ಇನ್ಸಿಪಿರೇಷನ್ ಒನ್: ಡೆಲ್ ಹೊಸ ಕಂಪ್ಯೂಟರ್

Posted By: Staff
ಇನ್ಸಿಪಿರೇಷನ್ ಒನ್: ಡೆಲ್ ಹೊಸ ಕಂಪ್ಯೂಟರ್
ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಡೆಲ್ ಉತ್ಪನ್ನಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಇದೀಗ ಜಾಗತಿಕ ಮಾರುಕಟ್ಟೆಗೆ ಡೆಲ್ ಕಂಪನಿಯು Dell Inspiron One 2320 ಎಂಬ ಡೆಸ್ಕ್ ಟಾಪ್ ಕಂಪ್ಯೂಟರ್ ಪರಿಚಯಿಸಿದೆ. ಇದು ಸಾಕಷ್ಟು ಅಡ್ವಾನ್ಸ್ ಫೀಚರುಗಳು ಮತ್ತು ವಿಶೇಷತೆಗಳೊಂದಿಗೆ ಬಂದಿದೆ.

ಡೆಲ್ ಇನ್ಸಿಪಿರೇಷನ್ ಒನ್ 2320 ಕಂಪ್ಯೂಟರಿನ್ನು ಮೂರು ಪ್ರೊಸೆಸರ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇಂಟೆಲ್ ಐ3, ಐ5 ಮತ್ತು ಐ7 ಪ್ರೊಸೆಸರ್ ಗಳು ಅತ್ಯುತ್ತಮ ಕ್ಷಮತೆ ಮತ್ತು ದಕ್ಷತೆಗೆ ಹೆಸರುವಾಸಿಯಾಗಿದೆ. ಈ ಡೆಸ್ಕ್ ಟಾಪ್ ಕಂಪ್ಯೂಟರಿನಲ್ಲಿ ಜೆನ್ಯುನ್ ವಿಂಡೋಸ್ 7 ಹೋಂ ಪ್ರೀಮಿಯಂ 64 ಬಿಟ್ ಅಪರೇಟಿಂಗ್ ಸಿಸ್ಟಮ್ ಇದೆ.

ಇದರ ಹಾರ್ಡ್ ಡ್ರೈವ್ ಸಾಮರ್ಥ್ಯ ಸುಮಾರು 2 ಸಾವಿರ ಜಿಬಿ! ಇಂಟೆಲ್ ಎಚ್ ಡಿ ಗ್ರಾಫಿಕ್ಸ್ ಎಚ್ ಡಿ 2000 ವಿಡಿಯೋ ಕಾರ್ಡ್ ಇರುವುದರಿಂದ ಬಳಕೆದಾರರಿಗೆ ಕಂಪ್ಯೂಟರಿನಲ್ಲಿ ಅನನ್ಯ ಗ್ರಾಫಿಕ್ಸ್ ಅನುಭವ ಪಡೆಯಬಹುದಾಗಿದೆ.

Dell Inspiron One 2320 ಕಂಪ್ಯೂಟರ್ ಡಿಸ್ ಪ್ಲೇ 23 ಇಂಚಿನದ್ದಾಗಿದೆ. ಇದು 1920 x 1080 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತದೆ. 1.0 ಎಂ ಹೈ ಡೆಫಿನೇಷನ್ ವೆಬ್ ಕ್ಯಾಮ್ ಹೊಂದಿದ್ದು, ವಿಡಿಯೋ ಚಾಟಿಂಗ್ ಗುಣಮಟ್ಟ ಹೆಚ್ಚಿಸಿದೆ.

ಎಚ್ ಡಿ ಆಡಿಯೋ ಡಬ್ಲ್ಯು/ಎಸ್ಆರ್ಎಸ್ ಮತ್ತು ಜೆಬಿಎಲ್ ಸ್ಪೀಕರ್ ಇರುವುದರಿಂದ ಸೌಂಡ್ ಗುಣಮಟ್ಟ ಅನನ್ಯ. ನೋಡಲು ಸಣ್ಣದಾಗಿರುವಂತೆ ಆಲ್ ಇನ್ ಒನ್ ಕಾನ್ಸೆಪ್ಟ್ ನಲ್ಲಿ ಈ ಕಂಪ್ಯೂಟರ್ ವಿನ್ಯಾಸ ಮಾಡಲಾಗಿದೆ. ಡೆಲ್ ಇನ್ಸಿಪಿರೇಷನ್ ಒನ್ ದರ ಸುಮಾರು 45 ಸಾವಿರ ರು. ಇದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot