ನಿಮ್ಮ ಕಂಪ್ಯೂಟರ್ ಹೆಚ್ಚು ಬಿಸಿಯಾಗುತ್ತಿದೆಯೇ? ಹಾಗಿದ್ದರೆ ಈ ವಿಧಾನ ಅನುಸರಿಸಿ

By: Shwetha PS

ಡೆಸ್ಕ್‌ಟಾಪ್‌ನ ವಿಷಯಕ್ಕೆ ಬಂದಾಗ ಹೆಚ್ಚು ಹೆಚ್ಚು ಕಿರಿಕಿರಿಯ ಸಂಗತಿ ಎಂದರೆ ಬಿಸಿಯಾಗಿದೆ. ಒಮ್ಮೆಮ್ಮೆ ಈ ಅತಿ ಬಿಸಿಯು ನಿಮ್ಮ ಸಿಸ್ಟಮ್‌ನ ಒಳಗಿನ ಭಾಗವನ್ನು ಸುಟ್ಟು ಹಾಕುವ ಸಾಧ್ಯತೆ ಕೂಡ ಇದೆ. ಹಾಗಿದ್ದರೆ ಈ ಬಿಸಿಯನ್ನು ತಗ್ಗಿಸುವ ವಿಧಾನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ. ಇದಕ್ಕೆ ಬಳಸುವುದು ಏರ್‌ ಕೂಲರೇ ಅಥವಾ ಲಿಕ್ವಿಡ್ ಕೂಲರೇ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ ಕೂಲರ್ ಮತ್ತು ಲಿಕ್ವಿಡ್ ಕೂಲರ್

ಏರ್‌ ಕೂಲರ್ ಮತ್ತು ಲಿಕ್ವಿಡ್ ಕೂಲರ್

ಏರ್‌ಕೂಲರ್ ವಿಷಯಕ್ಕೆ ಬಂದಾಗ ನಿಮ್ಮ ಪಿಸಿಯಲ್ಲಿ ಕೇಸ್ ಪ್ಯಾನ್‌ಗಳು ಇರುತ್ತವೆ ಸಿಪಿಯು ಫ್ಯಾನ್ ಮೆಟಲ್ ಹೀಟ್ ಸಿಂಕ್ ಮೇಲ್ಭಾಗದಲ್ಲಿ ಇರುತ್ತದೆ. ಲಿಕ್ವಿಡ್ ಕೂಲಿಂಗ್ ಆಗಿದ್ದಲ್ಲಿ ನೀವು ಕೂಲೆಂಡ್ ಫಿಲ್ ಆಗಿರುವ ಟ್ಯೂಬ್, ರೇಡಿಯೇಟರ್ ಮತ್ತು ವಾಟರ್ ಬ್ಲಾಕ್‌ಗಳನ್ನು ಹೊಂದಿರುತ್ತೀರಿ.

 ಏರ್ ಕೂಲರ್

ಏರ್ ಕೂಲರ್

ಇದನ್ನು ನಿಮ್ಮ ಡೆಸ್ಕ್‌ಟಾಪ್‌ಗೆ ಅಳವಡಿಸುವುದು ಅಷ್ಟೊಂದು ಕಷ್ಟದ ಕೆಲಸವಲ್ಲ. ನಿಮಗೆ ಬೇಕಾದ್ದನ್ನು ತಯಾರಕರು ಅನ್ವಯಿಸುತ್ತಾರೆ. ಇನ್‌ಟೇಕ್ ಮತ್ತು ಎಕ್ಸಾಸ್ಟ್ ಫ್ಯಾನ್ ಇದಲ್ಲಿರುತ್ತವೆ. ಗ್ರಾಫಿಕ್ಸ್ ಕಾರ್ಡ್ ಮತ್ತು ಕಂಪ್ಯೂಟರ್ ಪ್ರೊಸೆಸರ್ ಸ್ಟಾಕ್ ಫ್ಯಾನ್‌ಗಳೊಂದಿಗೆ ಮುಂಚಿತವಾಗಿ ಬರುತ್ತವೆ. ಲಿಕ್ವಿಡ್ ಕೂಲರ್‌ಗಿಂತ ಇದು ಕಡಿಮೆ ಬೆಲೆಯದ್ದಾಗಿದೆ.

ನೀವು ಉತ್ತಮ ಮತ್ತು ದೊಡ್ಡದಾದ ರಿಡ್ ಅನ್ನು ಖರೀದಿಸಬೇಕು ಎಂದಿದ್ದಲ್ಲಿ ನೀವು ಕಡಿಮೆ ಬೆಲೆಗೆ ಏರ್ ಕೂಲಿಂಗ್ ಸೆಟಪ್ ಅನ್ನು ಹೊಂದಬಹುದಾಗಿದೆ. ಕೆಳಭಾಗದಲ್ಲಿ ಫ್ಯಾನ್‌ಗಳು ಕೂಲಿಂಗ್ ತಂತ್ರಜ್ಞಾನವನ್ನು ಸಾಕಷ್ಟು ಹೊಂದಿರುವುದಿಲ್ಲ ಹೀಟ್ ಸಿಂಕ್ ದೊಡ್ಡದಾಗಿದ್ದು, ಗಟ್ಟಿ ಧ್ವನಿ ಹೊಂದಿರುತ್ತವೆ.

ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?.ಇಲ್ಲಿ ನೋಡಿ!!

 ಲಿಕ್ವಿಡ್ ಕೂಲರ್

ಲಿಕ್ವಿಡ್ ಕೂಲರ್

ಪಂಪ್, ರೇಡಿಯೇಟರ್ ಮತ್ತು ರೇಡಿಯೇಟರ್ ಫ್ಯಾನ್‌ಗಳನ್ನು ಬಳಸುತ್ತವೆ. ಈ ಪಂಪ್ ಅನ್ನು ಟ್ಯೂಬ್‌ಗಳ ಮೂಲಕ ರೇಡಿಯೇಟರ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ. ಇದು ನೀರು ಅಥವಾ ಕೂಲೆಂಟ್ ಅನ್ನು ತಣ್ಣಗಾಗಿಸಲು ಅನುವು ಮಾಡಿಕೊಡುತ್ತದೆ. ಇದು ನಿರ್ದಿಷ್ಟ ಸಿಸ್ಟಮ್ ಅನ್ನು ತಣ್ಣಗಾಗಿಸುತ್ತದೆ. ಇದಕ್ಕೆ ಕಡಿಮೆ ಸ್ಥಳ ಸಾಕು.

ಕೆಳಭಾಗದಲ್ಲಿ ಕಸ್ಟಮ್ ಸೆಟಪ್‌ಗೆ ಇದು ಕೊಂಚ ದುಬಾರಿಯಾಗಿದೆ. ಇದಕ್ಕೆ ಸಾಕಷ್ಟು ಸಿದ್ಧತೆಗಳನ್ನು ನೀವು ಮಾಡಬೇಕಾಗುತ್ತದೆ. ಪಂಪ್, ರಿಸರ್ವರ್, ರೇಡಿಯೇಟರ್, ಫ್ಯಾನ್ ಮತ್ತು ಕೂಲಂಟ್ ಅನ್ನು ನೀವು ಹೊಂದಿರಬೇಕು.

ನೀವು ಕಡಿಮೆ ಬೆಲೆಗೆ ಹೊಂದಿಸಬೇಕು ಎಂದಾದಲ್ಲಿ ಏರ್ ಕೂಲರ್ ಅನ್ನು ನಿಮ್ಮದಾಗಿಸಿಕೊಳ್ಳಿ. ಇಲ್ಲಾ ನೀವು ದೊಡ್ಡ ಗೇಮ್‌ಗಳನ್ನು ಆಡುವವರು ಎಂದಾದಲ್ಲಿ ಲಿಕ್ವಿಡ್ ಕೂಲರ್ ಅನ್ನು ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
One of the major disadvantages when it comes to the desktop is "heat".
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot