ಮೌಸ್ ಕಂಪನಿಯ ಹಲೋ ಕಿಟ್ಟಿ ಕಿಡ್ ಲ್ಯಾಪ್ ಟಾಪ್

Posted By: Staff
ಮೌಸ್ ಕಂಪನಿಯ ಹಲೋ ಕಿಟ್ಟಿ ಕಿಡ್ ಲ್ಯಾಪ್ ಟಾಪ್
ಅತ್ಯಧಿಕ ಗುಣಮಟ್ಟದ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಮೌಸ್ ಕಂಪ್ಯೂಟರ್ ಜನಪ್ರಿಯ. ಮೌಸ್ ಕಂಪ್ಯೂಟರ್ ಉತ್ಪನ್ನಗಳ ಗುಣಮಟ್ಟ ಅತ್ಯಧಿಕವಾಗಿದ್ದರೂ ದರ ಮಾತ್ರ ಹೆಚ್ಚು ದುಬಾರಿಯಾಗಿರುವುದಿಲ್ಲ ಅನ್ನೋದು ವಿಶೇಷ. ಇದೀಗ ಕಂಪನಿಯು ಜಾಗತಿಕ ಮಾರುಕಟ್ಟೆಗೆ LuvBook S Hello Kitty Kid ಲ್ಯಾಪ್ ಟಾಪ್ ಪರಿಚಯಿಸಿದೆ.

ಈ ಲ್ಯಾಪ್ ಟಾಪ್ ವಿನ್ಯಾಸ ಆಕರ್ಷಕವಾಗಿದೆ. ಅಲ್ಯುಮಿನಿಯಂ ಬಾಡಿ ಪ್ಯಾನೆಲ್ ಕೆಂಪು ಬಣ್ಣದ ಪೇಂಟ್ ಹೊಂದಿದ್ದು, ನೋಡಲು ಮುದ್ದಾಗಿ ಕಾಣುತ್ತದೆ. ಹಲೋ ಕಿಟ್ಟಿ ಮುಖದ ಲೋಗೊ 1,100 ಸ್ವರೊಸ್ಕಿ ಸ್ಟೋನ್(Swarovski stone) ನಿಂದ ನಿರ್ಮಿಸಲಾಗಿದೆ.

ಮೌಸ್ ಕಂಪ್ಯೂಟರ್ ಹೊರತಂದ ಲವ್ ಬುಕ್ ಎಸ್ ಹಲೋ ಕಿಟ್ಟಿ ಕಿಡ್ ಲ್ಯಾಪ್ ಟಾಪ್ ನಲ್ಲಿ ಸಾಕಷ್ಟು ಆಕರ್ಷಕ ಫೀಚರು ಮತ್ತು ವಿಶೇಷತೆಗಳಿವೆ.

ಫೀಚರುಗಳು

* 11.6 ಇಂಚಿನ ಸ್ಕ್ರೀನ್ ಡಿಸ್ ಪ್ಲೇ, 1366 x 768 ರೆಸಲ್ಯೂಷನ್

* ಇಂಟೆಲ್ ಕೋರ್ ಐ3-2330 ಡ್ಯೂಯಲ್ ಕೋರ್ ಪ್ರೊಸೆಸರ್, 2.20 ಗಿಗಾಹರ್ಟ್ಸ್

* ಇನ್ ಬುಲ್ಟ್ ಇಂಟೆಲ್ ಕೋರ್ ಐ3-2330ಎಂ ಡ್ಯೂಯಲ್ ಕೋರ್ ಪ್ರೊಸೆಸರ್

* 4 ಜಿಬಿ ಡಿಡಿಆರ್3 RAM ಸಂಗ್ರಹ ಸಾಮರ್ಥ್ಯ

* 500 ಜಿಬಿ ಎಚ್ ಡಿಡಿ ಸಂಗ್ರಹದ ಹಾರ್ಡ್ ಡ್ರೈವ್

* ಬ್ಲೂಟೂಥ್, 802.11 b/ g/ n ನಿಸ್ತಂತು ಸಂಪರ್ಕ

* 3.0 ಯುಎಸ್ ಬಿ ಪೋರ್ಟ್, ಎರಡು ಸ್ಟಾಂಡರ್ಡ್ 2.0 ಯುಎಸ್ ಬಿ

* ಮೈಕ್ರೊಫೋನ್ ಮತ್ತು ಹೆಡ್ ಫೋನ್ ಜಾಕ್

* ವಿಡಿಯೋ ಔಟ್ ಪುಟ್ ಗಾಗಿ ಎಚ್ ಡಿಎಂಐ ಪೋರ್ಟ್

* ವಿಂಡೋಸ್ 7 ಹೋಮ್ ಪ್ರೀಮಿಯಂ 64 ಬಿಟ್ ಅಪರೇಟಿಂಗ್ ಸಿಸ್ಟಮ್

* 1.5 ಕೆಜಿ ತೂಕ

* 36 ಮಿ.ಮೀ. ದಪ್ಪ

* 5.3 ಗಂಟೆ ಬ್ಯಾಟರಿ ಬಾಳಿಕೆ

* ಒಂದು ವರ್ಷದ ವಾರೆಂಟಿ

LuvBook S Hello Kitty Kid ಲ್ಯಾಪ್ ಟಾಪ್ ಐ3 ಪ್ರೊಸೆಸರ್ ಆಯ್ಕೆಯಲ್ಲಿ ದೊರಕುತ್ತದೆ. ಇದರ ದರ ಸುಮಾರು 30 ಸಾವಿರ ರುಪಾಯಿ. ಇದರಲ್ಲಿ ಉನ್ನತ ಆವೃತ್ತಿ ದರ ಐ7 ಪ್ರೊಸೆಸರ್ ಹೊಂದಿದ್ದು ದರ ಸುಮಾರು 45 ಸಾವಿರ ರುಪಾಯಿ ಇದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot