ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಆಪಲ್ ಐಪ್ಯಾಡ್ 4 ಭಾರ ಹೆಚ್ಚಾಯಿತು ಈ ಐಪ್ಯಾಡ್ ಬೇಡ ಎಂದು ಹೇಳುವವರಿಗೆ ಆಪಲ್ ಕಡಿಮೆ ಭಾರವನ್ನು ಹೊಂದಿರುವ ಹೊಸ ಟ್ಯಾಬ್ಲೆಟ್ ಐಪ್ಯಾಡ್ ಏರ್‌ನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಐಪ್ಯಾಡ್ ಏರ್ ಟ್ಯಾಬ್ಲೆಟ್‌ನ ಹಲವು ವಿಶೇಷತೆಗಳು ಐಪ್ಯಾಡ್ 4ರಂತೆ ಇದ್ದರೂ ಕೆಲವೊಂದು ಹೊಸ ವಿಶೇಷತೆಗಳನ್ನು ಸೇರಿಸಿ ಹೊಸ ಟ್ಯಾಬ್ಲೆಟ್‌ನ್ನು ಆಪಲ್ ಬಿಡುಗಡೆ ಮಾಡಿದೆ.
ವೈಫೈ,ವೈಫೈ ಸೆಲ್ಯುಲರ್ ಎರಡು ವಿಧ ಮತ್ತು ನಾಲ್ಕು ಆಂತರಿಕ ಮೆಮೊರಿಯಲ್ಲಿ ಈ ಟ್ಯಾಬ್ಲೆಟ್ ಅಮೆರಿಕದಲ್ಲಿ ಬಿಡುಗಡೆಯಾಗಿದ್ದು ನವೆಂಬರ್‌ನಲ್ಲಿ ವಿಶ್ವದ ಹಲವು ದೇಶಗಳ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.ಐಪ್ಯಾಡ್ ಏರ್ ವೈಫೈ 16GB ಆಂತರಿಕ ಮೆಮೊರಿ ಹೊಂದಿರುವ ಟ್ಯಾಬ್ಲೆಟ್‌ಗೆ 499 ಡಾಲರ್,32GB ಟ್ಯಾಬ್ಲೆಟ್‌ಗೆ 599 ಡಾಲರ್, 64GB ಟ್ಯಾಬ್ಲೆಟ್‌ಗೆ 699 ಡಾಲರ್,128GB ಟ್ಯಾಬ್ಲೆಟ್‌ಗೆ 799 ಡಾಲರ್‌ನ್ನು ಆಪಲ್ ಅಮೆರಿಕದಲ್ಲಿ ನಿಗದಿ ಮಾಡಿದೆ.
ಐಪ್ಯಾಡ್ ಏರ್ ವೈಫೈ ಸೆಲ್ಯುಲರ್ 16GB ಆಂತರಿಕ ಮೆಮೊರಿ ಹೊಂದಿರುವ ಟ್ಯಾಬ್ಲೆಟ್‌ಗೆ 629 ಡಾಲರ್,32GB ಟ್ಯಾಬ್ಲೆಟ್‌ಗೆ 729 ಡಾಲರ್,64GB ಟ್ಯಾಬ್ಲೆಟ್‌ಗೆ 829 ಡಾಲರ್,128GB ಟ್ಯಾಬ್ಲೆಟ್‌ಗೆ 929 ಡಾಲರ್‌ನ್ನು ಆಪಲ್ ನಿಗದಿ ಮಾಡಿದೆ.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಎ7 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಡ್ಯುಯಲ್ ಕೋರ್ 1300 MHz ಪ್ರೊಸೆಸರ್‌ನ್ನು ಈ ಹೊಸ ಐಪ್ಯಾಡ್ ಏರ್ ಹೊಂದಿದೆ.
ಈ ಹಿಂದೆ ಬಿಡುಗಡೆಯಾದ ಐಪ್ಯಾಡ್ 4 ಪ್ರೊಸೆಸರ್ ಎ6 ಪ್ರೊಸೆಸರ್ ಮತ್ತು ಡ್ಯುಯಲ್ ಕೋರ್ 1400 MHz ಪ್ರೊಸೆಸರ್ ಹೊಂದಿತ್ತು.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಹೊಸ ಐಪ್ಯಾಡ್ ಏರ್ (ವೈಫೈ) 9.45 ಇಂಚು ಉದ್ದ,6.6 ಇಂಚು ಅಗಲ,0.29 ಇಂಚು ದಪ್ಪ,469 ಗ್ರಾಂ ತೂಕವಿದೆ. ಏರ್ ವೈಫೈ ಸೆಲ್ಯುಲರ್ 478 ಗ್ರಾಂ ತೂಕವಿದೆ.
ಐಪ್ಯಾಡ್ 4 (ವೈಫೈ) 9.50 ಇಂಚು ಉದ್ದ,7.31 ಇಂಚು ಅಗಲ, 0.37 ಇಂಚು ದಪ್ಪ, 652 ಗ್ರಾಂ ತೂಕವಿದ್ದರೆ, ಐಪ್ಯಾಡ್ 4 ವೈಫೈ ಸೆಲ್ಯುಲರ್ 662 ಗ್ರಾಂ ತೂಕವಿತ್ತು.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಹೊಸ ಐಪ್ಯಾಡ್ ಏರ್, ಐಪ್ಯಾಡ್ 4ರಲ್ಲಿ ಇದ್ದಂತೆ ರೆಟಿನಾ ಡಿಸ್ಪ್ಲೇ ಹೊಂದಿರುವ 9.7 ಇಂಚಿನ ಇಂಚಿನ 2048x1536 ಪಿಕ್ಸೆಲ್ ರೆಸೂಲೂಶನ್, 264 ಪಿಪಿಐ(pixels per inch) ಹೊಂದಿದೆ.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಐಪ್ಯಾಡ್ 4ರಲ್ಲಿ ಇದ್ದಂತೆ ಹಿಂದುಗಡೆ 5 ಎಂಪಿ f2.4 ಅಪರ್ಚರ್ ಕ್ಯಾಮೆರಾ, ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಹೊಸ ಐಪ್ಯಾಡ್ ಏರ್ ಹೊಂದಿದೆ.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಹೊಸ ಐಪ್ಯಾಡ್ ಏರ್ ಐಓಎಸ್ 7 ಒಳಗೊಂಡಿದ್ದರೆ, ಈ ಹಿಂದೆ ಬಿಡುಗಡೆಯಾಗಿದ್ದ ಐಪ್ಯಾಡ್ 4 ಐಓಎಸ್ 6 ಹೊಂದಿತ್ತು. ಅದನ್ನುಈಗ ಐಓಎಸ್ 7ಗೆ ಅಪ್‌ಡೇಟ್ ಮಾಡಬಹುದಾಗಿದೆ.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಈ ವಿಚಾರದಲ್ಲಿ ಹೊಸ ಐಪ್ಯಾಡ್ ಕಡಿಮೆ ಭಾರವನ್ನು ಹೊಂದಿರುವುದರಿಂದ ಐಪ್ಯಾಡ್ 4 ಹೋಲಿಕೆ ಮಾಡಿದ್ದಲ್ಲಿ ಐಪ್ಯಾಡ್ ಏರ್ ಬ್ಯಾಟರಿ 32.4 ವ್ಯಾಟ್ ಹೊಂದಿದೆ. ಐಪ್ಯಾಡ್ 4 ಬ್ಯಾಟರಿ 42.5 ವ್ಯಾಟ್ ಹೊಂದಿತ್ತು.

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಐಪ್ಯಾಡ್ ಏರ್

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಆಪಲ್ ಐಪ್ಯಾಡ್ ಏರ್

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಐಪ್ಯಾಡ್ ಏರ್ ಅಪ್ಲಿಕೇಶನ್

ಕಡಿಮೆ ತೂಕದ ಆಪಲ್ ಐಪ್ಯಾಡ್ ಏರ್ ಟ್ಯಾಬ್ಲೆಟ್ ಬಿಡುಗಡೆ
ಐಪ್ಯಾಡ್ ಏರ್‌ಗೆ ಆಪಲ್ ನೀಡುತ್ತಿರುವ ಉಚಿತ ಅಪ್ಲಿಕೇಶನ್‌ಗಳು

Click it and Unblock the Notifications