ಪೆಂಟಾ ಟಿ-ಪ್ಯಾಡ್‌ ಡಬ್ಲ್ಯುಎಸ್‌702ಸಿ ಟ್ಯಾಬ್ಲೆಟ್‌ ಬಿಡುಗಡೆ

Posted By: Vijeth

ಪೆಂಟಾ ಟಿ-ಪ್ಯಾಡ್‌ ಡಬ್ಲ್ಯುಎಸ್‌702ಸಿ ಟ್ಯಾಬ್ಲೆಟ್‌ ಬಿಡುಗಡೆ
ಪೆಂಟೆಲ್‌ ಟೆಕ್ನಾಲಜೀಸ್‌ ಸಂಸ್ಥೆಯು ಭಾರತೀಯ ಸಂಚಾರ ನಿಗಮ ನಿಯಮಿತ(BSNL) ಜೊತೆಗೂಡಿ ಭಾರತೀಯ ಮಾರುಕಟ್ಟೆಗೆ ಪೆಂಟಾ ಟಿ-ಪ್ಯಾಡ್‌ WS702C ಹೆಸರಿನಲ್ಲಿ ಮತ್ತೊಂದು ವಿನೂತನ ಟ್ಯಾಬ್ಲೆಟ್‌ ರೂ.7,499 ದರದಲ್ಲಿ ಪರಿಚಯಿಸಿದೆ.ಈ ನೂತನ ಟ್ಯಾಬ್ಲೆಟ್‌ 3D-ತಂತ್ರಜ್ಞಾನನವನ್ನು ಒಳಗೊಂಡಿದ್ದು 2G ವಾಯ್ಸ್‌ ಬೆಂಬಲಿತ ಹಾಗೂ ಡಾಂಗಲ್‌ ಮೂಲಕ 3G ಸೇರಿದಂತೆ ವೈ-ಫೈ ಫೀಚರ್ಸ್‌ಗಳಿಂದ ಕೂಡಿದೆ.

ಇದಲ್ಲದೆ ಟಿ-ಪ್ಯಾಡ್‌ WS702C ನಲ್ಲಿ 7-ಇಂಚಿನ (1024 x 600 ಪಿಕ್ಸೆಲ್ಸ್‌)ಮಲ್ಟಿಟಚ್‌ ಸ್ಕ್ರೀನ್‌ ದರ್ಶಕ, ಆಂಡ್ರಾಯ್ಡ್ 4.0.3 (ICS) ಆಪರೇಟಿಂಗ್ ಸಿಸ್ಟಂ, 1.2 GHz ಕಾರ್ಟೆಕ್ಸ್‌ A8 ಪ್ರೊಸೆಸರ್‌,ಮೇಲ್‌ 400 ಜಿಪಿಉ, 1GB DDR3 RAM, 8 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಲ್ಲ ಮೆಮೊರಿ, 2MP ಹಿಂಬದಿಯ ಕ್ಯಾಮೆರಾ, ಮುಂಬದಿಯ ವಿಜಿಎ ಕ್ಯಾಮೆರಾ, 3.5mm ಆಡಿಯೋ ಜಾಕ್, ಬಹು ಸ್ವರೂಪ ಆಡಿಯೋ ಮತ್ತು ವೀಡಿಯೊ ಪ್ಲೇಯರ್, ಬುಕ್ ರೀಡರ್, 2G SIM ಕಾರ್ಡ್ ಸ್ಲಾಟ್, 3G (ಮೂಲಕ ಬಾಹ್ಯ ಡಾಂಗಲ್), ವೈಫೈ 802.11b/g/n, ಯುಎಸ್ಬಿ ಒಟಿಜಿ, ಮಿನಿ ಯುಎಸ್ಬಿ, HDMI ಪೋರ್ಟ್ ಹಾಗೂ 6 ಗಂಟೆಗಳ ಬ್ಯಾಟರಿ ಬ್ಯಾಕ್ಅಪ್ ನೀಡುತ್ತದೆ.

ನೂತನ ಟ್ಯಾಬ್ಲೆಟ್‌ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಪೆಂಟೆಲ್‌ ಟೆಕ್ನಾಲಜೀ ಸಂಸ್ಥೆಯ ಅಧ್ಯಕ್ಷ ವಿಜೇಂದ್ರಸಿಂಗ್‌ ಮಾತನಾಡಿ' ಸಂಸ್ಥೆಯು ನೂತನ ವಾಗಿ ಹೊರತಂದಿರುವ ಟಿ-ಪ್ಯಾಡ್‌ WS702C ಬಜೆಟ್‌ ಟ್ಯಾಬ್ಲೆಟ್‌ ಭಾರತದಲ್ಲಿನ ಮೊಟ್ಟ ಮೊದಲ ಬಿಲ್ಟ್‌ಇನ್‌ 3ಡಿ ತಂತ್ರಜ್ಞಾನ ಹೊಂದಿರುವಂತಹ ಟ್ಯಾಬ್ಲೆಟ್‌ ಪಿಸಿ ಆಗಿದ್ದು ಗ್ರಾಹಕರಿ ಖಡಿತವಾಗಿಯೂ ಉತ್ತಮ ಉಡುಗೊರೆಯಾಗಲಿದೆ" ಎಂದು ಹೇಳಿದರು.

ಇದಲ್ಲದೆ ನೂತನ ಪೆಂಟಾ ಟಿ-ಪ್ಯಾಡ್‌ WS702C ಟ್ಯಾಬ್ಲೆಟ್‌ ಬಿಎಸ್‌ಎನ್‌ಎಲ್‌ನ ಅತ್ಯಾಕರ್ಷಕ ಆಫರ್‌ಗಳೊಂದಿಗೆ ಮಾರುಕಟ್ಟೆ ಪ್ರವೇಷಿಸಲಿದೆ.

2012 ರಲ್ಲಿನ ಮೋಸ್ಟ್‌ ಸರ್ಚ್‌ಡ್‌ ಟ್ಯಾಬ್ಲೆಟ್‌ಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot