ಅರ್ಚೊಸ್ ಟ್ಯಾಬ್ಲೆಟ್ ಖರೀದಿಗೆ ಹೆಚ್ಚು ದುಡ್ಡು ಬೇಡ್ವಂತೆ!

Posted By: Staff
ಅರ್ಚೊಸ್ ಟ್ಯಾಬ್ಲೆಟ್ ಖರೀದಿಗೆ ಹೆಚ್ಚು ದುಡ್ಡು ಬೇಡ್ವಂತೆ!
ಟ್ಯಾಬ್ಲೆಟ್ ಕಂಪ್ಯೂಟರ್ ಖರೀದಿಗೆ ಮುನ್ನ ಅದರ ಅವಶ್ಯಕತೆ ತಿಳಿದುಕೊಳ್ಳುವುದು ಸೂಕ್ತ. ಯಾಕೆಂದರೆ ಟ್ಯಾಬ್ಲೆಟ್ ಕಂಪ್ಯೂಟರುಗಳು ಕೆಲವು ಕ್ಷೇತ್ರಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಗೆ ಬರುತ್ತವೆ. ಕೆಲವೊಂದರಲ್ಲಿ ಮಾರುಕಟ್ಟೆ ಎಕ್ಸಿಕ್ಯೂಟಿವ್ ಗಳಿಗೆ ಬೇಕಾದ ಫೀಚರುಗಳಿದ್ದರೆ, ಇನ್ನು ಕೆಲವು ಡಾಕ್ಟರ್, ಎಂಜಿನಿಯರುಗಳಿಗೆ ಮಾತ್ರ ಸಂಪೂರ್ಣ ಉಪಯೋಗಕಾರಿ.

ಆದರೆ ಸಾಮಾನ್ಯ ಜನರ ಬಳಕೆಗೆ ಸೂಕ್ತವಾಗುವಂತಹ ಟ್ಯಾಬ್ಲೆಟೊಂದು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಟ್ಯಾಬ್ಲೆಟ್ ಹೆಸರು Archos 101 G9 Turbo. ಅರ್ಚೊಸ್ ಕಂಪನಿಯ ಈ ಟ್ಯಾಬ್ಲೆಟ್ ದರ ಕೈಗೆಟುಕವ ಮಟ್ಟದಲ್ಲಿರುವ ನಿರೀಕ್ಷೆಯಿದೆ.

ಟೆಕ್ ಮಾಹಿತಿ ಮತ್ತು ವಿಶೇಷತೆ

* ಗೂಗಲ್ ಆಂಡ್ರಾಯ್ಡ್ 3.2.1 ಅಪರೇಟಿಂಗ್ ಸಿಸ್ಟಮ್

*ಒಎಂಎಪಿ 4460 ಪ್ರೊಸೆಸರ್

* 1500 ಮೆಗಾಹರ್ಟ್ಸ್ ವೇಗದಲ್ಲಿ ಆಕ್ಸೆಸ್

* 512 ಎಂಪಿ ಸಿಸ್ಟಮ್ ಮೆಮೊರಿ

* 250 ಜಿಬಿ ಸಂಗ್ರಹ ಸಾಮರ್ಥ್ಯ

* 10.1 ಇಂಚು ಡಿಸ್ ಪ್ಲೇ

* ಡಿಸ್ ಪ್ಲೇ ರೆಸಲ್ಯೂಷನ್ 1280 x 800 ಪಿಕ್ಸೆಲ್

* ಮಲ್ಟಿ ಟಚ್ ಫೀಚರ್

* 1080 ಪಿ ವಿಡಿಯೋ ರೆಸಲ್ಯೂಷನ್

* ಆಕ್ಸೆಲರೊಮೀಟರ್

* 3.5 ಮಿ.ಮೀ. ಆಡಿಯೊ ಜಾಕ್

* 2.0 ವರ್ಷನ್ ಯುಎಸ್ ಬಿ

* ಬ್ಲೂಟೂಥ್ 2.1 ಆವೃತ್ತಿ

* ವೇರ್ ಲೆಸ್ ಲೇನ್

* ಜಿಪಿಎಸ್ ಬೆಂಬಲ

* 0.9 ಮೆಗಾ ಪಿಕ್ಸೆಲ್ ಕ್ಯಾಮರಾ

* ತೂಕ: 755 ಗ್ರಾಂ

ನೂತನ ಟ್ಯಾಬ್ಲೆಟ್ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ದರ ಮಾಹಿತಿ ಲಭ್ಯವಿಲ್ಲ. ಆದರೆ ಕಂಪನಿಯ ಮೂಲಗಳ ಪ್ರಕಾರ ದರ ಕೈಗೆಟುಕುವ ಹಂತದಲ್ಲಿರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot