ಸ್ಯಾಮ್‌ಸಂಗ್‌ನಿಂದ 12 ಇಂಚಿನ ಟ್ಯಾಬ್ಲೆಟ್ ಬಿಡುಗಡೆ
ಸ್ಯಾಮ್‌ಸಂಗ್ ಮಾರುಕಟ್ಟೆಗೆ 12 ಇಂಚಿನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಗೆಲಾಕ್ಸಿ ನೋಟ್ ಪ್ರೊ ಹೆಸರಿನ ಟ್ಯಾಬ್ಲೆಟ್ ಬಿಡುಗಡೆ ಮಾಡಿದ್ದು 64,900 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
ಮೈಕ್ರೋ ಸಿಮ್ ಹಾಕಬಹುದಾದ ಈ ಟ್ಯಾಬ್ಲೆಟ್ ಕಿಟ್‌ಕ್ಯಾಟ್ ಓಎಸ್ ಒಳಗೊಂಡಿದ್ದು,3ಜಿ,4ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್ ಕನೆಕ್ಟಿವಿಟಿ ವಿಶೇಷತೆಗಳನ್ನು ಒಳಗೊಂಡಿದೆ. ಭಾರತ ಮಾರುಕಟ್ಟೆ ವೈಫೈ ಮತ್ತು 3ಜಿ ಕನೆಕ್ಟಿವಿಟಿ ಇರುವ ಟ್ಯಾಬ್ಲೆಟ್‌ನ್ನು ಸ್ಯಾಮ್‌ಸಂಗ್ ಬಿಡುಗಡೆ ಮಾಡಿದೆ.ಸ್ಟೈಲಸ್ ಪೆನ್‌ನೊಂದಿಗೆ ಟ್ಯಾಬ್ಲೆಟ್ ಬಿಡುಗಡೆಯಾಗಿದೆ.

1
295.6 x 204 x 8 ಮಿ.ಮೀ ಗಾತ್ರ, 753 ಗ್ರಾಂ ತೂಕದ ಟ್ಯಾಬ್ಲೆಟ್ 2560 x 1600 ಪಿಕ್ಸೆಲ್ ರೆಸೂಲೂಶನ್,247 ಪಿಪಿಐ ಹೊಂದಿರುವ 12.2 ಇಂಚಿನ ಸೂಪರ್ ಕ್ಲಿಯರ್ ಎಲ್‌ಸಿಡಿ ಸ್ಕ್ರೀನ್ ಹೊಂದಿದೆ.

2
ಈ ಟ್ಯಾಬ್ಲೆಟ್ 2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್ Adreno 330 ಗ್ರಾಫಿಕ್ ಪ್ರೊಸೆಸರ್‌ನ್ನು ಒಳಗೊಂಡಿದೆ.

3
ಟ್ಯಾಬ್ಲೆಟ್ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್,9500 mAh ಬ್ಯಾಟರಿಯನ್ನು ಒಳಗೊಂಡಿದೆ.

4
32/64 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,3 ಜಿಬಿ ರ್‍ಯಾಮ್‌ನ್ನು ಟ್ಯಾಬ್ಲೆಟ್ ಒಳಗೊಂಡಿದೆ.

5
ಸ್ಯಾಮ್‌ಸಂಗ್ ಈ ಟ್ಯಾಬ್ಲೆಟ್‌ಗೆ ಹಿಂದುಗಡೆ 8 ಎಂಪಿ ಕ್ಯಾಮೆರಾ ನೀಡಿದೆ. ಮುಂದುಗಡೆ 2 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.


Click it and Unblock the Notifications








