ಹೊಸ Redmi Book Pro 14 ಲ್ಯಾಪ್‌ಟಾಪ್ ಲಾಂಚ್; ಅಚ್ಚರಿ ಫೀಚರ್ಸ್.. ಬೆಲೆ ಎಷ್ಟು ಗೊತ್ತಾ?
ರೆಡ್ಮಿ ಕಂಪನಿಯು ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೇ, ತನ್ನ ಲ್ಯಾಪ್‌ಟಾಪ್‌ಗಳ ಮೂಲಕವೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೀಗ, ಎರಡು ಹೊಸ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. ಹೌದು, ರೆಡ್ಮಿ ಬುಕ್ ಪ್ರೊ 16 (2025) (Redmi Book Pro 16) ಮತ್ತು ರೆಡ್ಮಿ ಬುಕ್ ಪ್ರೊ 14 (2025) (Redmi Book Pro 14) ಲ್ಯಾಪ್‌ಟಾಪ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ, ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ ಜೊತೆಗೆ ಈ ಹೊಸ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಲಾಗಿದೆ. ಈ ಪೈಕಿ ರೆಡ್ಮಿ ಬುಕ್ ಪ್ರೊ 14 (2025) ಗ್ರಾಹಕರ ಗಮನ ಸೆಳೆದಿದೆ.
ರೆಡ್ಮಿ ಬುಕ್ ಪ್ರೊ 14 (2025) ಲ್ಯಾಪ್‌ಟಾಪ್ ವಿಂಡೋಸ್ 11 ನಲ್ಲಿ (Windows 11) ಕೆಲಸ ನಿರ್ವಹಿಸುತ್ತದೆ. ಇದು 14 ಇಂಚಿನ 2.8K ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 1,800 x 2,880 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಹಾಗೆಯೇ ಈ ಡಿಸ್ಪ್ಲೇ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ರೆಡ್ಮಿ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ 7 255H ಅಥವಾ ಇಂಟೆಲ್ ಕೋರ್ ಅಲ್ಟ್ರಾ 5 225H ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು 32GB RAM ಮತ್ತು 1TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ರೆಡ್ಮಿ ಬುಕ್ ಪ್ರೊ 14 (2025) ಲ್ಯಾಪ್‌ಟಾಪ್ 1080p ಮುಂಭಾಗದ ಕ್ಯಾಮೆರಾ ಹೊಂದಿದೆ. ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಪವರ್ ಬಟನ್ ಮತ್ತು ಪೂರ್ಣ ಗಾತ್ರದ ಕೀಬೋರ್ಡ್ ಅನ್ನು ಸಹ ಒಳಗೊಂಡಿದೆ. ಇದು 6600rpm ನೊಂದಿಗೆ ಹರಿಕೇನ್ ಕೂಲಿಂಗ್ ಸಿಸ್ಟಮ್, ಡ್ಯುಯಲ್ 12V ಫ್ಯಾನ್‌ಗಳು ಮತ್ತು ಎರಡು ಹೀಟ್ ಪೈಪ್‌ಗಳನ್ನು ಸಹ ಹೊಂದಿದೆ. ಜೊತೆಗೆ 70W ವರೆಗೆ ಕಾರ್ಯಕ್ಷಮತೆಯನ್ನು ಬೆಂಬಲಿಸುತ್ತದೆ. ಈ ಲ್ಯಾಪ್‌ಟಾಪ್ 80Wh ಬ್ಯಾಟರಿ ಹೊಂದಿದೆ. ಇದು 100W GaN ಅಡಾಪ್ಟರ್‌ನೊಂದಿಗೆ ಬರುತ್ತದೆ. ಈ ಬ್ಯಾಟರಿಯನ್ನು ಒಂದೇ ಚಾರ್ಜ್‌ನಲ್ಲಿ 31 ಗಂಟೆಗಳವರೆಗೆ ಬಳಸಬಹುದು. ಕನೆಕ್ಟಿವಿಟಿ ಆಯ್ಕೆಗಳು ಮತ್ತು ಪೋರ್ಟ್‌ಗಳು ರೆಡ್ಮಿ ಬುಕ್ ಪ್ರೊ 16 ಲ್ಯಾಪ್‌ಟಾಪ್ ನಂತೆಯೇ ಇವೆ.
ರೆಡ್ಮಿ ಬುಕ್ ಪ್ರೊ 14 (2025) ಬೆಲೆ
ರೆಡ್ಮಿ ಬುಕ್ ಪ್ರೊ 14 (2025) ಲ್ಯಾಪ್‌ಟಾಪ್‌ನ ಇಂಟೆಲ್ ಅಲ್ಟ್ರಾ 5 225H ಸಿಪಿಯು ಮತ್ತು 16GB RAM ಹೊಂದಿರುವ ರೂಪಾಂತರದ ಬೆಲೆ 68,000 ರೂ.ಗಳ ಆರಂಭಿಕ ಬೆಲೆಯಿಂದ ಪ್ರಾರಂಭವಾಗುತ್ತದೆ. ಅದೇ ಸಿಪಿಯು ಮತ್ತು 32GB RAM ಹೊಂದಿರುವ ರೂಪಾಂತರದ ಬೆಲೆ 72,000 ರೂ. ಆಗಿದೆ. ಹಾಗೆಯೇ ಇಂಟೆಲ್ ಕೋರ್ ಅಲ್ಟ್ರಾ 7 255H ಪ್ರೊಸೆಸರ್ ಹೊಂದಿರುವ ವೇರಿಯಂಟ್ ಬೆಲೆಯನ್ನು 83,000 ರೂ.ಗೆ ಪರಿಚಯಿಸಲಾಗಿದೆ. ಇದನ್ನು ಕ್ಲಿಯರ್ ಸ್ಕೈ ಬ್ಲೂ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.
ರೆಡ್ಮಿ ಬುಕ್ ಪ್ರೊ 16 (2025) ಬೆಲೆ
ಹೊಸ ರೆಡ್ಮಿ ಬುಕ್ ಪ್ರೊ 16 (2025) ಲ್ಯಾಪ್‌ಟಾಪ್‌ನ ಇಂಟೆಲ್ ಅಲ್ಟ್ರಾ 5 225H ಪ್ರೊಸೆಸರ್ ಆಯ್ಕೆಯ ಬೆಲೆ 77,000 ರೂ. ಆಗಿದೆ. ಇಂಟೆಲ್ ಅಲ್ಟ್ರಾ 7 255H ಸಿಪಿಯು ರೂಪಾಂತರವು 89,000 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಹೊಸ ಲ್ಯಾಪ್‌ಟಾಪ್ ಸ್ಟಾರ್ ಗ್ರೇ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಸ್ತುತ, ಎರಡೂ ಲ್ಯಾಪ್‌ಟಾಪ್‌ಗಳು ಚೀನಾದಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತವೆ. ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೂ ಇವುಗಳನ್ನು ತರುತ್ತದೆ.

ರೆಡ್ಮಿ ಬುಕ್ ಪ್ರೊ 16 (2025) ವೈಶಿಷ್ಟ್ಯಗಳು
ರೆಡ್ಮಿ ಬುಕ್ ಪ್ರೊ 16 (2025) ಲ್ಯಾಪ್ ವಿಂಡೋಸ್ 11 ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 16 ಇಂಚಿನ 3.1K ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 1,920 x 3,072 ಪಿಕ್ಸೆಲ್ ರೆಸಲ್ಯೂಶನ್, 165Hz ರಿಫ್ರೆಶ್ ದರ, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಲ್ಯಾಪ್‌ಟಾಪ್ 32GB RAM ಮತ್ತು 1TB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ರೆಡ್ಮಿ ಬುಕ್ ಪ್ರೊ 16 1080p ವೆಬ್‌ಕ್ಯಾಮ್ ಹೊಂದಿದೆ
ರೆಡ್ಮಿ ಬುಕ್ ಪ್ರೊ 16 99Wh ಬ್ಯಾಟರಿ ಮತ್ತು 140W GaN ಯುಎಸ್‌ಬಿ ಟೈಪ್ ಸಿ ಅಡಾಪ್ಟರ್ ಹೊಂದಿದೆ. ಈ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 30 ಗಂಟೆಗಳವರೆಗೆ ಬಳಕೆಯನ್ನು ನೀಡುತ್ತದೆ. ಈ ಹೊಸ ರೆಡ್ಮಿ ಲ್ಯಾಪ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಪವರ್ ಬಟನ್ ಸಹ ಹೊಂದಿದೆ. ಇದು ಪೂರ್ಣ ಗಾತ್ರದ ಕೀಬೋರ್ಡ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಡ್ಯುಯಲ್ 2W ಸ್ಪೀಕರ್‌ಗಳನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಬ್ಲೂಟೂತ್ 5.2 ಮತ್ತು ವೈ-ಫೈ 6 ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








