ಕೊನೆಗೂ ಬಂತು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1

Posted By: Varun
ಕೊನೆಗೂ ಬಂತು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1
ಸ್ಯಾಮ್ಸಂಗ್ ನ ಬಹು ನಿರೀಕ್ಷಿತ 10 ಇಂಚ್ ಟ್ಯಾಬ್ಲೆಟ್ ಆದ ಗ್ಯಾಲಕ್ಸಿ ನೋಟ್ 10.1 ಕೊನೆಗೂ ಬಿಡುಗಡೆಯ ಭಾಗ್ಯ ಕಂಡಿದೆ. ಫೆಬ್ರುವರಿಯಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಅನಾವರಣಗೊಂಡಿದ್ದ ಈ ಟ್ಯಾಬ್ಲೆಟ್ ಅನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಿದೆ.

ಈಗಾಗಲೇ ಆನ್ಲೈನ್ ಮೂಲಕ 2 ಸಾವಿರ ರೂಪಾಯಿ ಕೊಟ್ಟು ಪ್ರೀ-ಆರ್ಡರ್ ಮಾಡಬಹುದಾಗಿದ್ದು, ಇದರ ಫೀಚರುಗಳು ಈ ರೀತಿ ಇವೆ:

1) ಫಾರ್ಮ್ ಫ್ಯಾಕ್ಟರ್: 262 x 180 x 8.9mm ಇದ್ದು 580 ಗ್ರಾಂ ತೂಗುತ್ತದೆ.

2) ಡಿಸ್ಪ್ಲೇ: 10.1 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್, 1280 x 800 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ.

3) ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 4.0.3 ಐಸ್ ಕ್ರೀಮ್ ಸ್ಯಾಂಡ್ವಿಚ್.

4) ಪ್ರೋಸೆಸರ್: 1.4 GHz ಕ್ವಾಡ್ ಕೋರ್ Exynos ಪ್ರೋಸೆಸರ್

5) ಮೆಮೊರಿ: 16GB, 32GB ಹಾಗು 64GB SD ಕಾರ್ಡ್ ಸ್ಲಾಟ್ ಹಾಗು 64GB ವರೆಗೂ ವಿಸ್ತರಿಸಬಹುದಾದ ಮೆಮೊರಿ, 2GB ರಾಮ್.

6) ಕ್ಯಾಮರಾ: 5MP ಹಿಂಬದಿಯ ಕ್ಯಾಮರಾ, ಆಟೋ ಫೋಕಸ್ ಹಾಗು LED ಫ್ಲಾಶ್, 1.9MP ಮುಂಬದಿಯ ಕ್ಯಾಮರಾ.

7) ಕನೆಕ್ಟಿವಿಟಿ: ವೈಫೈ 802.11 a/b/g/n, ಬ್ಲೂಟೂತ್ 4.0, ಮೈಕ್ರೋ USB 2.0 ಹಾಗು ವೈಫೈ ಹಾಟ್ ಸ್ಪಾಟ್.

8 ) ಬ್ಯಾಟರಿ: 7000 mAh ಬ್ಯಾಟರಿ

9) ಬೆಲೆ: ಇನ್ನೂ ನಿಗದಿಯಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot