ಸ್ಯಾಮ್‌ಸಂಗ್‌ ಕ್ರೋಮ್‌ಬುಕ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಯಾಮ್‌ಸಂಗ್‌ ಕ್ರೋಮ್‌ಬುಕ್‌ನ್ನು ಬಿಡುಗಡೆ ಮಾಡಿದೆ.ಈ ಹಿಂದೆ ಏಸರ್‌ ಸಿ720 ಮತ್ತು ಎಚ್‌ಪಿ ಕ್ರೋಮ್‌ಬುಕ್‌14ನ್ನು ಬಿಡುಗಡೆ ಮಾಡಿದ ಗೂಗಲ್‌ ಈಗ ಮಾರುಕಟ್ಟೆಗೆ ಮೂರನೇಯ ಕ್ರೋಮ್‌ ಬುಕ್‌ನ್ನು ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್‌ ಕ್ರೋಮ್‌ಬುಕ್‌ನಲ್ಲಿ ಗೂಗಲ್‌ನವರೇ ಅಭಿವೃದ್ಧಿ ಪಡಿಸಿರುವ ಕ್ರೋಮ್‌ ಆಪರೇಟಿಂಗ್‌ ಸಿಸ್ಟಂ ಇದ್ದು, ಮಾರುಕಟ್ಟೆಯಲ್ಲಿರುವ ವಿಂಡೋಸ್‌ ಓಎಸ್‌ ಸಪೋರ್ಟ್‌ ಮಾಡುವ ಯಾವುದೇ ಪ್ರೋಗ್ರಾಂಗಳು ಈ ಲ್ಯಾಪ್‌ಟಾಪ್‌‌ನಲ್ಲಿ ರನ್‌ ಅಗುವುದಿಲ್ಲ.

ಹೊಸ ಕ್ರೋಮ್‌ಬುಕ್‌ 289.6x208.5x17.5 ಮಿ.ಮೀಟರ್‌ ಗಾತ್ರ,1.1 ಕೆಜಿ ತೂಕವನ್ನು ಹೊಂದಿದೆ. ಬೆಳ್ಳಿ ಬಣ್ಣದಲ್ಲಿ ಈ ಲ್ಯಾಪ್‌ಟಾಪ್‌ ಬಿಡುಗಡೆಯಾಗಿದ್ದು26,975 ಬೆಲೆಯನ್ನು ನಿಗದಿ ಮಾಡಿದೆ.ಹೊಸ ಕ್ರೋಮ್‌ ಬುಕ್‌ ಲ್ಯಾಪ್‌ಟಾಪ್ ಕ್ರೋಮಾ ಮತ್ತು ರಿಲಾಯನ್ಸ್‌ ಡಿಜಿಟಲ್‌ನಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್‌ನ್ನು ಖರೀದಿಸಿದ ಬಳಕೆದಾರರಿಗೆ ಗೂಗಲ್‌ ಆಫರ್‌ ಪ್ರಕಟಿಸಿದ್ದು,100 GB ಡೇಟಾವನ್ನು ತನ್ನ ಡ್ರೈವ್‌ನಲ್ಲಿ ಉಚಿತವಾಗಿ ಸಂಗ್ರಹಿಸಬಹುದು ಎಂದು ಹೇಳಿದೆ.

 ಸ್ಯಾಮ್‌ಸಂಗ್‌ ಕ್ರೋಮ್‌ಬುಕ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಸ್ಯಾಮ್‌ಸಂಗ್‌ ಕ್ರೋಮ್‌ಬುಕ್‌
ವಿಶೇಷತೆ:
11.6 ಇಂಚಿನ ಸ್ಕ್ರೀನ್‌ ಎಚ್‌ಡಿ ಎಲ್‌ಇಡಿ ಆಂಟಿ ರಿಫ್ಲೆಕ್ಟಿವ್‌‌‌ ಸ್ಕ್ರೀನ್‌(1366x768 ಪಿಕ್ಸೆಲ್‌)
ಗೂಗಲ್‌ ಕ್ರೋಮ್‌ ಓಎಸ್‌
1.7GHz ಸ್ಯಾಮ್‌ಸಂಗ್‌ Exynos 5 ಡ್ಯುಯಲ್‌ ಕೋರ್‌ಪ್ರೊಸೆಸರ್‌
2GB ರ್‍ಯಾಮ್‌
16GB ಸಾಲಿಡ್‌ ಸ್ಟೇಟ್‌ ಡ್ರೈವ್‌
16 GB eMMC ಹಾರ್ಡ್‌ಡಿಸ್ಕ್‌
ವಿಜಿಎ ಕ್ಯಾಮೆರಾ
ಬ್ಯಾಟರಿ ಬ್ಯಾಕಪ್‌7 ಗಂಟೆ
1 x USB 2.0, 1 x USB 3.0,ಎಚ್‌ಡಿಎಂಐ ಪೋರ್ಟ್‌,ಬ್ಲೂಟೂತ್‌

ಇದನ್ನೂ ಓದಿ: ನೀವು ನೋಡಿರದ ಫನ್ನಿ ಕ್ರಿಯೇಟಿವ್‌ ಡೆಸ್ಕ್‌ಟಾಪ್‌ ವಾಲ್‌ಪೇಪರ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot