ಪ್ರತಿಷ್ಠಿತ ಕಂಪ್ಯೂಟರ್ ತಯಾರಿಕಾ ಸಂಸ್ಥೆಯಾದ ಎಂಎಸ್ಐ ತನ್ನ್ಯ ನೂತನ ಆಲ್ ಇನ್ ವನ್ ಮಾದರಿಯ ವಿಂಡ್‌ಟಾಪ್ AP1612 ಕಂಪ್ಯೂಟರ್ ಅನಾವರಣ ಗೊಳಿಸಿದೆ. ವೈಯುಕ್ತಿಕ ಬಳಕೆ ಹಾಗೂ ಕಚೇರಿ ಬಳಕೆಗಾಗಿ ಸಿದ್ಧಪಡಿಸಲಾಗಿರುವ ಈ ಆಲ್ ಇನ್ ವನ್ ಕಂಪ್ಯೂಟರ್ 15.6-ಇಂಚಿನ ಸ್ಕ್ರೀನ್ ಹೊಂದಿದ್ದು ಇಂಟೆಲ್ ಸೆಲ್ರಾನ್ ಚಾಲಿತ B830 ಪ್ರೊಸೆಸರ್ ( ಡ್ಯುಯೆಲ್-ಕೋರ್, 1.80 GHz, 2 MB L3 cache) ನಿಂದ ಕೂಡಿದೆ.
ಪ್ರೊಸೆಸರ್ Intel HM65 ಎಕ್ಸ್‌ಪ್ರೆಸ್ ಚಿಪ್‌ಸೆಟ್‌ನಿಂದ ಕೂಡಿದೆ, 2 GB ಯ DDR3-1333 MHz ಮೆಮೊರಿ (4 GB ವರೆಗಿನ ವಿಸ್ತರಣೆ), ಹಾಗೂ ಇಂಟೆಲ್ HD ಗ್ರಾಫಿಕ್ಸ್. 5.6-ಇಂಚಿನ LED-ಬ್ಯಾಕ್ ಲೈಟ್ LCD ಸ್ಕ್ರೀನ್, 1366 x 768 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ. ರೆಸಿಸಸ್ಟೀವ್ ಟಚ್‌ಸ್ಕ್ರೀನ್ ಲೇಯರ್ ಹೊಂದಿದೆ. A 250 GB SATA 3 Gb/s HDD ಏಕಮಾತ್ರ ಸ್ಟೋರಿಂಗ್ ಸಾಧನವಾಗಿದೆ.
ವಿಂಡ್‌ಟಾಪ್ AP1612 ನಲ್ಲಿ 2GB ಎಥರ್ನೆಟ್ ಇಂಟರ್ಫೇಸ್, 802.11 b/g/n WLAN ಇಂಟರ್‌ಫೇಸ್, 4 ಇನ್ 1 ಕಾರ್ಡ್‌ರೀಡರ್ (SD+MS+MMC+XD), ಹಾಗೂ ಸಮಾರ್ಟ್‌ರೀಡರ್ ಹೊಂದಿದೆ.
ಅಲ್ಲದೆ COM ಹಾಗೂ LPT ಇಂಟರ್‌ಫೇಸ್. 320p ವೆಬ್-ಕ್ಯಾಮೆರಾ ಸೇರಿದಂತೆ 3W ಸ್ಟೀರಿಯೋ ಸ್ಪೀಕರ್. ವಿಂಡೋಸ್7 ಹೊಮ್ ಪ್ರೀಮಿಯಂ 64-ಬೈಟ್ ಪ್ರಿ ಇನ್ಸ್ಟಾಲ್ ಆಹಿರುತ್ತದೆ. ನೂತನ ಆಲ್ ಇನ್ ವನ್ ಕಂಪ್ಯೂಟರ್‌ನ ದರ ಕುರಿತಾಗಿ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ.