Subscribe to Gizbot

ಮೋಟೋರೋಲಾ ಮೋಟೋ 360 ಮುಂದಿನ ಆವೃತ್ತಿ ಶೀಫ್ರದಲ್ಲಿ

Written By:

ಮೋಟೋರೋಲಾ ತನ್ನ ಮೋಟೋ 360 ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿ ಕೆಲವು ತಿಂಗಳುಗಳಾಗಿವೆ. ಆದರೆ ವದಂತಿಗಳ ಪ್ರಕಾರ ನೆಕ್ಸ್ಟ್ ಜನರೇಶನ್ ಮೋಟೋ 360 ಸದ್ಯದಲ್ಲಿಯೇ ತನ್ನ ಹಾಜರಾತಿಯನ್ನು ದಾಖಲಿಸಲದೆ. ಮೋಟೋ 360 ಯ ಸಕ್ಸೆಸರ್ ಎಂದೇ ಪರಿಗಣಿತವಾಗಿರುವ ಈ ಡಿವೈಸ್ 2015 ರಲ್ಲಿ ತನ್ನ ಪ್ರಸ್ತುತತೆಯನ್ನು ಉಂಟುಮಾಡಲಿದೆ.

ಇನ್ನು ನೆಕ್ಸ್ಟ್ ಮೋಟೋ 360 "ಹೆಚ್ಚು ಸುಂದರ ಮತ್ತು ಗಡಿಯಾರದಂತೆ ಕಂಡುಬರಲಿದೆ" ಆದರೆ ಮೋಟೋ 360 2 ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನೂ ತಿಳಿದು ಬಂದಿಲ್ಲ. ಮೋಟೋರೋಲಾದ ಹೊಸ ಡಿವೈಸ್‌ಗಳಾದ ಮೋಟೋ ಜಿ (2014), ಮೋಟೋ ಇ (2014), ಮೋಟೋರೋಲಾ ತಯಾರಿಸಿದ ನೆಕ್ಸಸ್ 6 ಮತ್ತು ಫಸ್ಟ್ ಜನರೇಶನ್ ಮೋಟೋ 360 ಮೊದಲಾದ ಡಿವೈಸ್‌ಗಳು ರಷ್ಯಾಕ್ಕೆ ಮುಂದಿನ ವರ್ಷಕ್ಕಿಂತ ಮೊದಲೇ ಕಾಲಿಡಲಿದೆ, ಹಾಗೂ ಮೋಟೋ 360 ನ ಸೆಕೆಂಡ್ ಜನರೇಶನ್ ಮುಂದಿನ ತಿಂಗಳಲ್ಲೇ ಆಗಮಿಸಲಿದೆ.

ಮೋಟೋರೋಲಾ ಮೋಟೋ 360 ವಿಶೇಷತೆ ಏನು?

ಮೋಟೋ 360 ಯ ಹೊಸ ಆವೃತ್ತಿಯ ಮೇಲೆ ರಹಸ್ಯವಾಗಿ ಮೋಟೋರೋಲಾ ಕೆಲವು ತಿಂಗಳಿಂದೀಚೆಗೆ ಕಾರ್ಯನಿರ್ವಹಿಸುತ್ತಿದ್ದು, ಸೆಕೆಂಡ್ ಜನರೇಶನ್ ಮೋಟೋ 360 ಪೂರ್ಣ ವೃತ್ತಾಕಾರ ಡಿಸ್‌ಪ್ಲೇ, ಅಂದರೆ ಎಲ್‌ಜಿ ಜಿ ವಾಚ್ ಆರ್‌ನಂತೆ ಬರಲಿದೆ.

ಮೋಟೋರೋಲಾ ಇತ್ತೀಚೆಗಷ್ಟೇ ಆಂಡ್ರಾಯ್ಡ್ ವೇರ್ 4.4W.2 ಅನ್ನು ಮೋಟೋ 360 ಗೆ ಘೋಷಿಸಿದೆ. ಇದು ಮ್ಯೂಸಿಕ್ ಪ್ಲೇಬ್ಯಾಕ್, ಜಿಪಿಎಸ್ ಬೆಂಬಲ ಮತ್ತು ಬಗ್ ಫಿಕ್ಸ್‌ಗಳಿಗೆ ಬೆಂಬಲವನ್ನು ಒದಗಿಸಲಿದೆ.

ಯುಸ್‌ನಲ್ಲಿ ಸ್ಮಾರ್ಟ್‌ವಾಚ್ ಮಾರಾಟವನ್ನು ಮೋಟೋರೋಲಾ ಮೋಟೋ 360 ತನ್ನ ವಶಕ್ಕೆ ತೆಗೆದುಕೊಂಡಿದ್ದು, ಭಾರತದಲ್ಲಿ ಮಾತ್ರ ಈ ವಾಚ್ ಲಭ್ಯತೆ ಇಲ್ಲ. ಸಪ್ಟೆಂಬರ್‌ನಲ್ಲೇ ಈ ವಾಚ್ ತನ್ನ ವಿಶಿಷ್ಟತೆಯ ಮೂಲಕ ಮನಗೆದ್ದಿದ್ದು ಮಾರಾಟ ಲಭ್ಯತೆಯನ್ನು ಅಕ್ಟೋಬರ್‌ನಲ್ಲಿ ದೃಢಪಡಿಸಿತ್ತು.

ಮೋಟೋರೋಲಾ ಹೇಳುವಂತೆ ಮೋಟೋ 360 ಫ್ಲಿಪ್‌ಕಾರ್ಟ್‌ನಲ್ಲಿ ಸೀಮಿತ ಸ್ಟಾಕ್ ಅನ್ನು ಪಡೆದುಕೊಂಡಿದೆ. ಇನ್ನು ಎರಡು ವಾರಗಳಲ್ಲಿ ಹೆಚ್ಚಿನ ಸ್ಟಾಕ್ ಅನ್ನು ಸೇರಿಸಲಾಗುತ್ತದೆ. ಇನ್ನು ಸ್ಟಾಕ್‌ನ ಅಭಾವ ವಾಚ್‌ಗಿರುವ ಬೇಡಿಕೆಯನ್ನು ಏರಿಸಿದೆ.

ಇನ್ನು ಮೋಟೋ 360 ನ ಬೆಲೆಯ ಕಡೆಗೆ ನೋಡುವುದಾದರೆ ಇದು ರೂ 17,999 ಕ್ಕೆ ಲಭ್ಯವಿದ್ದು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಬೆಲೆಯ ಆಂಡ್ರಾಯ್ಡ್ ವೇರ್ ಡಿವೈಸ್ ಆಗಿದೆ. ವಾಚ್ 1.56 ಇಂಚಿನ ವೃತ್ತಾಕಾರ 320x290ಪಿ ಡಿಸ್‌ಪ್ಲೇಯನ್ನು ಹೊಂದಿದೆ, ಮತ್ತು ಇದರಲ್ಲಿ T1 0MPA 3 ಪ್ರೊಸೆಸರ್ ಇದೆ. ಇನ್ನು ಫೋನ್‌ನ ಇತರ ಅಂಶಗಳತ್ತ ನೋಡುವುದಾದರೆ ಇದು 512 MB RAM, 4 ಜಿಬಿ ಆಂತರಿಕ ಸಂಗ್ರಹ, 320 mAh ಬ್ಯಾಟರಿ, ಎರಡು ಮೈಕ್ರೋಫೋನ್ಸ್, ಹಾರ್ಟ್ ರೇಟ್ ಸೆನ್ಸಾರ್, ಪೆಡೋಮೀಟರ್ ಮತ್ತು ಬ್ಲ್ಯೂಟೂತ್ 4.0 ವನ್ನು ಪಡೆದುಕೊಂಡಿದೆ.

English summary
This article tells about Motorola Moto 360 Successor Coming in 2015: But What About the Current One.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot