Home
ಕಂಪ್ಯೂಟರ್‌‌

141 ಕೋಟಿ ವೆಚ್ಚದ 'ಕಂಪ್ಯೂಟರ್' ಕೆಲಸ ಆರಂಭ!..ಫೀಚರ್ಸ್ ಕೇಳಿ ತಲೆ ತಿರುಗದಿದ್ದರೆ ಸಾಕು!!

ವಿಜ್ಞಾನಿಗಳು ವಿಶ್ವದ ಅತಿದೊಡ್ಡ "ಮೆದುಳು" ಅನ್ನು ಸಕ್ರಿಯಗೊಳಿಸಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.! ಆದರೆ. ಮಾನವನ ಮಿದುಳಿನ ರೀತಿಯಲ್ಲೇ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಿರುವ ವಿಶ್ವದ ಅತಿದೊಡ್ಡ ಸೂಪರ್ ಕಂಪ್ಯೂಟರ್‌ ಮೊದಲ ಬಾರಿಗೆ ತನ್ನ ಕಾರ್ಯ ಆರಂಭಿಸಿದೆ. ಆ ಕಂಪ್ಯೂಟರ್ ಫೀಚರ್ಸ್ ಕೇಳಿ ತಲೆ ತಿರುಗದಿದ್ದರೆ ಸಾಕು ಎನ್ನುವಂತಿದೆ.

ಹೌದು, ನೂತನವಾಗಿ ರೂಪುಗೊಂಡ ಮಿಲಿಯನ್-ಪ್ರೊಸೆಸರ್-ಕೋರ್ ಕಂಪ್ಯೂಟರ್ ಮೊದಲ ಬಾರಿ ಕಾರ್ಯ ಆರಂಭಿಸಿದೆ. ಪ್ರತಿ ಸೆಕೆಂಡಿಗೆ 20 ಕೋಟಿಗೂ ಹೆಚ್ಚು ಕ್ರಿಯೆಗಳನ್ನು ಕೈಗೊಳ್ಳುವ, 10 ಕೋಟಿ ಟ್ರಾನ್ಸಿಸ್ಟರ್‌ಗಳನ್ನು ಹೊಂದಿರುವ ಈ ಕಂಪ್ಯೂಟರ್‌ಗೆ 'ಸ್ಪಿನ್ನೇಕರ್' ಎಂದು ಹೆಸರಿಡಲಾಗಿದ್ದು, ಬ್ರಿಟನ್‌ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ಇದನ್ನು ವಿನ್ಯಾಸ ಮಾಡಲಾಗಿದೆ.

141 ಕೋಟಿ ವೆಚ್ಚದ 'ಕಂಪ್ಯೂಟರ್' ಫೀಚರ್ಸ್ ಕೇಳಿ ತಲೆ ತಿರುಗದಿದ್ದರೆ ಸಾಕು!!

ಕಳೆದ 10 ವರ್ಷಗಳ ಅವಧಿಯಲ್ಲಿ ಈ ಬೃಹತ್‌ ಕಂಪ್ಯೂಟರ್‌ ನಿರ್ಮಿಸಲಾಗಿದ್ದು, ಇದಕ್ಕಾಗಿ 15 ಮಿಲಿಯನ್‌ ಪೌಂಡ್ ಹಣವನ್ನು (₹141 ಕೋಟಿ) ವೆಚ್ಚ ಮಾಡಲಾಗಿದೆ. ಹಾಗಾದರೆ, ವಿಶ್ವದ ಅತಿದೊಡ್ಡ ಮೆದುಳನ್ನು ಆಗಿರುವ 'ಸ್ಪಿನ್ನೇಕರ್' ಕಂಪ್ಯೂಟರ್‌ ಫೀಚರ್ಸ್ ಯಾವುವು? ಅದರ ಶಕ್ತಿ ಏನು? ಮತ್ತು ಉಪಯೋಗಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಿಶ್ವದ ಅತಿದೊಡ್ಡ

ವಿಶ್ವದ ಅತಿದೊಡ್ಡ "ಮೆದುಳು"!

ವಿಶ್ವದ ಅತಿದೊಡ್ಡ ಮೆದುಳು ಎಂದು ಕರೆಯಲಾಗಿರುವ ಈ ಸೂಪರ್‌ ಕಂಪ್ಯೂಟರ್ ಬ್ರಿಟನ್‌ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ವಿನ್ಯಾಸ ಗೊಳಿಲಾಗಿದೆ. ವಿಶ್ವದ ಯಾವುದೇ ಯಂತ್ರಕ್ಕಿಂತ ಇದು ಅತಿ ವೇಗದಲ್ಲಿ ಕಾರ್ಯನಿರ್ವಹಿಸಲಿದ್ದು,ಒಂದು ಮಿಲಿಯನ್-ಪ್ರೊಸೆಸರ್-ಕೋರ್ ಸ್ಪೀಕಿಂಗ್ ನರವ್ಯೂಹದ ನೆಟ್ವರ್ಕ್ ಆರ್ಕಿಟೆಕ್ಚರ್ ಹೊಂದಿರುವುದು ಇದರ ಪ್ರಮುಖ ವಿಶೇಷತೆಯಾಗಿದೆ.

ಇದು 20 ವರ್ಷಗಳ ಕಲ್ಪನೆ!

ಇದು 20 ವರ್ಷಗಳ ಕಲ್ಪನೆ!

ಇಂತಹದೊಂದು ವಿಶ್ವದ ಬೃಹತ್‌ ಸೂಪರ್ ಕಂಪ್ಯೂಟರ್‌ ರೂಪಿಸುವ ಬಗ್ಗೆ ಕಲ್ಪನೆ 20 ವರ್ಷಗಳ ಹಿಂದೆ ಮೂಡಿತ್ತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. 20 ವರ್ಷಗಳ ಹಿಂದೆ ಮೂಡಿದ್ದ ಕಲ್ಪನೆ ಕಳೆದ 10 ವರ್ಷಗಳಿಂದ ಆರಂಭವಾಗಿ ಈ ಬೃಹತ್‌ ಕಂಪ್ಯೂಟರ್‌ ಅನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 15 ಮಿಲಿಯನ್‌ ಪೌಂಡ್‌ನಷ್ಟು (141 ಕೋಟಿ) ಹಣವನ್ನು ವೆಚ್ಚ ಮಾಡಲಾಗಿದೆ.

ಭೂಮಿಯ ಮೇಲಿನ ವೇಗದ ಕಂಪ್ಯೂಟರ್!

ಭೂಮಿಯ ಮೇಲಿನ ವೇಗದ ಕಂಪ್ಯೂಟರ್!

‘ಸ್ಪಿನ್ನೇಕರ್' ಕಂಪ್ಯೂಟರ್‌' ಭೂಮಿಯ ಮೇಲಿನ ಯಾವುದೇ ಕಂಪ್ಯೂಟರ್‌ಗಿಂತಲೂ ನೈಜ ಸಮಯದಲ್ಲಿ ಹೆಚ್ಚು ನರಕೋಶಗಳನ್ನು ಅನುಕರಿಸುತ್ತದೆ. 500,000 ಕೋರ್ ಪ್ರೊಸೆಸರ್ಗಳನ್ನು ಬಳಸಿಕೊಂಡು ನರಕೋಶದ ಚಟುವಟಿಕೆಯನ್ನು ಅನುಕರಿಸುತ್ತದೆ. 200 ಕ್ವಾಡ್ರಿಲಿಯನ್ ಕ್ರಮಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಕಂಪ್ಯೂಟರ್ ಇದಾಗಿದೆ.

ಹೇಗೆ ಕೆಲಸ ಮಾಡುತ್ತದೆ ಕಂಪ್ಯೂಟರ್?

ಹೇಗೆ ಕೆಲಸ ಮಾಡುತ್ತದೆ ಕಂಪ್ಯೂಟರ್?

ಒಂದು ಮಿಲಿಯನ್ ಸಂಸ್ಕರಣಾ ಕೋಶಗಳ ಸೂಪರ್‌ ಕಂಪ್ಯೂಟರ್ ಇದಾಗಿದೆ. 1,200 ಅಂತರ್ಸಂಪರ್ಕಿತ ಸರ್ಕ್ಯೂಟ್ ಬೋರ್ಡ್‌ಗಳು ಒಟ್ಟಿಗೆ ಮಾನವ ಮೆದುಳಿನಂತೆ ಕಾರ್ಯ ನಿರ್ವಹಿಸುತ್ತವೆ. ಆದರೆ, ಈ ‘ಸ್ಪಿನ್ನೇಕರ್' ಕಂಪ್ಯೂಟರ್ ಮೆದುಳಿನಂತೆಯೇ "ಯೋಚಿಸುವುದಿಲ್ಲ". ಇದು ಮಾನವ ಮಿದುಳಿನಲ್ಲಿನ ನರಕೋಶಗಳ ಮಾದರಿಗಳನ್ನು ಸೃಷ್ಟಿಸುತ್ತದೆ.

ಸಾಮಾನ್ಯ ಕಂಪ್ಯೂಟರ್ ಅಲ್ಲ!

ಸಾಮಾನ್ಯ ಕಂಪ್ಯೂಟರ್ ಅಲ್ಲ!

ಇತರ ಸಾಮಾನ್ಯ ಕಂಪ್ಯೂಟರ್‌ ಗಳಿಗಿಂತಲೂ ಸ್ಪಿನ್ನೇಕರ್' ಕಂಪ್ಯೂಟರ್‌' ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಕಂಪ್ಯೂಟರ್‌ಗಳಂತೆ ಇದು ಅಪಾರವಾದ ಮಾಹಿತಿಯನ್ನು ಕೇವಲ ಎರಡು ಸ್ಥಳಗಳನ್ನು ಕೇಂದ್ರೀಕರಿಸಿಕೊಂಡು ರವಾನಿಸುವುದಿಲ್ಲ. ಬದಲಾಗಿ ಪರ್ಯಾಯ ಸಾವಿರಾರು ವಿಭಿನ್ನ ಕೇಂದ್ರಗಳಿಗೆ ಮಾಹಿತಿಯನ್ನು ರವಾನಿಸುವ ವ್ಯವಸ್ಥೆಯನ್ನು ಇದು ಹೊಂದಿದೆ.

ಸೂಪರ್‌ ಕಂಪ್ಯೂಟರ್‌ ಉಪಯೋಗವೇನು?

ಸೂಪರ್‌ ಕಂಪ್ಯೂಟರ್‌ ಉಪಯೋಗವೇನು?

ನರ ವಿಜ್ಞಾನಿಗಳಿಗೆ ಸೂಪರ್‌ ಕಂಪ್ಯೂಟರ್‌ ನೆರವಾಗಲಿದೆ. ಮನುಷ್ಯರ ಮಿದುಳು ಯಾವ ರೀತಿ ಕಾರ್ಯನಿರ್ವಹಿಸಲಿದೆ ಎನ್ನುವುದರ ಪರಿಪೂರ್ಣ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲಿದೆ. ವಿಭಿನ್ನ ಆಲೋಚನಾ ಶಕ್ತಿಯನ್ನು ಈ ಕಂಪ್ಯೂಟರ್ ಒಳಗೊಂಡಿರುವುದರಿಂದ ನಿಜವಾದ ಮಾನವ ಮೆದುಳಿನಂತೆ ವರ್ತಿಸಲು ಸ್ಪಿನ್ನೇಕರ್ ಎಷ್ಟು ಹತ್ತಿರದಲ್ಲಿದೆ ಎಂಬುದು ಕುತೋಹಲಕಾರಿಯಾಗಿದೆ.

Best Mobiles in India

English summary
New Supercomputer with 1 Million Processors Is World's Fastest Brain-Mimicking Machine. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+