ಸ್ಯಾಮ್ ಸಂಗ್ ಆರ್ಎಫ್411: ಮುದ್ದಾದ ಲ್ಯಾಪ್ ಟಾಪ್

ಆದರೆ ಇವೆರಡು ಗಾತ್ರಗಳ ನಡುವೆ ಇರುವ ಯಾವುದೇ ಲ್ಯಾಪ್ ಟಾಪ್ ಗಳು ಬರುತ್ತಿಲ್ಲವಲ್ಲ ಎನ್ನುವಿರಾ? Samsung RF411 ಲ್ಯಾಪ್ ಟಾಪ್ ನಿಮಗೆ ಸೂಕ್ತವಾಗಿದೆ. ಯಾಕೆಂದರೆ ಇದು ತುಂಬಾ ಸಣ್ಣದಾಗಿಯೂ ಇಲ್ಲ, ದೊಡ್ಡದಾಗಿಯೂ ಇಲ್ಲ. ಇದರ ಗಾತ್ರ 13.6 ಇಂಚು x 9.4 ಇಂಚು x 1.22-1.44 ಇಂಚಿದೆ. ಇದರ ತೂಕ ಕೇವಲ 2.3 ಕೆಜಿ ಇದೆ.
ಈ ಲ್ಯಾಪ್ ಟಾಪ್ ಅಂದವಾದ ಹೊರ ವಿನ್ಯಾಸ ಹೊಂದಿದೆ. ಸೂಕ್ತ ಗ್ರಾಫಿಕ್ಸ್ ನೊಂದಿಗೆ ಸ್ಯಾಮ್ ಸಂಗ್ ಲೋಗೊ ಇಷ್ಟವಾಗುತ್ತದೆ. ಈ ಲ್ಯಾಪ್ ಟಾಪ್ ಬಿಡಿಭಾಗಗಳನ್ನು ಎಡ ಮತ್ತು ಬಲ ಕಡೆಗಳಲ್ಲಿ ಸಮರ್ಪಕವಾಗಿ ಜೋಡಿಸಿರುವುದರಿಂದ ಹಿಡಿದುಕೊಂಡು ಹೋಗಲು ಆರಾಮದಾಯಕವಾಗಿದೆ.
ಇದರ ಡಿಸ್ ಪ್ಲೇ ಸುಮಾರು 14 ಇಂಚು ಇದ್ದು 1,366x769 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತದೆ. ಇದು ಎಲ್ ಇಡಿ ಹೈಡೆಫಿನೆಷನ್ ವಿಭಾಗದ ಡಿಸ್ ಪ್ಲೇಯಾಗಿದೆ. ಇದು ಟಚ್ ಪ್ಯಾಡ್ ಜೊತೆಗೆ ಸಂಪೂರ್ಣ ಗಾತ್ರ ಕೀಬೋರ್ಡ್ ಕೂಡ ಹೊಂದಿದೆ. ಇದು ಸ್ಕ್ರೋಲ್ ಮಾಡಬಹುದಾದ ಸ್ಲೈಡ್ ಟಚ್ ಪ್ಯಾಡ್ ಹೊಂದಿದೆ.
Samsung RF411 ಇಂಟೆಲ್ ಕೋರ್ ಐ7 ಪ್ರೊಸೆಸರ್ 2630 QM ಹೊಂದಿದೆ. ಇದರ ವೇಗ 2 ಗಿಗಾ ಹರ್ಟ್ಸ್. ಕಾಚ್ ಮೆಮೊರಿ 6 ಎಂಬಿ ಇದೆ. ಇದು ಈ ಲ್ಯಾಪ್ ಟಾಪ್ ನ ಕಾರ್ಯಕ್ಷಮತೆ ಹೆಚ್ಚಿಸಿದೆ. ಇದು ಮುಖ್ಯವಾಗಿ ಇಂಟಲ್ ಎಚ್ ಎಂ 65 ಚಿಪ್ ಸೆಟ್ ಹೊಂದಿದೆ. 4 ಜಿಬಿಯ ಡಿಡಿಆರ್3 ಮಾದರಿಯ 6ಜಿಬಿ ಮೆಮೊರಿ ಇದರಲ್ಲಿದೆ. S-ATA ಹಾರ್ಡ್ ಡಿಸ್ಕ್ ಸಾಮರ್ಥ್ಯ 500 ಜಿಬಿ ಇದೆ.
ಈ ಲ್ಯಾಪ್ ಟಾಪ್ ಎನ್ ವಿಡಿಯಾ ಜಿಫೋರ್ಸ್ ಜಿಟಿ 525(ಆಪ್ಟಿಮಸ್) ಗ್ರಾಫಿಕ್ಸ್ ಕಾರ್ಡ್ ಹೊಂದಿದೆ. 2 ಜಿಬಿ ಬಾಹ್ಯ ಗ್ರಾಫಿಕ್ಸ್ ಕಾರ್ಡ್ ಕೂಡ ಇದರಲ್ಲಿದೆ. ಇದರೊಳಗೆ ನಾಲ್ಕು ಯುಎಸ್ ಬಿ ಪೋರ್ಟ್ ಇದೆ. ಎಸ್ ಡಿ, ಎಸ್ ಡಿಎಚ್ ಸಿ, ಎಸ್ ಡಿಎಕ್ಸ್ ಸಿ ಮತ್ತು ಎಂಎಂಸಿ ಮಾದರಿಯ ಮೆಮೊರಿ ಕಾರ್ಡ್ ಗಳನ್ನು ಬಳಸಲು ಮೆಮೊರಿ ಕಾರ್ಡ್ ರೀಡರ್ ಇದರಲ್ಲಿದೆ.
ಅತ್ಯಧಿಕ ವೇಗದಲ್ಲಿ ಡೇಟಾ ರವಾನಿಸಲು ಸೂಕ್ತವಾಗುವಂತೆ 3.0 ವರ್ಷನ್ ಬ್ಲೂಟೂಥ್ ಇದೆ. ಜೊತೆಗೆ ವೈಫೈ ಕನೆಕ್ಟಿವಿಟಿ ಕೂಡ ಇದೆ. ಸ್ಟೀರಿಯೋ ಸ್ಪೀಕರ್, ಹೈಡೆಫಿನೆಷನ್ ಆಡಿಯೊ, 1.3 ಮೆಗಾ ಫಿಕ್ಸೆಲ್ ವೆಬ್ ಕ್ಯಾಮ್ ಈ ಲ್ಯಾಪ್ ಟಾಪ್ ನಲ್ಲಿರುವ ಇನ್ನಿತರ ವಿಶೇಷತೆಗಳು.
ಈ ಲ್ಯಾಪ್ ಟಾಪ್ ನ ದರದ ಕುರಿತು ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.


Click it and Unblock the Notifications








