Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರೆಡ್ಮಿಬುಕ್ 14 ಪ್ರೊ' ಬಿಡುಗಡೆ!..ವಿಶ್ವದ ಅತ್ಯುತ್ತಮ ಅಗ್ಗದ ಲ್ಯಾಪ್‌ಟಾಪ್?!
ರೆಡ್‌ಮಿ ನೋಟ್ 8, ರೆಡ್‌ಮಿ ನೋಟ್ 8 ಪ್ರೊ ಮತ್ತು ರೆಡ್‌ಮಿ ಟಿವಿಯೊಂದಿಗೆ ಬಹುನಿರೀಕ್ಷಿತ 'ರೆಡ್‌ಮಿಬುಕ್ 14 ಪ್ರೊ' ಲ್ಯಾಪ್‌ಟಾಪ್ ಕೂಡ ಇದೇ ಗುರುವಾರದಂದು ಮಾರುಕಟ್ಟೆಗೆ ಎಂಟ್ರಿ ನೀಡಿದೆ. 10ನೇ ಜನ್ ಇಂಟೆಲ್ ಪ್ರೊಸೆಸರ್ಗಳಿಂದ ನಿಯಂತ್ರಿಸಲ್ಪಡುವ ರೆಡ್ಮಿಬುಕ್ 14 ಪ್ರೊ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರೇ ಮತ್ತು ಪಿಂಕ್ ಬಣ್ಣದ ಹಿಂದಿನ ಬೆಳ್ಳಿಯ ನೆರಳಿರುವಂತೆ ಎರಡು ಹೊಸ ಬಣ್ಣ ಆಯ್ಕೆಗಳಲ್ಲಿ ನೂತನ 'ರೆಡ್‌ಮಿಬುಕ್ 14 ಪ್ರೊ' ಗ್ರಾಹಕರನ್ನು ಸೆಳೆಯಲು ಬಂದಿದೆ.

ರೆಡ್‌ಮಿ ಬುಕ್ 14 ಪ್ರೊನ ಅತ್ಯುನ್ನತ ಶ್ರೇಣಿಯು 10ನೇ ಜನ್ ಇಂಟೆಲ್ ಕೋರ್ ಐ 7 (10510 ಯು) ಪ್ರೊಸೆಸರ್ ಮತ್ತು 8 ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಕಾರ್ಯನಿರ್ವಹಿಸಲಿದೆ. ಬೇಸ್ ರೂಪಾಂತರವು ಇಂಟೆಲ್ ಕೋರ್ ಐ5 (10210 ಯು) ಸಿಪಿಯು 8 ಜಿಬಿ RAM ಮತ್ತು 256 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್ ಖರೀದಿಸಲು ಬೆಸ್ಟ್ ಇದು ಆಯ್ಕೆಯಾಗಲಿದೆ. ಆದರೆ, ಇದು ಈಗ ಚೀನಾದಲ್ಲಷ್ಟೇ ಬಿಡುಗಡೆಯಾಗಿದೆ.
ಇಂಟೆಲ್ ಕೋರ್ ಐ5 (10210 ಯು) ಸಿಪಿಯು ಮತ್ತು 8 ಜಿಬಿ RAM ಮತ್ತು 256 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿರುವ ಬೇಸ್ ಆವೃತ್ತಿಯ ಬೆಲೆ ಸಿಎನ್‌ವೈ 3,999 (ಸರಿಸುಮಾರು ರೂ .40,000).ಗಳಾಗಿವೆ. ಹಾಗಾದರೆ, ಬಹುನಿರೀಕ್ಷಿತ 'ರೆಡ್‌ಮಿಬುಕ್ 14 ಪ್ರೊ' ಲ್ಯಾಪ್‌ಟಾಪ್ ಹೇಗಿದೆ? ರೆಡ್ಮಿಬುಕ್ 14 ಪ್ರೊ' ಲ್ಯಾಪ್‌ಟಾಪ್ ಫೀಚರ್ಸ್ ಯಾವುವು? ಮತ್ತು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್ ಖರೀದಿಸಲು ಬೆಸ್ಟ್ ಆಯ್ಕೆಯಾಗುವುದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ರೆಡ್‌ಮಿಬುಕ್ 14 ಪ್ರೊ' ಇಂಟೆಲ್ ಕೋರ್ ಐ5 ಬೆಲೆ
ಇಂಟೆಲ್ ಕೋರ್ ಐ5 (10210 ಯು) ಸಿಪಿಯು ಮತ್ತು 8 ಜಿಬಿ RAM ಮತ್ತು 256 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿರುವ ಬೇಸ್ ಆವೃತ್ತಿಯ ಬೆಲೆ ಸಿಎನ್‌ವೈ 3,999 (ಸರಿಸುಮಾರು ರೂ .40,000).ಗಳಾಗಿವೆ. ಮಧ್ಯಮ ಹಂತದ ಮಾದರಿಯು ಅದೇ ಇಂಟೆಲ್ ಕೋರ್ ಐ5 (10210 ಯು) ಪ್ರೊಸೆಸರ್ ಹೊಂದಿರುವ 8 ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಹೊಂದಿರರುವ ಮಾದರಿಯು ಸಿಎನ್‌ವೈ 4,499 (ರೂ. 45,000) ಬೆಲೆಯನ್ನು ಹೊಂದಿದೆ.

'ರೆಡ್‌ಮಿಬುಕ್ 14 ಪ್ರೊ' ಇಂಟೆಲ್ ಕೋರ್ ಐ7 ಬೆಲೆ
ರೆಡ್‌ಮಿ ಬುಕ್ 14 ಪ್ರೊನ ಅತ್ಯುನ್ನತ ಶ್ರೇಣಿಯು 10 ನೇ ಜನ್ ಇಂಟೆಲ್ ಕೋರ್ ಐ 7 (10510 ಯು) ಪ್ರೊಸೆಸರ್ ಮತ್ತು 8 ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಖರೀದಿದಾರರಿಗೆ ಸಿಎನ್‌ವೈ 4,999 (ಸರಿಸುಮಾರು 50,000 ರೂ.) ರೂ.ಗಳಿಗೆ ಖರೀದಿಗೆ ಲಭ್ಯವಿರಲಿದೆ. 10 ನೇ ಜನ್ ಇಂಟೆಲ್ ಪ್ರೊಸೆಸರ್ ಹೊಂದಿರುವ ರೆಡ್ಮಿಬುಕ್ 14 ಪ್ರೊ ಸೆಪ್ಟೆಂಬರ್ 6 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.

'ರೆಡ್‌ಮಿಬುಕ್ 14 ಪ್ರೊ'ನ ಒಟ್ಟಾರೆ ವಿವರಣೆ ಹೀಗಿದೆ
ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿರುವ ಎಲ್ಲಾ ರೆಡ್ಮಿಬುಕ್ 14 ಪ್ರೊ 10ನೇ ಜನ್ ಇಂಟೆಲ್ ಪ್ರೊಸೆಸರ್ಗಳಿಂದ ನಿಯಂತ್ರಿಸಲ್ಪಡುತ್ತದೆ. ಜೊತೆಗೆ ಎಲ್ಲಾ ಮೂರು ರೂಪಾಂತರಗಳು ಎನ್‌ವಿಡಿಯಾ ಎಂಎಕ್ಸ್ 250 ಜಿಪಿಯು ಅನ್ನು 2 ಜಿಬಿ ಜಿಡಿಡಿಆರ್ 5 ಮೆಮೊರಿಯೊಂದಿಗೆ ಅವಲಂಬಿಸಿವೆ. ಆದರೆ, ರೆಡ್‌ಮಿಬುಕ್ 14 ಪ್ರೊನ ಅತ್ಯುನ್ನತ ಶ್ರೇಣಿಯು 10 ನೇ ಜನ್ ಇಂಟೆಲ್ ಕೋರ್ ಐ 7 ಪ್ರೊಸೆಸರ್ ಅನ್ನು ಹೊಂದಿರುವುದು ಇವುಗಳಲ್ಲಿ ಇರುವ ಪ್ರಮುಖ ಬದಲಾವಣೆ ಎನ್ನಬಹುದು. ಇನ್ನುಳಿದಂತೆ ಒಂದೇ ರೀತಿಯ ಫೀಚರ್ಸ್ ಅನ್ನು ನಾವು ನೋಡಬಹುದು.

'ರೆಡ್‌ಮಿಬುಕ್ 14 ಪ್ರೊ'ನ ವಿನ್ಯಾಸ ಹೇಗಿದೆ?
ರೆಡ್ಮಿಬುಕ್ 14 ಪ್ರೊ 14-ಇಂಚಿನ ಪೂರ್ಣ-ಎಚ್‌ಡಿ (1,920 x 1080 ಪಿಕ್ಸೆಲ್‌ಗಳು) ಪ್ರದರ್ಶನವು 178 ಡಿಗ್ರಿ ವೀಕ್ಷಣಾ ಕೋನ ಮತ್ತು 250 ನಿಟ್‌ಗಳ ಗರಿಷ್ಠ ಹೊಳಪನ್ನು ಒಳಗೊಂಡಿದೆ. ಲ್ಯಾಪ್ಟಾಪ್ ಸುಮಾರು 1.5 ಕಿ.ಗ್ರಾಂ ತೂಗುತ್ತದೆ ಮತ್ತು 323 x 228 x 17.95 ಮಿಮೀ ಆಯಾಮದಲ್ಲಿ ಬಳಕೆದಾರರಿಗೆ ಅತ್ಯುನ್ನತ ಅನುಭವ ಸಿಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ರೆಡ್‌ಮಿಬುಕ್ 14 ಪ್ರೊನ ಸಾಮಾನ್ಯ ಸಿಲ್ವರ್ ಪೇಂಟ್ ಹೊರತುಪಡಿಸಿ, ರೆಡ್‌ಮಿ ರೆಡ್ಮಿಬುಕ್ 14 ಪ್ರೊ ಪಿಂಕ್ ಮತ್ತು ಗ್ರೇನ ಎರಡು ಹೊಸ ಬಣ್ಣಗಳಲ್ಲಿ ಬಂದಿದೆ.

'ರೆಡ್‌ಮಿಬುಕ್ 14 ಪ್ರೊ' ಇತರೆ ಫೀಚರ್ಸ್
ರೆಡ್ಮಿಬುಕ್ 14 ಪ್ರೊನಲ್ಲಿ ಪೋರ್ಟ್ ಆಯ್ಕೆಯು ಎರಡು ಯುಎಸ್‌ಬಿ 3.0 ಪೋರ್ಟ್‌ಗಳು, ಒಂದು ಯುಎಸ್‌ಬಿ 2.0 ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಒಂದು ಎಚ್‌ಡಿಎಂಐ ಪೋರ್ಟ್ ಅನ್ನು ಅಳವಡಿಸಲಾಗಿದೆ. ಈ ಲ್ಯಾಪ್ಟಾಪ್ 46W ಬ್ಯಾಟರಿಯನ್ನು ಹೊಂದಿದ್ದು, ಕೇವಲ 35 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಮತ್ತು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ 10 ಗಂಟೆಗಳ ಕಾಲ ಉಳಿಯುತ್ತದೆ. ವಿಡೋಂಸ್ 10 ಬೆಂಬಲಿಸುವ ಲ್ಯಾಪ್‌ಟಾಪ್ ಎನ್ವಿಡಿಯಾ ಜೀಫೋರ್ಸ್ MX250 ಗ್ರಾಫಿಕ್ ಕಾರ್ಡ್ ಹೊಂದಿರುವುದು ವಿಶೇಷವಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470