Subscribe to Gizbot

ಪುಟ್ಟ ಸ್ಕ್ರೀನಿನ ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗುಂಗಿನಲ್ಲಿ...

Posted By: Staff
ಪುಟ್ಟ ಸ್ಕ್ರೀನಿನ ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗುಂಗಿನಲ್ಲಿ...
ಗ್ಯಾಲಕ್ಸಿ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಂದ ನಂತರ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಹೆಚ್ಚು ಜನಪ್ರಿಯವಾಗಿದೆ. ಕಟ್ಟಿಂಗ್ ಎಡ್ಜ್ ತಂತ್ರಜ್ಞಾನದ ಮೂಲಕ ಕಂಪನಿಯು ಲ್ಯಾಪ್ ಟಾಪ್, ನೋಟ್ ಬುಕ್ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸದೃಢವಾಗುತ್ತಿದೆ.

ಆಕರ್ಷಕ ಫೀಚರುಗಳ ಸ್ಯಾಮ್ ಸಂಗ್ ಟ್ಯಾಬ್ಲೆಟೊಂದು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಟ್ಯಾಬ್ಲೆಟ್ ವಿಶ್ಲೇಷಕರು ಈ ಟ್ಯಾಬ್ಲೆಟ್ ಗುಂಗಿನಿಂದ ಹೊರಬಂದಿಲ್ಲ. ಅವರೆಲ್ಲರು ನೀಡಿರುವ ಮಾಹಿತಿ ಪ್ರಕಾರ ಇದು ಹತ್ತು ಹಲವು ಫೀಚರುಗಳ ಟ್ಯಾಬ್ಲೆಟ್ ಆಗಿರಲಿದೆ. ಇದು ಫೆಬ್ರವರಿ 2012ರಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ.

ಯಾವೆಲ್ಲ ಫೀಚರ್ಸ್ ಇರಬಹುದು?

* 11.6 ಇಂಚಿನ ಸ್ಕ್ರೀನ್

* ಸ್ಯಾಮ್ ಸಂಗ್ ಎಕ್ಸೊನೊಸ್ ಪ್ರೊಸೆಸರ್

* ಐಸ್ ಕ್ರೀಮ್ ಸ್ಯಾಂಡ್ ವಿಚ್ ಪ್ರೊಸೆಸರ್

ಈ ಟ್ಯಾಬ್ಲೆಟ್ ಕುರಿತು ಸಾಕಷ್ಟು ವದಂತಿಗಳು ನೆಟ್ ಲೋಕದಲ್ಲಿ ಹರಿದಾಡುತ್ತಿವೆ. ಇದು ಐಸ್ ಕ್ರೀಮ್ ಸ್ಯಾಂಡ್ ವಿಚ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಈ ಸುದ್ದಿ ನಿಜವಾದಲ್ಲಿ ಇದು ಸ್ಯಾಮ್ ಸಂಗ್ ಹೊರತಂದ ಮೊದಲ ಸ್ಯಾಂಡ್ ವಿಚ್ ಒಎಸ್ ಟ್ಯಾಬ್ಲೆಟ್ ಆಗಲಿದೆ.

ಈ ಟ್ಯಾಬ್ಲೆಟ್ ರೆಟಿನಾ ಡಿಸ್ ಪ್ಲೇ ಹೊಂದಿರಲಿದೆಯಂತೆ. ಇದು ಆಪಲ್ ಐಫೋನ್ 4 ಮತ್ತು ಆಪಲ್ ಐಫೋನ್ 4ಎಸ್ ಗಳಲ್ಲಿರುವ ಫೀಚರು. ಈ ವದಂತಿ ನಿಜವಾಗಿರುವುದು ಕೊಂಚ ಡೌಟ್. ಆದರೆ ಎಲ್ಲಾ ವದಂತಿಗಳು ಸುಳ್ಳಾಗುವುದಿಲ್ಲವಲ್ಲ.

ಹೀಗೆ ಮಾರುಕಟ್ಟೆಗೆ ಇನ್ನಷ್ಟೇ ಬರಬೇಕಿರುವ ಈ ಟ್ಯಾಬ್ಲೆಟ್ ಕುರಿತು ಸಾಕಷ್ಟು ಬಿಸಿಬಿಸಿ ಚರ್ಚೆಗಳನ್ನು ಗ್ಯಾಡ್ಜೆಟ್ ಪ್ರೀಯರು ನಡೆಸುತ್ತಿದ್ದಾರೆ. ಇದರ ದರದ ಕುರಿತು ಯಾವುದೇ ಮಾಹಿತಿಯಿಲ್ಲ. ದರವೇಕೆ ಈ ಟ್ಯಾಬ್ಲೆಟಿಗೆ ಯಾವ ಹೆಸರು ಇರಬಹುದು ಎಂದು ತಿಳಿದಿಲ್ಲ. ಒಂದೆರಡು ತಿಂಗಳಲ್ಲಿ ಈ ಟ್ಯಾಬ್ಲೆಟ್ ಬಗ್ಗೆ ಸಾಕಷ್ಟು ಮಾಹಿತಿ ತಿಳಿಯಬಹುದು. ಅಲ್ಲಿವರೆಗೆ ಕಾಯೋಣ ಅಲ್ಲವೇ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot