ಗೂಗಲ್ ನೆಕ್ಸಸ್ 8 ಲಾಂಚಿಂಗ್‌ಗೆ ಕ್ಷಣಗಣನೆ

Written By:

ಪ್ರತೀ ವರ್ಷದಂತೆ, ಈ ಬಾರಿಯೂ ಕೂಡ ಗೂಗಲ್ ತನ್ನ ಹೊಸ ನೆಕ್ಸಸ್ ಟ್ಯಾಬ್ಲೆಟ್ ಅನ್ನು 2014 ಕ್ಕಾಗಿ ಲಾಂಚ್ ಮಾಡುವ ಎಲ್ಲಾ ತಯಾರಿಗಳನ್ನು ಸಂಪೂರ್ಣಗೊಳಿಸಿದೆ. ಇದೊಂದು ಗೂಗಲ್ ಅಧಿಕೃತ ಡಿವೈಸ್ ಎನ್ನುವುದನ್ನು ಹೊರತುಪಡಿಸಿ, ನೆಕ್ಸಸ್ ಶ್ರೇಣಿಯ ಟ್ಯಾಬ್ಲೆಟ್‌ಗಳು ಆಕರ್ಷಕ ನೋಟ ಮತ್ತು ವೈಶಿಷ್ಟ್ಯಗಳಿಂದ ಜನಮಾನಸವನ್ನು ಸೂರೆಗೊಳ್ಳುತ್ತಿದೆ.

ಒಟ್ಟಾರೆ ಹೇಳುವುದಾದರೆ ನೆಕ್ಸಸ್ ಟ್ಯಾಬ್ಲೆಟ್ ಗೂಗಲ್‌ಗೆ ಒಂದು ಮಿಶ್ರ ಬುತ್ತಿಯಿದ್ದಂತೆ. ಇದಕ್ಕೂ ಮುನ್ನ, ಮೂಲ ಮತ್ತು 2013 ರ ನೆಕ್ಸಸ್ 7 ಯಶಸ್ಸನ್ನು ಗಳಿಸಿತ್ತು. ಆದರೆ ನಂತರದ, ದೊಡ್ಡ ಗಾತ್ರದ ನೆಕ್ಸಸ್ 10 ಕಡಿಮೆ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಅಷ್ಟೊಂದು ಪರಿಣಾಮವನ್ನು ಬೀರಿಲ್ಲ.

@eveleaks ಹೇಳುವಂತೆ ನೆಕ್ಸಸ್ 8 ಅನ್ನು ನೆಕ್ಸಸ್ 9 ಎಂದೂ ಕರೆಯಬಹುದು. ಇದರ ತಯಾರಕರು ಡಿವೈಸ್‌ನ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಇನ್ನೆರಡು ಆಂಡ್ರಾಯ್ಡ್ ಟ್ಯಾಬ್ಲೇಟ್ ಮೇಲೆ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಹೆಚ್ಚುವರಿ ವದಂತಿಗಳು ಹಬ್ಬುತ್ತಿದ್ದರೂ ಡಿವೈಸ್ ಕುರಿತಾದ ಕೆಲವೊಂದು ಮಾಹಿತಿಗಳು ಸೋರಿಕೆಯಾಗಿದ್ದು, ಡಿವೈಸ್‌ಗೆ ಪೂರಕವಾಗಿ ಇದು ಪರಿಣಾಮ ಬೀರುತ್ತಿದೆ. ಹಾಗಿದ್ದರೆ ಈ ಕೆಳಗಿನ ಸ್ಲೈಡ್‌ಗಳಲ್ಲಿ ನೆಕ್ಸಸ್ 8 ಕುರಿತಾದ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೆಕ್ಸಸ್ 8 ಅಂಶಗಳು

ನೆಕ್ಸಸ್ 8 ಅಂಶಗಳು

#1

ಹಿಂದಿನ ನೆಕ್ಸಸ್ ಟ್ಯಾಬ್ಲೆಟ್‌ಗಳಲ್ಲಿ ಕಾಣದಿರುವ ಹೆಚ್ಚಿನ ಮಹತ್ವಕಾರಿ ಅಂಶಗಳನ್ನು ಈ ಟ್ಯಾಬ್ಲೆಟ್‌ನಲ್ಲಿ ನಮಗೆ ಕಾಣಬಹುದು. ಡಿಸ್‌ಪ್ಲೇ ಮತ್ತು ವಿನ್ಯಾಸದಲ್ಲಿ ಹೋಲಿಕೆ ಇದೆ. ಆದರೆ ಗೂಗಲ್ ಏನಾದರೂ ಒಂದು ವಿಶೇಷತೆಯನ್ನು ಈ ಹೊಸ ಉತ್ಪನ್ನದಲ್ಲಿ ಇಟ್ಟಿದ್ದು ನಮಗೆ ಅದು ಲಾಂಚ್ ಆದ ನಂತರವೇ ತಿಳಿಯಬಹುದಾಗಿದೆ. ಈಗ ವ್ಯತ್ಯಾಸಗಳನ್ನು ತಿಳಿಸಲು ಸಾಧ್ಯವಿಲ್ಲ.

ನೆಕ್ಸಸ್ 8 ಅಂಶಗಳು

ನೆಕ್ಸಸ್ 8 ಅಂಶಗಳು

#2

ಪ್ಯಾನಲ್‌ನ ಹಿಂದಿನ ನೋಟವನ್ನು ನಿಮಗಿಲ್ಲಿ ಕಾಣಬಹುದು. 64 ಬಿಟ್ ಡಿವೈಸ್‌ನ ಹಿಂಭಾಗದಲ್ಲಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು ಇದರಲ್ಲಿ ಯಾವ ಸೆನ್ಸಾರ್ ಅನ್ನು ಬಳಸಲಾಗಿದೆ ಎಂಬ ಕನಿಷ್ಟ ಮಾಹಿತಿ ಕೂಡ ದೊರಕುವುದು ಕಷ್ಟ. ಆದರೆ ವದಂತಿಗಳ ಪ್ರಕಾರ ಇದು 8MP ಕ್ಯಾಮೆರಾವಾಗಿದೆ.

ನೆಕ್ಸಸ್ 8 ಅಂಶಗಳು

ನೆಕ್ಸಸ್ 8 ಅಂಶಗಳು

#3

ಇದು ಅತ್ಯಂತ ಆಕರ್ಷಕ ಧ್ವನಿ ಸಾಮರ್ಥ್ಯ ವಿಶೇಷತೆಯೊಂದಿಗೆ ಬರುತ್ತಿದ್ದು ನೆಕ್ಸಸ್ 8 ನ ಗುಣಮಟ್ಟ ಇದರಲ್ಲೇ ನಮಗೆ ಕಾಣಬಹುದಾಗಿದೆ.

ನೆಕ್ಸಸ್ 8 ಅಂಶಗಳು

ನೆಕ್ಸಸ್ 8 ಅಂಶಗಳು

#4

ಟ್ಯಾಬ್ಲೆಟ್‌ನ ಅತ್ಯಾಕರ್ಷಕ ವಿನ್ಯಾಸ ಇಲ್ಲಿ ಮನಸೆಳೆಯುವಂತಿದ್ದು ಡಿವೈಸ್ 8.2 ಇಂಚಿನೊಂದಿಗೆ 2K 3D ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು 32/64 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ. 3.2 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಡಿವೈಸ್ ಆಗಿರುವ ಇದು 900 CPU ಮತ್ತು 3 ಜಿಬಿ RAM ಜೊತೆಗೂಡಿ ಆಕರ್ಷಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Nexus 8 arriving this fall specs, price, release date and so on rumors.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot