ಸ್ಯಾಮ್ ಸಂಗ್ 5 ಸೀರಿಸ್: ಖರೀದಿಸುವ ಮುನ್ನ ಓದಿ

ಕೆಲವು ಫೀಚರುಗಳು
* 13.3 ಇಂಚು ಮತ್ತು 14 ಇಂಚಿನ ಸ್ಕ್ರೀನ್ ನಲ್ಲಿ ಲಭ್ಯ
* ಡಿಸ್ ಪ್ಲೇ ರೆಸಲ್ಯೂಷನ್ 1366 x 768 ಪಿಕ್ಸೆಲ್
* ಬೆಳಕು ರಿಫ್ಲೆಕ್ಟ್ ಆಗದಂತೆ ಕೋಟಿಂಗ್
* ಅಲ್ಯುಮಿನಿಯಂ ಬಾಡಿ
* ಎರಡನೇ ತಲೆಮಾರಿನ ಇಂಟೆಲ್ ಪ್ರೊಸೆಸರ್
* 16 ಜಿಬಿ ಸೋಲಿಡ್ ಸ್ಟೇಟ್ ಡಿಸ್ಕ್
* 8 ಜಿಬಿಗೂ ಅಧಿಕ RAM
* ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್
* ಇಂಟೆಲ್ ಹೈಡೆಫಿನೇಷನ್ ಗ್ರಾಫಿಕ್ಸ್
* ಎಚ್ ಡಿಎಂಐ ಪೋರ್ಟ್ಸ್
* ವೈಫೈ
* ಯುಎಸ್ ಬಿ
* ಆಪ್ಟಿಕಲ್ ಡಿಸ್ಕ್ ಡ್ರೈವ್(14 ಇಂಚಿನ ಅಲ್ಟ್ರಾಬುಕ್ ಗೆ ಮಾತ್ರ)
13.3 ಇಂಚು ಮತ್ತು 14 ಇಂಚಿನ ಆವೃತ್ತಿಗಳು ಸಣ್ಣದಾಗಿದ್ದು ಆಕರ್ಷಕವಾಗಿವೆ. ಇದರಲ್ಲಿ 13.3 ಇಂಚಿನ ಅಲ್ಟ್ರಾ ಬುಕ್ ತೂಕ 1.4 ಕೆ ಜಿ ಮತ್ತು 14 ಇಂಚಿನ ಆವೃತ್ತಿ 1.8 ಕೆ.ಜಿ ತೂಕವಿದೆ. ಇವೆರಡರಲ್ಲಿ ಕೆಲವು ಫೀಚರು ಮತ್ತು ವಿಶೇಷತೆಗಳ ವ್ಯತ್ಯಾಸವಿದೆ ಅಷ್ಟೇ.
ಸಾಲಿಡ್ ಸ್ಟೇಟ್ ಡ್ರೈವ್ ಇರುವುದು ಉತ್ತಮ. 13.3 ಇಂಚಿನ ಬುಕ್ 500 ಜಿಬಿ ಹಾರ್ಡ್ ಡಿಸ್ಕ್ ಮತ್ತು 14 ಇಂಚಿನ ಬುಕ್ 1 ಟಿಬಿ ಹಾರ್ಡ್ ಡಿಸ್ಕ್ ಸ್ಥಳಾವಕಾಶ ಹೊಂದಿದೆ. ಕಂಪನಿ ಇನ್ನೂ ಈ ಅಲ್ಟ್ರಾ ಬುಕ್ ದರ ಪ್ರಕಟಿಸಿಲ್ಲ. ಇದರ ದರ ಕೈಗೆಟುಕವ ಎತ್ತರದಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications








