ಕಂಪ್ಯೂಟರ್ ಸೆಕ್ಯುರಿಟಿಗೂ ಹೃದಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?!..ನೂತನ ಅವಿಷ್ಕಾರ!!
ಕಂಪ್ಯೂಟರ್ ಹ್ಯಾಕ್ ಆಗಬಾರದು ಎಂಬ ದೃಷ್ಟಿಯಿಂದ ಹೃದಯದಿಂದ ಕಂಪ್ಯೂಟರ್‌ನ ಸೆಕ್ಯೂರಿಟಿ ರಕ್ಷಣೆ ಮಾಡುವಂತಹ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಇಂದು ಅಭಿವೃದ್ದಿಪಡಿಸುತ್ತಿದ್ದಾರೆ.!!
ಕಂಪ್ಯೂಟರ್ ಸೆಕ್ಯುರಿಟಿಗೂ ಹೃದಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನಿಮಗನಿಸಬಹುದು?..ಆದರೆ, ಕಂಪ್ಯೂಟರ್ ಹ್ಯಾಕ್ ಆಗಬಾರದು ಎಂಬ ದೃಷ್ಟಿಯಿಂದ ಹೃದಯದಿಂದ ಕಂಪ್ಯೂಟರ್‌ನ ಸೆಕ್ಯೂರಿಟಿ ರಕ್ಷಣೆ ಮಾಡುವಂತಹ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಇಂದು ಅಭಿವೃದ್ದಿಪಡಿಸುತ್ತಿದ್ದಾರೆ.!!
ಹೌದು, ನಿಮಗೆ ಆಶ್ಚರ್ಯವಾದರೂ ಸಹ ಇದು ನಿಜ.! ಕಂಪ್ಯೂಟರ್ ಅನ್ನು ಸೆಕ್ಯೂರ್ ಆಗಿ ಇಡಲು ಇದೀಗ ಸಂಶೋಧಕರು ವಿಭಿನ್ನವಾದ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುತ್ತಿದ್ದು, ಈ ತಂತ್ರಜ್ಞಾನ ಭವಿಷ್ಯದ ಸೆಕ್ಯೂರ್ ತಂತ್ರಜ್ಞಾನ ಎಂದು ವಿಜ್ಞಾನಿಗಳು ಹೇಳಿದ್ದಾರೆ.! ಹಾಗಾದರೆ, ಏನೀ ತಂತ್ರಜ್ಞಾನ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ!!

ಹೃದಯದಿಂದ ಸೆಕ್ಯೂರ್!!
ನಾವು ಕಂಪ್ಯೂಟರ್ ಮುಂದೆ ಕುಳಿತಾಗ ನಮ್ಮ ಹಾರ್ಟ್‌ನ ಡೈಮೆನ್ಶನ್‌ನ್ನು ಸ್ಕ್ಯಾನ್ ಮಾಡಿ ನಮ್ಮ ಕಂಪ್ಯೂಟರ್ ಲಾಗ್ ಇನ್ ಆಗುವಂತೆ ಮಾಡುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸುತ್ತಿದ್ದು, ಈ ತಂತ್ರಜ್ಞಾನ ಬಹುತೇಕ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ಕಾರ್ಯನಿರ್ವಹಣೆ ಹೇಗೆ?
ಕಂಪ್ಯೂಟರ್‌ನಲ್ಲಿ ಲೋ ಲೆವೆಲ್ ಡೋಪ್‌ಲರ್ ರೆಡಾರ್ ಸಾಧನವನ್ನು ಬಳಕೆ ಮಾಡಿ ಸ್ಕ್ಯಾನಿಂಗ್‌ಗಾಗಿ ಸಿಗ್ನಲ್ ಜನರೇಟ್ ಮಾಡುವಂತೆ ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ. ಈ ಸಿಗ್ನಲ್ ಕಡಿಮೆ ಶಕ್ತಿ ಹೊಂದಿದ್ದು, ನಿಮ್ಮ ಹಾರ್ಟ್ ಅನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಅನ್‌ಲಾಕ್ ಮಾಡುತ್ತದೆಯಂತೆ.!!

ಬೆಸ್ಟ್ ತಂತ್ರಜ್ಞಾನವೇ?
ವಿಜ್ಞಾನಿಗಳು ಹೇಳುವಂತೆ, ಹಾರ್ಟ್ ಮೂಲಕ ಕಂಪ್ಯೂಟರ್ ನಿಂಯತ್ರಿಸಬಹುದಾದ ಈ ತಂತ್ರಜ್ಞಾನದಿಂದ ಹ್ಯಾಕರ್‌ಗಳಿಗೆ ಕಂಪ್ಯೂಟರ್ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಕಂಪ್ಯೂಟರ್ ಸೆಕ್ಯೂರ್‌ಗಾಗಿ ಬೇರೆ ಬೇರೆ ವಿಧಾನದ ಟೆಕ್ನಾಲಜಿಗಿಂತ ಈ ಟೆಕ್ನಾಲಜಿ ಬೆಸ್ಟ್ ಎಂದು ಹೇಳಿದ್ದಾರೆ.!!

ಸೇಫ್ ಆಗಿರಬಹುದು!!
ಕಂಪ್ಯೂಟರ್‌ನಿಂದ ಬಿಡುಗಡೆಯಾಗುವ ಸಿಗ್ನಲ್‌ನಿಂದ ಬಳಕೆದಾರರಿಗೆ ಯಾವುದೆ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಈ ಟೆಕ್ನಾಲಜಿ ಬಳಕೆಗೆ ಬಂದರೆ ಕಂಪ್ಯೂಟರ್ ಹೆಚ್ಚು ಸೇಫ್ ಆಗಿರಬಹುದು ಅಲ್ಲವೇ?


Click it and Unblock the Notifications