ಪೆಬಲ್ಸ್‌ ಸ್ಮಾರ್ಟ್‌ವಾಚ್‌ನಲ್ಲಿ ಧ್ವನಿ ನಿಯಂತ್ರಣ ನವೀಕರಣ

Written By:

ಪೆಬಲ್ ಕೆಲವೊಂದು ನವೀಕರಣಗಳೊಂದಿಗೆ ಬಂದಿದ್ದು ತನ್ನ ಸ್ಮಾರ್ಟ್‌ವಾಚ್‌ಗೆ ಸಣ್ಣದಾದ ಆದರೆ ಮಹತ್ವಪೂರ್ಣವಾದ ಸುಧಾರಣೆಗಳನ್ನು ತಂದಿದೆ. ಹೆಚ್ಚು ಪರಿಣಾಮಾತ್ಮಕವಾಗಿ ಇದು ವಾಚ್‌ನಲ್ಲಿ ತಂದಿರುವ ಬದಲಾವಣೆಯೆಂದರೆ ಧ್ವನಿ ನಿಯಂತ್ರಣಗಳನ್ನು ಸೇರಿಸಿರುವುದು ಮತ್ತು ವಾಚ್‌ನ ಲಾಂಚರ್‌ನಿಂದ ಅಪ್ಲಿಕೇಶನ್‌ಗಳನ್ನು ಗುರುತಿಸುವ ಸಾಮರ್ಥ್ಯವಾಗಿದೆ.

ಇಲ್ಲಿಯವರೆಗೆ ಪೆಬಲ್ ಮಾಲೀಕರು ತಮ್ಮ ವಾಚ್‌ಗಳಲ್ಲಿ ಕೇವಲ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಬಹುದಾಗಿತ್ತು, ಆದರೆ ಮ್ಯೂಸಿಕ್ ಧ್ವನಿಯನ್ನಲ್ಲ. ಪೆಬಲ್ ಮ್ಯೂಸಿಕ್ ಆಪ್‌ನಲ್ಲಿ ಧ್ವನಿ ನಿಯಂತ್ರಣವನ್ನು ನಾವು ಮೊದಲು ಪ್ರಸ್ತುತ ಪಡಿಸಿದ್ದು ಇದು ಕೆಲವು ಸಮಯಗಳೇ ಗತಿಸಿವೆ. ಈ ಫೀಚರ್ ಅನ್ನು ನೈಜತೆಗೆ ತರಲು ನಮಗೆ ತುಂಬಾ ಸಂತೋಷವಾಗಿದೆ ಎಂದು ಕಂಪೆನಿ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದೆ.

ಹೊಸ ಫೀಚರ್‌ನೊಂದಿಗೆ ಪೆಬಲ್ ಸ್ಮಾರ್ಟ್‌ವಾಚ್

ವಾಚರ್ಸ್ ಲಾಂಚರ್‌ನಲ್ಲಿ ಹಸ್ತಚಾಲಿತವಾಗಿ ಅಪ್ಲಿಕೇಶನ್‌ಗಳನ್ನು ಸಾರ್ಟ್ ಮಾಡುವ ಹಾಗೂ ಗುರುತಿಸುವ ಸಾಮರ್ಥ್ಯವನ್ನು ನವೀಕರಣವು ಸೇರಿಸಿದೆ. ಈ ಹಿಂದೆ ಗೋಚರಗೊಂಡಿದ್ದ ಅಪ್ಲಿಕೇಶನ್‌ಗಳು ಕಸ್ಟಮೈಸ್‌ಗೊಂಡಿರಲಿಲ್ಲ. ಇದೀಗ ಬಳಕೆದಾರರು ಲಾಂಚರ್‌ನಲ್ಲಿರುವ ಐಟಂಗಳನ್ನು ಮರು ಆರ್ಡರ್‌ ಮಾಡಬಹುದಾಗಿದ್ದು ಇದಕ್ಕೆ ಆಯ್ಕೆ ಬಟನ್ ಅನ್ನು ಹಿಡಿದುಕೊಂಡಿರಬೇಕಾಗುತ್ತದೆ ಎಲ್ಲಿಯವರೆಗೆಂದರೆ ನಿಮ್ಮ ಹಿಡಿಯುವಿಕೆ ಅಪ್ಲಿಕೇಶನ್ ಶೇಕ್ ಆಗಬೇಕು, ನಂತರ ಪಟ್ಟಿಯಲ್ಲಿರುವ ನಿಮ್ಮ ಇಷ್ಟದ ಸ್ಥಳಕ್ಕೆ ಇದನ್ನು ಸರಿಸಬಹುದಾಗಿದೆ.

ಈ ಎರಡೂ ನವೀಕರಣಗಳನ್ನು ಫರ್ಮ್‌ವೇರ್ ನವೀಕರಣವಾಗಿ ಸೇರಿಸಲಾಗಿದ್ದು, ಬಳಕೆದಾರರು ಬೆಂಬಲ ಮೆನುವಿನಿಂದ "ನವೀಕರಣಗಳಿಗಾಗಿ ಪರಿಶೀಲಿಸಿ" ಅನ್ನು ಆಯ್ಕೆ ಮಾಡುವ ಮೂಲಕ ತಮ್ಮ ಪ್ರಸ್ತುತ ಸ್ಮಾರ್ಟ್‌ಫೋನ್ ಅನ್ನು ನವೀಕರಿಸಬೇಕು.

ಹೊಸ ಫರ್ಮ್‌ವೇರ್ ಅನ್ನು ಪಡೆಯುವುದಕ್ಕಿಂತಲೂ ಮುನ್ನ ಪೆಬಲ್ಸ್‌ನ ಐಓಎಸ್ ಬಳಕೆದಾರರು ಪ್ರಥಮವಾಗಿ ಪೆಬಲ್ಸ್‌ನ ಐಓಎಸ್ ಆಪ್ ಅನ್ನು ನವೀಕರಿಸಬೇಕು. ಪೆಬಲ್ಸ್‌ನ ಐಓಎಸ್ ಅಪ್ಲಿಕೇಶನ್ ಅನ್ನು ಕೂಡ ಹೊಸ ಫರ್ಮ್‌ವೇರ್ ಆವೃತ್ತಿಗೆ ಬೆಂಬಲಿಸುವಂತೆ ನವೀಕರಿಸಲಾಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot