Subscribe to Gizbot

ಸ್ಯಾಮ್ ಸಂಗ್ ಸೀರಿಸ್ 9 ಲ್ಯಾಪಿ, ದರವೆಷ್ಟು?

Posted By: Staff
ಸ್ಯಾಮ್ ಸಂಗ್ ಸೀರಿಸ್ 9 ಲ್ಯಾಪಿ, ದರವೆಷ್ಟು?
ಈಗ ಅಲ್ಟ್ರಾಪೊರ್ಟೆಬಲ್ ಲ್ಯಾಪ್ ಟಾಪ್ ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಆಪಲ್ ಕಂಪನಿಯ ಮೆಕ್ ಬುಕ್ ಏರ್ 13 ಲ್ಯಾಪ್ ಟಾಪ್ ಕೂಡ ಇದೇ ಶ್ರೇಣಿಯಲ್ಲಿರುವ ಲ್ಯಾಪ್ ಟಾಪ್. ಇದೀಗ ಸ್ಯಾಮ್ ಸಂಗ್ ಕಂಪನಿಯು ಸೀರಿಸ್ 9 ಎಂಬ ತೆಳ್ಳಗಿನ ಅಲ್ಟ್ರಾಬುಕ್ ಹೊರತಂದಿದೆ.

Samsung Series 9 900X3A-BO1 ಇದು ತೆಳ್ಳಗಿನ ಸುಂದರಿ. ಇದರ ತೂಕ ಕೇವಲ 2.88 ಪೌಂಡ್. ಇದು ಎಷ್ಟು ತೆಳ್ಳಗಿದೆ ಎಂದರೆ ಕೇವಲ 0.64 ಇಂಚು ದಪ್ಪವಿದೆ ಅಷ್ಟೇ! ಇದು 13.3 ಇಂಚಿನ ಡಿಸ್ ಪ್ಲೇ ಹೊಂದಿದ್ದು, ಸದೃಢ ಡ್ಯೂರಲ್ಯುಮಿನಿಯಂ ಚಾಸೀಸ್ ಹೊಂದಿದೆ.

ಈ ಲ್ಯಾಪ್ ಟಾಪ್ 128 ಜಿಬಿ ಎಸ್ಎಸ್ ಡಿ ಅಥವಾ ಸಾಲಿಡ್ ಸ್ಟೇಟ್ ಡ್ರೈವ್ ಹೊಂದಿದೆ. ಇದು ಕೋರ್ ಐ5-2537ಎಂ ಪ್ರೊಸೆಸರ್ ಹೊಂದಿದ್ದು, ಹೆವಿ ಅಪ್ಲಿಕೇಷನ್ ಮತ್ತು ಮಲ್ಟಿಟಾಸ್ಕಿಂಗ್ ಗಳಿಗೂ ಬೆಂಬಲ ನೀಡುತ್ತದೆ. ಈ ಲ್ಯಾಪ್ ಟಾಪ್ ಬ್ಯಾಟರಿ ಬ್ಯಾಕಪ್ ಸುಮಾರು 7 ಗಂಟೆ.

ಸ್ಯಾಮ್ ಸಂಗ್ ಸೀರಿಸ್ 9 ಲ್ಯಾಪ್ ಟಾಪ್ 64 ಬಿಟ್ ವಿಂಡೋಸ್ ಹೋಂಮ್ ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದು ಮೈಕ್ರೊಸಾಫ್ಟ್ ಸಿಗ್ನೆಚರ್ ಹೊಂದಿದ್ದು ಸಾಫ್ಟ್ ವೇರ್ ಅಥವಾ ಟ್ರಯಲ್ ವೇರ್ ನ ಕಾರ್ಯಕ್ಷಮತೆ ಕುಗ್ಗದಂತೆ ನೋಡಿಕೊಳ್ಳುತ್ತದೆ.

ಇದರ 13.3 ಇಂಚು ಡಿಸ್ ಪ್ಲೇ ಸುಮಾರು 1366x768 ಫಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. WiDi ಸಪೂರ್ಟ್, ಎಸ್ಆರ್ಎಸ್ ಪ್ರೀಮಿಯಂ ಸೌಂಡ್ ಸ್ಪೀಕರ್ ಇದರಲ್ಲಿರುವುದರಿಂದ ಲ್ಯಾಪ್ ಟಾಪ್ ಗುಣಮಟ್ಟ ಹೆಚ್ಚಾಗಿದೆ. ಬ್ಯಾಕ್ ಲಿಟ್ ಕೀಬೋರ್ಡ್ ವಿನ್ಯಾಸ ಇಷ್ಟವಾಗುತ್ತದೆ.

ಈ ಲ್ಯಾಪ್ ಟಾಪ್ ನಲ್ಲಿ ಯುಎಸ್ ಬಿ 3.0 ಪೋರ್ಟ್ ಇದ್ದು ಎಂಪಿ3 ಪ್ಲೇಯರ್ ಅಥವಾ ಹೆಡ್ ಸೆಟ್ ಚಾರ್ಜ್ ಮಾಡಬಹುದಾಗಿದೆ. ಈ ಲ್ಯಾಪ್ ಟಾಪ್ ನಲ್ಲಿ 1.3 ಮೆಗಾಫಿಕ್ಸೆಲ್ ಕ್ಯಾಮರಾ ಕೂಡ ಇದೆ. ಇದು 4ಜಿಬಿಯ ಡಿಡಿಆರ್3 ಮೆಮೊರಿ ಹೊಂದಿದ್ದು, ಮೂರು ವರ್ಷ ಗ್ಯಾರಂಟಿ ಕೂಡ ಇದಕ್ಕಿದೆ. ಈ ಲ್ಯಾಪ್ ಟಾಪ್ ಆರಂಭಿಕ ದರ ಸುಮಾರು 75 ಸಾವಿರ ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot