ರಿಲಯೆನ್ಸ್ ತಂದಿದೆ ಮೂರು ಬ್ಯೂಟಿ ಲ್ಯಾಪ್ ಟಾಪ್

Posted By: Staff
ರಿಲಯೆನ್ಸ್ ತಂದಿದೆ ಮೂರು ಬ್ಯೂಟಿ ಲ್ಯಾಪ್ ಟಾಪ್
ಅಮೆರಿಕನ್ ರಿಲಯೆನ್ಸ್ ಅಥವಾ AMREL ಕಂಪನಿಯು ಅತ್ಯಧಿಕ ಗುಣಮಟ್ಟದ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಕಂಪನಿ ಹೊರತರುವ ಲ್ಯಾಪ್ ಟಾಪ್ ಗಳು ಪ್ರಮುಖವಾಗಿ ಮಿಲಿಟರಿ ಸೇವೆಗೂ ಬಳಸಲಾಗುತ್ತಿದೆ.

ಜಾಗತಿಕ ಮಾರುಕಟ್ಟೆಗೆ ನೂತನ ಮೂರು ಲ್ಯಾಪ್ ಟಾಪ್ ಆವೃತ್ತಿ ಪರಿಚಯಿಸಿದೆ. ಅದರ ಹೆಸರು ಕ್ರಮವಾಗಿ ROCKY RT9, RK9 ಮತ್ತು RF9. ಇವೆಲ್ಲ ಲ್ಯಾಪ್ ಟಾಪ್ ಗಳು ಹಳೆಯ ಆವೃತ್ತಿಗಳಿಗಿಂತ ಸಾಕಷ್ಟು ಪರಿಷ್ಕೃತವಾಗಿರಲಿದೆ. ಇದರಲ್ಲಿ ಸಾಕಷ್ಟು ಸಂಗ್ರಹ ಸಾಮರ್ಥ್ಯವಿದ್ದು, ಹೆಚ್ಚು ಶಕ್ತಿಶಾಲಿ ಲ್ಯಾಪ್ ಟಾಪ್ ಗಳಾಗಿವೆ.

ನೂತನ ಉತ್ಪನ್ನವನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಪ್ ಗ್ರೇಡ್ ಮಾಡಿಕೊಡಲಾಗುವುದು ಎಂದು ಕಂಪನಿ ಹೇಳಿದೆ. ಈ ಮೂರು ಉತ್ಪನ್ನಗಳಲ್ಲಿ ಸಾಕಷ್ಟು ಬಳಕೆದಾರರ ಸ್ನೇಹಿಯಾದ ಫೀಚರು ಮತ್ತು ವಿಶೇಷತೆಗಳಿವೆ.

Rocky RF9-1 ಫೀಚರುಗಳು

* ಡಿಸ್ ಪ್ಲೇ ಗಾತ್ರ 17.1 ಇಂಚು

* ಡಿಸ್ ಪ್ಲೇ ರೆಸಲ್ಯೂಷನ್ 1440 x 990 ಪಿಕ್ಸೆಲ್

* ಇಂಟೆಲ್ ಕೋರ್ 2 ಡ್ಯೂಯಲ್ ಪ್ರೊಸೆಸರ್

* 320 ಜಿಬಿ ಸಾಟಾ ಎಚ್ ಡಿಡಿ ಹಾರ್ಡ್ ಡ್ರೈವ್

* ವೇರ್ ಲೆಸ್ ಲೇನ್, ವೇನ್, ಜಿಪಿಎಸ್ ಮತ್ತು ಮೊಡೆಮ್ ಬೆಂಬಲ

* 2ಜಿಬಿ ಡಿಡಿಆರ್3 1066 ಮೆಗಾಹರ್ಟ್ಸ್ 8ಜಿಬಿವರೆಗೆ ವಿಸ್ತರಣೆ

* ವಿಂಡೋಸ್ 7 ಪ್ರೊಫೆಸನಲ್ ಅಪರೇಟಿಂಗ್ ಸಿಸ್ಟಮ್

Rocky RK9-M  ಫೀಚರುಗಳು

* ಡಿಸ್ ಪ್ಲೇ 15.1 ಇಂಚು

* ಡಿಸ್ ಪ್ಲೇ ರೆಸಲ್ಯೂಷನ್ 1400 x 1050 ಪಿಕ್ಸೆಲ್

* ವಿಂಡೋಸ್7/ಲಿನಕ್ಷ್ ಕಾಂಪಿಟೆಬಲ್ ಅಪರೇಟಿಂಗ್ ಸಿಸ್ಟಮ್

* 2ಜಿಬಿ ಡಿಡಿಆರ್3 1066 ಮೆಗಾಹರ್ಟ್ಸ್ ಮೆಮೊರಿ

* ಸ್ಟಾಂಡರ್ಡ್ 320ಜಿಬಿ ಸಾಟಾ ಎಚ್ ಡಿಡಿ ಹಾರ್ಡ್ ಡ್ರೈವ್

* ಎಸ್ ಎಸ್ಎಚ್ ಡಿ ಸೆಕೆಂಡರಿ ಡ್ರೈವ್

* ಉದ್ಯಮ ಅವಶ್ಯಕತೆಗಾಗಿ ಕಪ್ಪು ಮತ್ತು ಸಿಲ್ವರ್ ಬಣ್ಣಗಳ ಆವೃತ್ತಿ

* ಮಿಲಿಟರಿ ಅವಶ್ಯಕತೆಗಾಗಿ ಹಸಿರು ಬಣ್ಣದ ಆವೃತ್ತಿ

Rocky RT9-M ಫೀಚರುಗಳು

* ಡಿಸ್ ಪ್ಲೇ ಗಾತ್ರ 13.3 ಇಂಚು

* ಡಿಸ್ ಪ್ಲೇ ರೆಸಲ್ಯೂಷನ್ 1024 x 768 ಪಿಕ್ಸೆಲ್

* ಡಿಸ್ ಪ್ಲೇ ಸ್ಕ್ರೀನ್ ಟಿಎಫ್ ಟಿ ಎಲ್ ಸಿಡಿ ತಂತ್ರಜ್ಞಾನ

* ಪರಿಷ್ಕೃತ ಡಿವಿಡಿ ರೊಮ್

* ಸಾಮಾನ್ಯ ಫೀಚರುಗಳು: ಪ್ರೊಸೆಸರ್, ಅಪರೇಟಿಂಗ್ ಸಿಸ್ಟಮ್, ಮೆಮೊರಿ, ಹಾರ್ಡ್ ಡ್ರೈವ್ RK-9 M ಮತ್ತು RF9-1 ಲ್ಯಾಪ್ ಟಾಪ್ ಗಳಲ್ಲಿ ಇರುವುದೇ ಆಗಿದೆ.

ಈ ಮೂರು ಲ್ಯಾಪ್ ಟಾಪ್ ಗಳ ದರ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot