ಈ ಹೊಸ ಮೋಟೋ ಬುಕ್ 60 ಲ್ಯಾಪ್‌ಟಾಪ್ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ದೈತ್ಯ ಏಸರ್‌ ಸೇರಿದಂತೆ ದೊಡ್ಡ ಲ್ಯಾಪ್‌ಟಾಪ್ ಉತ್ಪಾದನಾ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಮತ್ತೊಂದೆಡೆ ನವೀನ ಮತ್ತು ವಿಶ್ವಾಸಾರ್ಹ ಫೋನ್‌ಗಳಿಗೆ ಹೆಸರುವಾಸಿಯಾದ ಮೊಟೊರೊಲಾ ಇದೀಗ, ಲ್ಯಾಪ್‌ಟಾಪ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅದರಂತೆ, ಮೊಟೊರೊಲಾ ತನ್ನ ಮೊದಲ ಲ್ಯಾಪ್‌ಟಾಪ್ ಮೋಟೋ ಬುಕ್ 60 ಅನ್ನು ಬಿಡುಗಡೆ ಮಾಡಿದೆ. ಇದು ಮಾರುಕಟ್ಟೆಯಲ್ಲಿರುವ ದೊಡ್ಡ ಬ್ರ್ಯಾಂಡ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

ಭಾರತದಲ್ಲಿ Moto Book 60 ಲ್ಯಾಪ್‌ಟಾಪ್ ಲಾಂಚ್; ದುಬಾರಿ ಬೆಲೆ.. ವಿಶೇಷತೆಗಳೇನು?

ಮೊಟೊ ಬುಕ್ 60 ವೈಶಿಷ್ಟ್ಯಗಳು

ಮೊಟೊ ಬುಕ್ 60 (ಕೋರ್ ಅಲ್ಟ್ರಾ 5) ಲ್ಯಾಪ್‌ಟಾಪ್ ಮತ್ತು ಮೋಟೋ ಬುಕ್ 60 (ಕೋರ್ ಅಲ್ಟ್ರಾ 7) ಲ್ಯಾಪ್‌ಟಾಪ್ ನಡುವಿನ ವ್ಯತ್ಯಾಸವೆಂದರೆ ಪ್ರೊಸೆಸರ್, ಇತರೆ ಎಲ್ಲಾ ವಿಶೇಷತೆಗಳು ಒಂದೇ ಆಗಿವೆ. ಮೋಟೋ ಬುಕ್ 60 ಲ್ಯಾಪ್‌ಟಾಪ್ 14 ಇಂಚಿನ 2.8K OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಡಾಲ್ಬಿ ವಿಷನ್ ಮತ್ತು HDR ಬೆಂಬಲದೊಂದಿಗೆ ಬರುತ್ತದೆ.

ಮೊಟೊ ಬುಕ್ 60 ಲ್ಯಾಪ್‌ಟಾಪ್ ಇಂಟೆಲ್ ಕೋರ್ 7 240H ಮತ್ತು ಕೋರ್ 5 210H ಪ್ರೊಸೆಸರ್ ಆಯ್ಕೆಯಲ್ಲಿ ಲಭ್ಯವಿದೆ. ಇದು 32GB RAM ಮತ್ತು 1TB SSD ವರೆಗಿನ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 11 ಹೋಮ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಲ್ಯಾಪ್ 60Wh ಬ್ಯಾಟರಿ ಮತ್ತು 65W ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ.

ಸ್ಮಾರ್ಟ್ ಕನೆಕ್ಟ್ ವೈಶಿಷ್ಟ್ಯಗಳು ಲಭ್ಯ

ಮೊಟೊ ಬುಕ್ 60 ಲ್ಯಾಪ್‌ಟಾಪ್ ಡಾಲ್ಬಿ ಅಟ್ಮಾಸ್ ಸ್ಟೀರಿಯೊ ಸ್ಪೀಕರ್‌ಗಳು, 1080p ಗೌಪ್ಯತೆ ಶಟರ್ ವೆಬ್‌ಕ್ಯಾಮ್, ಐಆರ್ (IR) ಕ್ಯಾಮೆರಾ ಹೊಂದಿದೆ. ಇದರೊಂದಿಗೆ ವಿಂಡೋಸ್ ಹಲೋ ಫೇಸ್ ರೆಕಗ್ನಿಷನ್ ಮತ್ತು ಮಿಲಿಟರಿ ದರ್ಜೆಯ ಬಾಳಿಕೆ (MIL-STD-810H) ಸಹ ಪಡೆದಿದೆ. ಹೆಚ್ಚುವರಿಯಾಗಿ, ಸ್ಮಾರ್ಟ್ ಕನೆಕ್ಟ್ ವೈಶಿಷ್ಟ್ಯಗಳು ಲಭ್ಯವಿದೆ. ಈ ಲ್ಯಾಪ್‌ಟಾಪ್ ಸ್ಮಾರ್ಟ್ ಕ್ಲಿಪ್‌ಬೋರ್ಡ್, ಫೈಲ್ ಟ್ರಾನ್ಸ್‌ಫರ್ ಮತ್ತು ಸ್ವೈಪ್ ಟು ಶೇರ್ ಸೇರಿದಂತೆ ಇತರೆ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು

ಮೊಟೊ ಬುಕ್ 60 ಲ್ಯಾಪ್‌ಟಾಪ್ 3.5 ಎಂಎಂ ಆಡಿಯೊ ಜ್ಯಾಕ್ ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 7, ಬ್ಲೂಟೂತ್ 5.4, ಎರಡು ಯುಎಸ್‌ಬಿ ಟೈಪ್-ಎ 3.2 ಜೆನ್ 1, ಎರಡು ಯುಎಸ್‌ಬಿ ಟೈಪ್ ಸಿ 3.2 ಜೆನ್ 1, ಎಚ್‌ಡಿಎಂಐ ಪೋರ್ಟ್, ಡಿಸ್ಪ್ಲೇಪೋರ್ಟ್ 1.4, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಹೊಂದಿದೆ. ಒಟ್ಟಾರೆಯಾಗಿ, ಮೋಟೋ ಬುಕ್ 60 ಪ್ರೀಮಿಯಂ ಲ್ಯಾಪ್‌ಟಾಪ್ ಆಗಿದೆ.

ಭಾರತದಲ್ಲಿ Moto Book 60 ಲ್ಯಾಪ್‌ಟಾಪ್ ಲಾಂಚ್; ದುಬಾರಿ ಬೆಲೆ.. ವಿಶೇಷತೆಗಳೇನು?

ಮೊಟೊ ಬುಕ್ 60 ಬೆಲೆ ಮತ್ತು ಲಭ್ಯತೆ

ಮೊಟೊ ಬುಕ್ 60 (ಕೋರ್ ಅಲ್ಟ್ರಾ 7) 16GB + 1GB ಸ್ಟೋರೇಜ್ = 78,990 ರೂ.
ಮೊಟೊ ಬುಕ್ 60 (ಕೋರ್ ಅಲ್ಟ್ರಾ 7) 16GB + 512GB ಸ್ಟೋರೇಜ್ = 74,990 ರೂ.
ಮೊಟೊ ಬುಕ್ 60 (ಕೋರ್ ಅಲ್ಟ್ರಾ 5) 16GB + 512GB ಸ್ಟೋರೇಜ್ = 66,990 ರೂ.

ಮೊಟೊ ಬುಕ್ 60 ಲ್ಯಾಪ್‌ಟಾಪ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದು ಕಂಪನಿಯ ಮೊದಲ ಲ್ಯಾಪ್‌ಟಾಪ್ ಆಗಿದೆ. ಇದು ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈ ಲ್ಯಾಪ್‌ಟಾಪ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ನೀವು ಹಸಿರು ಮತ್ತು ವೆಡ್ಜ್ ವುಡ್ ಬಣ್ಣದಲ್ಲಿ ಖರೀದಿಸಬಹುದು. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ, 16GB + 1GB ಸ್ಟೋರೇಜ್ ಅನ್ನು ರಿಯಾಯಿತಿಯೊಂದಿಗೆ 73,999 ರೂ.ಗೆ ಮಾರಾಟ ಮಾಡಲಿದೆ.

Best Mobiles in India

English summary
Moto Book 60 Laptop Launched in India With Up to Intel Core 7 240H Processor and 2.8K 120Hz OLED Display
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+