Home
ಕಂಪ್ಯೂಟರ್‌‌

Samsung: ಎರಡು ಹೊಸ ಟ್ಯಾಬ್ ಲಾಂಚ್; ದೊಡ್ಡ ಡಿಸ್ಪ್ಲೇ.. 8000mAh ಬ್ಯಾಟರಿ.. 50% ರಿಯಾಯಿತಿ.. ಬೆಲೆ ಎಷ್ಟು ಗೊತ್ತಾ?

ಟೆಕ್ ದೈತ್ಯ ಸ್ಯಾಮ್‌ಸಂಗ್ ಇಂದು ಎರಡು ಹೊಸ ಟ್ಯಾಬ್‌ಗಳನ್ನು ಬಿಡುಗಡೆ ಮಾಡಿದೆ. ಇವು ಗ್ಯಾಲಕ್ಸಿ ಟ್ಯಾಬ್ S10 FE ಸರಣಿ ಅಡಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಹೌದು, ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE (Samsung Galaxy Tab S10 FE) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE+ (Samsung Galaxy Tab S10 FE+) ಟ್ಯಾಬ್‌ಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಬನ್ನಿ, ಈ ಹೊಸ ಟ್ಯಾಬ್ಲೆಟ್‌ಗಳ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ಹೊಸ ಟ್ಯಾಬ್ಲೆಟ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಟೆಕ್ ದೈತ್ಯ ತೆಳುವಾದ ಬೆಜೆಲ್‌ಗಳೊಂದಿಗೆ ದೊಡ್ಡ ಡಿಸ್ಪ್ಲೇಗಳನ್ನು ಅಳವಡಿಸಿದೆ. ಇವುಗಳು ವರ್ಧಿತ ಉತ್ಪಾದಕತೆ, ಸೃಜನಶೀಲತೆ ಮತ್ತು ಮನರಂಜನೆಯ ಉದ್ದೇಶದೊಂದಿಗೆ ಸುಧಾರಿತ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಗೇಮಿಂಗ್ ಪ್ರಿಯರಿಗೆ ಈ ಗ್ಯಾಲಕ್ಸಿ ಟ್ಯಾಬ್ S10 FE ಮತ್ತು ಗ್ಯಾಲಕ್ಸಿ ಟ್ಯಾಬ್ S10 FE+ ಟ್ಯಾಬ್‌ಗಳು ಉತ್ತಮ ಆಯ್ಕೆಯಾಗಿವೆ.

Samsung: 2 ಹೊಸ ಟ್ಯಾಬ್ ಲಾಂಚ್; ದೊಡ್ಡ ಡಿಸ್ಪ್ಲೇ.. ಬಿಗ್ ಬ್ಯಾಟರಿ.. ಬೆಲೆ ನೋಡಿ

ಗ್ಯಾಲಕ್ಸಿ ಟ್ಯಾಬ್ S10 FE ಮತ್ತು ಗ್ಯಾಲಕ್ಸಿ ಟ್ಯಾಬ್ S10 FE+ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE+ ಟ್ಯಾಬ್ 13.1 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು ಈ ಸರಣಿಯಲ್ಲಿಯೇ ಅತಿ ದೊಡ್ಡ ಸ್ಕ್ರೀನ್ ಆಗಿದೆ. ಕಂಪನಿಯು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವಕ್ಕಾಗಿ ತೆಳುವಾದ ಬೆಜೆಲ್‌ಗಳನ್ನು ಅಳವಡಿಸಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE ಟ್ಯಾಬ್ 10.9 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಎರಡೂ ಟ್ಯಾಬ್ಲೆಟ್‌ಗಳು 90Hz ರಿಫ್ರೆಶ್ ದರದ ಬೆಂಬಲ ಹೊಂದಿವೆ. ಈ ಡಿಸ್ಪ್ಲೇಯು 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.

ಕಂಪನಿಯು ಗ್ಯಾಲಕ್ಸಿ ಟ್ಯಾಬ್ S10 FE ಮತ್ತು ಗ್ಯಾಲಕ್ಸಿ ಟ್ಯಾಬ್ S10 FE+ ಎರಡೂ ಟ್ಯಾಬ್ಲೆಟ್‌ಗಳಲ್ಲಿ Exynos 1580 ಪ್ರೊಸೆಸರ್ ಅಳವಡಿಸಿದೆ. ಇದು ಬಹುಕಾರ್ಯಗಳಿಗೆ, ಗೇಮಿಂಗ್ ಮತ್ತು ಸೃಜನಶೀಲ ಆಪ್‌ಗಳಿಗೆ ವೇಗವಾದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಗೂಗಲ್‌ನೊಂದಿಗೆ (Google) ಸರ್ಕಲ್ ಸರ್ಚ್, ಆಬ್ಜೆಕ್ಟ್ ಎರೇಸರ್ ಮತ್ತು ಗ್ರೂಪ್ ಫೋಟೋಗಳಿಗಾಗಿ ಬೆಸ್ಟ್ ಫೇಸ್‌ ಸೇರಿದಂತೆ ಹಲವು ಎಐ (AI) ವೈಶಿಷ್ಟ್ಯಗಳು ಲಭ್ಯವಿದೆ.

ಎರಡೂ ಟ್ಯಾಬ್ಲೆಟ್‌ಗಳು ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿವೆ. 8GB + 128GB ಮತ್ತು 12GB + 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಸ್ಕಿನ್ ಔಟ್ ಆಫ್ ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE ಟ್ಯಾಬ್ 8,000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿದೆ. ಆದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE+ ಟ್ಯಾಬ್ಲೆಟ್ 10,090mAh ಬ್ಯಾಟರಿ ಹೊಂದಿದೆ.

Samsung: 2 ಹೊಸ ಟ್ಯಾಬ್ ಲಾಂಚ್; ದೊಡ್ಡ ಡಿಸ್ಪ್ಲೇ.. ಬಿಗ್ ಬ್ಯಾಟರಿ.. ಬೆಲೆ ನೋಡಿ

ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಗ್ಯಾಲಕ್ಸಿ ಟ್ಯಾಬ್ S10 FE ಮತ್ತು ಗ್ಯಾಲಕ್ಸಿ ಟ್ಯಾಬ್ S10 FE+ ಟ್ಯಾಬ್ಲೆಟ್‌ಗಳು 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿವೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಫ್ರಂಟ್ ಕ್ಯಾಮೆರಾ ಸಹ ಒಳಗೊಂಡಿವೆ. ಈ ಟ್ಯಾಬ್ಲೆಟ್‌ಗಳು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿವೆ. ಕಂಪನಿಯು BLE ಬೆಂಬಲದೊಂದಿಗೆ S ಪೆನ್ ಅನ್ನು ಸಹ ನೀಡುತ್ತದೆ. ಇವು 5G, ವೈ-ಫೈ 6 ಮತ್ತು ಬ್ಲೂಟೂತ್ 5.3 ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳನ್ನು ಒಳಗೊಂಡಿವೆ.

ಗ್ಯಾಲಕ್ಸಿ ಟ್ಯಾಬ್ S10 FE ಮತ್ತು ಗ್ಯಾಲಕ್ಸಿ ಟ್ಯಾಬ್ S10 FE+ ಬೆಲೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S10 FE+ ಅನ್ನು ಬೂದು, ಬೆಳ್ಳಿ ಮತ್ತು ನೀಲಿ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಗ್ಯಾಲಕ್ಸಿ ಟ್ಯಾಬ್ S10 FE ಬೆಲೆ 42,700 ರೂ. ಆಗಿದೆ. 5G ಆವೃತ್ತಿಯು 51,240 ರೂ. ಬಿಡುಗಡೆಯಾಗಿದೆ (ಇದು ಬೂದು ಬಣ್ಣದಲ್ಲಿ ಮಾತ್ರ ಬರುತ್ತದೆ). ಗ್ಯಾಲಕ್ಸಿ ಟ್ಯಾಬ್ S10 FE+ ಬೆಲೆ 55,510 ರೂ. ಆಗಿದೆ. ಕಂಪನಿಯು ಮೇ 11ಕ್ಕಿಂತ ಮೊದಲು ಖರೀದಿಸುವ ಗ್ರಾಹಕರಿಗೆ ಬುಕ್ ಕವರ್ ಕೀಬೋರ್ಡ್ ಸ್ಲಿಮ್ ಮೇಲೆ ಶೇ.50 ರಷ್ಟು ರಿಯಾಯಿತಿ ನೀಡುತ್ತದೆ. ಏಪ್ರಿಲ್ 3 ರಿಂದ ಆಯ್ದ ಮಾರುಕಟ್ಟೆಗಳಲ್ಲಿ ಈ ಟ್ಯಾಬ್‌ಗಳು ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Samsung Galaxy Tab S10 FE and Samsung Galaxy Tab S10 FE+ launched: Check Price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+