Home
ಕಂಪ್ಯೂಟರ್‌‌

Moto: ಬಲಿಷ್ಠ ಟ್ಯಾಬ್ ಬಿಡುಗಡೆ; 10,200mAh ಬ್ಯಾಟರಿ.. 12.7 ಇಂಚಿನ ಡಿಸ್ಪ್ಲೇ.. 2000 ರಿಯಾಯಿತಿ.. ಬೆಲೆ ಎಷ್ಟು?

ಮೊಟೊರೊಲಾ ಇಂದು ಭಾರತದಲ್ಲಿ ಹೊಚ್ಚ ಹೊಸ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಇದು ಬಜೆಟ್ ವಿಭಾಗದಲ್ಲಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು, ಬಹುನಿರೀಕ್ಷಿತ ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ (Moto Pad 60 Pro Tablet) ಅಧಿಕೃತವಾಗಿ ರಿಲೀಸ್ ಆಗಿದೆ. ಈ ಟ್ಯಾಬ್ಲೆಟ್ ಸ್ಟೈಲಿಶ್, ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈಗಾಗಲೇ ಟ್ಯಾಬ್ ಪ್ರಿಯರ ಗಮನ ಸೆಳೆದಿದೆ. ಬನ್ನಿ, ಈ ಹೊಸ ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆ ಬಗ್ಗೆ ತಿಳಿಯೋಣ.

ಕಂಪನಿಯು ಭರವಸೆ ನೀಡಿದಂತೆಯೇ ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದೆ. ಈ ಟ್ಯಾಬ್ಲೆಟ್‌ನ ವಿಶೇಷತೆಗಳೆಂದರೆ, ಇದು 12.7 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಟ್ಯಾಬ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 4nm ಪ್ರೊಸೆಸರ್ ಹೊಂದಿದೆ. ಈ ಟ್ಯಾಬ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12GB RAM + 256GB ಸ್ಟೋರೇಜ್, 10200mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ Moto Pad 60 Pro ಟ್ಯಾಬ್ ಲಾಂಚ್; 2000 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ ಕ್ವಾಡ್ JBL ಸ್ಪೀಕರ್ ಸಿಸ್ಟಮ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲ ಪಡೆದಿದೆ. ಈ ಟ್ಯಾಬ್ ಅಲ್ಟ್ರಾ ಲೋ ಲೇಟೆನ್ಸಿ, 4096 ಮಟ್ಟದ ಒತ್ತಡ ಪತ್ತೆ, ಟಿಲ್ಟ್ ಪತ್ತೆ, ಪಾಮ್ ರಿಜೆಕ್ಷನ್ ಸಹ ಒಳಗೊಂಡಿದೆ. ಇದು 35 ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಮೊಟೊ ಪೆನ್ ಪ್ರೊನೊಂದಿಗೆ ಬರುತ್ತದೆ. ಕ್ರಾಸ್ ಕಂಟ್ರೋಲ್ ಈ ಟ್ಯಾಬ್ಲೆಟ್ ಅನ್ನು ಪಿಸಿಯೊಂದಿಗೆ ಸರಾಗವಾಗಿ ನಿರ್ವಹಿಸಲು ಅನುಮತಿಸುತ್ತದೆ. ನೀವು ಅಪ್ಲಿಕೇಶನ್ ಚಟುವಟಿಕೆಗಳನ್ನು ಸೆಕೆಂಡುಗಳಲ್ಲಿ ದೊಡ್ಡ ಡಿಸ್ಪ್ಲೇಗೆ ವರ್ಗಾಯಿಸಬಹುದು.

ಮೊಟೊ ಪ್ಯಾಡ್ 60 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ 12.7 ಇಂಚಿನ LTPS ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 2,944 x 1,840 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 273PPI ಮತ್ತು 400 ಇಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಟ್ಯಾಬ್ ಆಂಡ್ರಾಯ್ಡ್ 14 ಓಎಸ್ (ಆಂಡ್ರಾಯ್ಡ್ 16 ವರೆಗೆ ಅಪ್‌ಗ್ರೇಡ್) ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಟ್ಯಾಬ್ಲೆಟ್ ಮಾಲಿ G615 ಜಿಪಿಯು ಸಹ ಹೊಂದಿದೆ.

RAM ಮತ್ತು ಸ್ಟೋರೇಜ್

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ 8GB RAM ಮತ್ತು 12GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಟ್ಯಾಬ್‌ನಲ್ಲಿ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ 13 ಮೆಗಾಪಿಕ್ಸೆಲ್ AF ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಶ್ ಜೊತೆಗೆ ಬರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ FF ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ 10200mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಯುಎಸ್‌ಬಿ ಟೈಪ್ ಸಿ ಆಡಿಯೋ, ವೈ-ಫೈ 6E, ಬ್ಲೂಟೂತ್ v5.3, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊಟೊ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ ಬೆಲೆ

ಮೋಟೋ ಪ್ಯಾಡ್ 60 ಪ್ರೊ ಟ್ಯಾಬ್ಲೆಟ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಟ್ಯಾಬ್‌ನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 26,999 ರೂ. ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ರೂಪಾಂತರವನ್ನು 28,999 ರೂ.ಗೆ ಪರಿಚಯಿಸಲಾಗಿದೆ. ನೀವು ಇದನ್ನು ಪ್ಯಾಂಟೋನ್ ಕಂಚಿನ ಹಸಿರು ಬಣ್ಣದಲ್ಲಿ ಖರೀದಿಸಬಹುದು. ಈ ಟ್ಯಾಬ್ಲೆಟ್ ಏಪ್ರಿಲ್ 23 ರಿಂದ ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ (motorola.in) ಮೂಲಕ ಮಾರಾಟವಾಗಲಿದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ 2000 ರೂ.ಗಳ ಬ್ಯಾಂಕ್ ಆಫರ್ ಘೋಷಿಸಿದೆ.

ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್‌ ಬೆಲೆ

ಒನ್‌ಪ್ಲಸ್‌ ಕಂಪನಿಯು ಭಾರತದಲ್ಲಿ ಒನ್‌ಪ್ಲಸ್ ಪ್ಯಾಡ್ 2 (OnePlus Pad 2) ಟ್ಯಾಬ್ಲೆಟ್‌ ಅನ್ನು ಪರಿಚಯಿಸಿದೆ. ಇದು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಟ್ಯಾಬ್‌ನ ಬೆಲೆ 39,999 ರೂ. ಆಗಿದೆ. ಇದು 8GB + 128GB ಸ್ಟೋರೇಜ್‌ ಆಯ್ಕೆ ಹೊಂದಿದೆ. ಇದು ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ 2000 ರೂ. ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ನೀವು 37,999 ರೂ.ಗೆ ಖರೀದಿಸಬಹುದು. ಈ ಟ್ಯಾಬ್ಲೆಟ್‌ನ 12GB + 256GB ಸ್ಟೋರೇಜ್‌ ವೇರಿಯಂಟ್‌ ಬೆಲೆ 42,999 ರೂ. ಇದೆ. ನೀವು ಶೇ.10 ರಷ್ಟು ರಿಯಾಯಿತಿ ಮತ್ತು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಇದು ನಿಂಬಸ್ ಗ್ರೇ ಬಣ್ಣದಲ್ಲಿ ಬರುತ್ತದೆ. ಈ ಟ್ಯಾಬ್‌ನ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಹೊಸ Moto Pad 60 Pro ಟ್ಯಾಬ್ ಲಾಂಚ್; 2000 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಒನ್‌ಪ್ಲಸ್ ಪ್ಯಾಡ್ 2 ವೈಶಿಷ್ಟ್ಯಗಳು

ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್‌ 12.1 ಇಂಚಿನ 3K ಐಪಿಎಸ್ ಎಲ್‌ಸಿಡಿ ಡಿಸ್ಲ್ಪೇ ಹೊಂದಿದೆ. ಇದು 2,120 x 3,000 ಪಿಕ್ಸೆಲ್‌ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಟ್ಯಾಬ್ಲೆಟ್ 144Hz ರಿಫ್ರೆಶ್ ದರ ಮತ್ತು 540Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್ ಸಪೋರ್ಟ್ ಪಡೆದಿದೆ. ಈ ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಟ್ಯಾಬ್ ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್ 14ನಲ್ಲಿ ಕೆಲಸ ಮಾಡುತ್ತದೆ.

ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಒನ್‌ಪ್ಲಸ್ ಟ್ಯಾಬ್ಲೆಟ್‌ 9510mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್‌ ಮಾಡಲು, 67W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಟ್ಯಾಬ್ಲೆಟ್‌ 8GB + 128GB ಸ್ಟೋರೇಜ್‌ ಮತ್ತು 12GB RAM + 256GB ಸ್ಟೋರೇಜ್‌ ಆಯ್ಕೆ ಹೊಂದಿದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್‌ ವಿಸ್ತರಿಸಬಹುದು. ಇದು 6 ಸ್ಪೀಕರ್ ಸೆಟಪ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4, ವೈ-ಫೈ 7, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Moto Pad 60 Pro With MediaTek Dimensity 8300 and 10200mAh battery Launched in India: price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+