ಗ್ಯಾಲಕ್ಸಿ ಟ್ಯಾಬ್ 4 ನೂಕ್ ಆಗಸ್ಟ್ 20 ಕ್ಕೆ ಲೋಕಾರ್ಪಣೆ

Written By:

ಜೂನ್‌ಗಿಂತ ಮೊದಲೇ, ಸ್ಯಾಮ್‌ಸಂಗ್ ಮತ್ತು ಬಾರ್ನ್ಸ್ ಮತ್ತು ನೋಬಲ್ ಇವೆರಡೂ ಆಗಸ್ಟ್‌ನಲ್ಲೇ ಟ್ಯಾಬ್ಲೆಟ್ ಲಾಂಚ್ ಮಾಡುವ ನಿರ್ಧಾರವನ್ನು ಪ್ರಕಟಪಡಿಸಿತ್ತು. ಲಾಂಚ್ ಮಾಡುವ ನಾಲ್ಕು ವಾರಕ್ಕಿಂತ ಮುಂಚಿತವಾಗಿ, ಸ್ಯಾಮ್‌ಸಂಗ್ ಪ್ರಚಾರ ವೀಡಿಯೋದಲ್ಲಿ ಗ್ಯಾಲಕ್ಸಿ ಟ್ಯಾಬ್ 4 ನೂಕ್ ಟ್ಯಾಬ್ಲೆಟ್ ಕುರಿತು ವರದಿ ಮಾಡಿತ್ತು.

ಇವೆರಡೂ ಕಂಪೆನಿಗಳು ಅಧಿಕೃತವಾಗಿ ತಮ್ಮ ಪ್ರಪ್ರಥಮ ಬ್ರ್ಯಾಂಡೆಡ್ ಟ್ಯಾಬ್ಲೆಟ್‌ಗಳನ್ನು ಆಗಸ್ಟ್ 20 ರಂದು NYC ನಲ್ಲಿನ B&N's ಫ್ಲ್ಯಾಗ್‌ಶಿಪ್ ರೀಟೈಲ್ ಸ್ಟೋರ್‌ನಲ್ಲಿ ಲಾಂಚ್ ಮಾಡಲಿದೆ. ತನ್ನ ಹೊಸ ಟ್ಯಾಬ್ 4 ನೂಕ್ ಟ್ಯಾಬ್ಲೆಟ್ ಕುರಿತು ಸ್ಯಾಮ್‌ಸಂಗ್ ಬುದ್ಧಿವಂತಿಕೆಯಿಂದ ಬಳಕೆದಾರರ ಮನದಲ್ಲಿ ಉತ್ತಮ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ. ಈ ವಾಣಿಜ್ಯ ಜಾಹೀರಾತನ್ನು ಇದಕ್ಕಾಗಿ ಕಂಪೆನಿ ಸಿದ್ಧಪಡಿಸಿದ್ದು ಟ್ಯಾಬ್ಲೆಟ್ ಕುರಿತ ಕುತೂಹಲವನ್ನು ಗ್ರಾಹರಲ್ಲಿ ಮೋಹಕವಾಗಿ ಏರ್ಪಡಿಸಿದೆ.

ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ಟ್ಯಾಬ್ 4 ಗೆ ಭರ್ಜರಿ ಪ್ರಚಾರ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 4 ನೂಕ್ ಅನ್ನು ವಿಶೇಷವಾಗಿ ಇ - ಓದುವಿಕೆಗಾಗಿ ಸಿದ್ಧಪಡಿಸಲಾಗಿದೆ. ಅಂದರೆ ಅಮೆಜಾನ್ ಕಿಂಡಲ್ ಇ-ಬುಕ್ ರೀಡರ್, ಕಿಂಡಲ್ ಟ್ಯಾಬ್ಲೆಟ್ಸ್, ಗೂಗಲ್ ನೆಕ್ಸಸ್ 7 ಮತ್ತು ಆಪಲ್ ಐಪ್ಯಾಡ್ ಮಿನಿ ರೆಟಿನಾನಂತಹ ಇ ಓದುವಿಕೆಗೆ ಬಳಕೆದಾರರನ್ನು ನೇರವಾಗಿ ಕೊಂಡೊಯ್ಯುತ್ತದೆ.

ಇನ್ನು ಇದರ ವಿಶೇಷತೆಗಳನ್ನು ನೋಡುವುದಾದರೆ, 7 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಇದರಲ್ಲಿ ಕ್ವಾಡ್ ಕೋರ್ ಪ್ರೊಸೆಸರ್ ಇದೆ ಮತ್ತು ಆಂಡ್ರಾಯ್ಡ್ B&N ಇದರಲ್ಲಿ ಚಾಲನೆಯಾಗುತ್ತಿದೆ. ಇದರ ಡಿಸ್‌ಪ್ಲೇ ಗಾತ್ರ ಮತ್ತು ಪ್ರೊಸೆಸಿಂಗ್ ಪವರ್ ಕುರಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಗ್ಯಾಲಕ್ಸಿ ಟ್ಯಾಬ್ 4 ನೂಕ್ ಈ ವರ್ಷದ ಪ್ರಾರಂಭದಲ್ಲೇ ಮಾರಾಟವಾಗಲಿದ್ದು ಇದರ ಬೆಲೆ ರೂ 15,000 ಆಗಿದೆ. ಇನ್ನು ಟ್ಯಾಬ್ 4 ಗೆ ಹೋಲಿಸಿದಾಗ ಇದರ ಬೆಲೆ ಕಡಿಮೆಯಾಗಿದೆ ಎಂದೇ ಹೇಳಬಹುದು.

English summary
This article tells about Samsung Teases Galaxy Tab 4 Nook Ahead of August 20 Launch.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot