ಇದು ಗಾಜು ಅಲ್ಲರೀ, ಸ್ಯಾಮ್ ಸಂಗ್ ಟ್ಯಾಬ್ಲೆಟ್

Posted By: Staff
ಇದು ಗಾಜು ಅಲ್ಲರೀ, ಸ್ಯಾಮ್ ಸಂಗ್ ಟ್ಯಾಬ್ಲೆಟ್
ಟ್ಯಾಬ್ಲೆಟ್ ಕಂಪ್ಯೂಟರುಗಳ ವಿನ್ಯಾಸ, ಪರಿಕಲ್ಪನೆಯನ್ನೇ ಬದಲಾಯಿಸಲು ಸ್ಯಾಮ್ ಸಂಗ್ ನಿರ್ಧರಿಸಿದೆ. ಕಂಪನಿಯು ಗಾಜಿನಂತಹ ಪಾರದರ್ಶಕ ಟ್ಯಾಬ್ಲೆಟ್ ವಿಡಿಯೋ ಅನಾವರಣ ಮಾಡಿದೆ. ಈ ಕಾನ್ಸೆಪ್ಟ್ ಟ್ಯಾಬ್ಲೆಟ್ ಹತ್ತು ಹಲವು ವಿಶೇಷಗಳ ಗಾಜಿನ ಅರಮನೆಯಾಗಿದೆ.

ಈ ಟ್ಯಾಬ್ಲೆಟಿನಲ್ಲಿ ಯಾವೆಲ್ಲ ವಿಶೇಷತೆಗಳಿವೆ???

* ಸುಲಭವಾಗಿ ಬಾಗುವ ಟ್ಯಾಬ್ಲೆಟ್

* ಪಾರದರ್ಶಕ ಪರದೆ

* ಹೊಲೊಗ್ರಾಫಿಕ್ ಡಿಸ್ ಪ್ಲೇ

* ಗಾತ್ರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು.

ಈ ಪಾರದರ್ಶಕ ಕಾನ್ಸೆಪ್ಟ್ ಟ್ಯಾಬ್ಲೆಟಿಗೆ ಇನ್ನೂ ಹೆಸರಿಡಲಾಗಿಲ್ಲ. ಇದನ್ನು ಮಡುಚಬಹುದು, ಗಾತ್ರ ಚಿಕ್ಕದಾಗಿಸಬಹುದು, ಬಾಗಿಸಬಹುದು, ಬಳುಕಿಸಬಹುದು, ಇದನ್ನು ಮಡುಚಿ ಕಿಸೆಯಲ್ಲಿಟ್ಟುಕೊಳ್ಳಬಹುದು.

ಇದರಲ್ಲಿ ಯಾವುದೇ ಬಟನ್ ಇಲ್ಲ. ಒಂದು ರೀತಿಯಲ್ಲಿ ಟಚ್ ಸ್ಕ್ರೀನ್. ಇದು ಗ್ಲಾಸ್ ಪೇಪರ್ ರೀತಿ ಇದೆ. ಇದರ ಗಾತ್ರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದ್ದು ಇದರ ಇನ್ನೊಂದು ವಿಶೇಷತೆ. ಇದರಿಂದ ಚಿತ್ರ ಮತ್ತು ಸಿನಿಮಾಗಳನ್ನು ನಮಗೆ ಬೇಕಾದ ಗಾತ್ರದಲ್ಲಿ ನೋಡಿಕೊಳ್ಳಬಹುದು. ಇದರಲ್ಲಿ ಬ್ರೌಸಿಂಗ್, ಮೆಸೆಜಿಂಗ್ ಕೂಡ ಮಾಡಬಹುದು.

ಕಂಪನಿಯು ಅನಾವರಣ ಮಾಡಿರುವ ವಿಡಿಯೋದಲ್ಲಿ ವಿಡಿಯೋ ಕಾಲ್ ಕೂಡ ಮಾಡಬಹುದಾಗಿದೆ. ಮೂರು ಅಳತೆಯಲ್ಲಿ ಅಥವಾ ಡೈಮೆನ್ಸನ್ ನಲ್ಲಿ ಚಿತ್ರಗಳನ್ನು ನೋಡಬಹುದಾಗಿದೆ. ಇದರ ಡಿಸ್ ಪ್ಲೇ ಅಮೊಲ್ಡ್ ಮಾದರಿಯದಾಗಿದೆ. ಈ ಮಾದರಿಯ ಡಿಸ್ ಪ್ಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ಎಲ್ಎಲ್ ನಲ್ಲೂ ಇದೆ.

ಸ್ಯಾಮ್ ಸಂಗ್ ಕಂಪನಿಯ ಕೊರಿಯಾದಲ್ಲಿರುವ ಇನ್ಸುಟ್ಯೂಟ್ ಆಫ್ ಟೆಕ್ನಾಲಜಿ ಈ ಟ್ಯಾಬ್ಲೆಟ್ ಅಭಿವೃದ್ಧಿಪಡಿಸುತ್ತಿದೆ. ಈ ಟ್ಯಾಬ್ಲೆಟ್ ಯಾವಾಗ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಮಾಹಿತಿ ನೀಡಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot