ಐದು ಹೊಸ HP ಆಲ್ ಇನ್ ಒನ್ ಲ್ಯಾಪ್ ಟಾಪ್

ಐದು ಕಂಪ್ಯೂಟರ್ ಗಳ ಹೆಸರು: ಟಚ್ ಸ್ಮಾರ್ಟ್ 610, ಟಚ್ ಸ್ಮಾರ್ಟ್ 520, ಆಮ್ನಿ 220, ಆಮ್ನಿ 120 ಮತ್ತು ಡ್ರೀಮ್ ಸ್ಕ್ರೀನ್ 400. ಈ ಐದು ಕಂಪ್ಯೂಟರುಗಳ ದರ, ಟೆಕ್ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇಷ್ಟವಾದ ಕಂಪ್ಯೂಟರನ್ನು ಆಯ್ಕೆ ಮಾಡಿಕೊಳ್ಳಬಹುದು.
ಈ ಐದು ಕಂಪ್ಯೂಟರುಗಳಲ್ಲಿ ಅತ್ಯಧಿಕ ದರವಿರುವುದು TouchSmart 610 ಮತ್ತು TouchSmart 520 ಕಂಪ್ಯೂಟರಿಗಳಿಗೆ. ಇದರಲ್ಲಿ ಸಾಕಷ್ಟು ಪ್ರೀಮಿಯಂ ಫೀಚರುಗಳಿವೆ. ಇಂಟೆಲ್ ಎರಡನೇ ತಲೆಮಾರಿನ ಪ್ರೊಸೆಸರ್ ಕೂಡ ಇದರಲ್ಲಿದೆ.
ಈ ಎರಡು ಆವೃತ್ತಿಗಳು ಸಂಪೂರ್ಣ ಹೈಡೆಫಿನೇಷನ್ ಡಿಸ್ ಪ್ಲೇ ಹೊಂದಿದ್ದು 30 ಡಿಗ್ರಿ ಬಾಗಿಸಬಹುದಾಗಿದೆ. ಇದರ ವಿನ್ಯಾಸ ಆಕರ್ಷಕವಾಗಿದ್ದು ಗಮನಸೆಳೆಯುವಂತ್ತಿದೆ. ಇದರಲ್ಲಿರುವ ಟಚ್ ಸ್ಮಾರ್ಟ್ 5.0 ಸಾಫ್ಟ್ ವೇರ್ ನೆರವಿನಿಂದ ವಿಶೇಷ ಅಪ್ಲಿಕೇಷನ್ ಗಳನ್ನು, ಸೋಷಿಯಲ್ ನೆಟ್ ವರ್ಕಿಂಗ್, ಮೀಡಿಯಾ ಸೆಂಟರ್ ಅಪ್ಲಿಕೇಷನ್ ಗಳನ್ನು ಟಚ್ ಮಾಡಿ ನಿರ್ವಹಿಸಬಹುದಾಗಿದೆ.
ಟಚ್ ಸ್ಮಾರ್ಟ್ 520 ಮತ್ತು ಟಚ್ ಸ್ಮಾರ್ಟ್ 610 ಕಂಪ್ಯೂಟರ್ ದರ ಕ್ರಮವಾಗಿ 60 ಸಾವಿರ ರುಪಾಯಿ ಮತ್ತು 72 ಸಾವಿರ ರುಪಾಯಿ ಆಗಿದೆ.
ಇನ್ನೆರಡು ಕಂಪ್ಯೂಟರ್ ಆವೃತ್ತಿಗಳಾದ ಆಮ್ನಿ 220 ಮತ್ತು ಆಮ್ನಿ 120 ಸರಳ ಸುಂದರ ಕಂಪ್ಯೂಟರುಗಳಾಗಿವೆ. ಇದರ ಮೆಟಾಲಿಕ್ ಕಲರ್ ಸ್ಕೀಮ್ ಕಣ್ಮನ ಸೆಳೆಯುತ್ತದೆ. ಇವೆರಡರ ದರ ಕ್ರಮವಾಗಿ 51 ಸಾವಿರ ರು. ಮತ್ತು 22 ಸಾವಿರ ರು. ಆಗಿದೆ.
ಇನ್ನೊಂದು ಕಂಪ್ಯೂಟರ್ ಹೆಸರು Dreamscreen400. ಇದು ಹೆಚ್ಚು ಅಗ್ಗದ ಕಂಪ್ಯೂಟರ್. ಇದು ಡ್ಯೂಯಲ್ ಬೂಟ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಅಂದರೆ ಬಳಕೆದಾರರು ಎರಡು ವಿಭಿನ್ನ ಅಪರೇಟಿಂಗ್ ಸಿಸ್ಟಮ್ ನ್ನು ಇದರಲ್ಲಿ ಬಳಸಿಕೊಳ್ಳಬಹುದು. ಇದರ ಆರಂಭಿಕ ದರ ಸುಮಾರು 22 ಸಾವಿರ ರುಪಾಯಿ.


Click it and Unblock the Notifications








