Home
ಕಂಪ್ಯೂಟರ್‌‌

ಫಾರ್ಮ್ಯಾಟ್‌ ಮಾಡದೆ ಹಾರ್ಡ್‌ಡಿಸ್ಕ್‌ ವಿಭಜಿಸಿ..! ಹೊಸ ಡ್ರೈವ್‌ ಸೃಷ್ಟಿಸಿ..!

By Gizbot Bureau

ಎಲ್ಲರೂ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ತಮ್ಮ ಮಾಹಿತಿಯನ್ನು ಬೇರೆ ಬೇರೆ ಡ್ರೈವ್‌ಗಳಲ್ಲಿ ಸಂಗ್ರಹಿಸಬೇಕು ಎನ್ನುತ್ತಾರೆ. ಇದರಿಂದ ಯಾವ ಮಾಹಿತಿ, ಯಾವ ಡ್ರೈವ್‌ನಲ್ಲಿದೆ ಎಂಬುದನ್ನು ಹುಡುಕಲು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಎಲ್ಲರದ್ದೂ. ಒಂದು ಟೆರಾಬೈಟ್‌ ಹಾರ್ಡ್‌ಡಿಸ್ಕ್‌ನಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ಡ್ರೈವ್‌ಗಳನ್ನು ಮಾಡಲಾಗಿರುತ್ತೆ. ಅಗತ್ಯವಿದ್ದರೆ ನೀವೇ ಇನ್ನೊಂದಿಷ್ಟು ಡ್ರೈವ್‌ಗಳನ್ನು ಹಾರ್ಡ್‌ಡಿಸ್ಕ್‌ ಪಾರ್ಟಿಷನ್‌ ಮಾಡುವ ಮೂಲಕ ಸೃಷ್ಟಿಸಿಕೊಳ್ಳಬಹುದು.

ಫಾರ್ಮ್ಯಾಟ್‌ ಮಾಡದೆ ಹಾರ್ಡ್‌ಡಿಸ್ಕ್‌ ವಿಭಜಿಸಿ..! ಹೊಸ ಡ್ರೈವ್‌ ಸೃಷ್ಟಿಸಿ..!

ಪಾರ್ಟಿಷನ್‌ ಮಾಡಲು ಯಾವುದೇ ರೀತಿಯ ಫಾರ್ಮ್ಯಾಟ್‌ ಮಾಡುವ ಔಚಿತ್ಯವು ಕೂಡ ಏನಿಲ್ಲ. ಹಾಗಾದರೆ, ಹಾರ್ಡ್‌ಡಿಸ್ಕ್‌ ಪಾರ್ಟಿಷನ್‌ ಹೇಗೆ ಮಾಡುವುದು ಅಂತೀರಾ..? ಇಲ್ಲಿ ಮೂರು ವಿಧದ ಹಾರ್ಡ್‌ಡಿಸ್ಕ್‌ ಪಾರ್ಟಿಷನ್‌ಗಳನ್ನು ವಿವರಿಸಲಾಗಿದ್ದು, ನಿಮಗೆ ಸುಲಭ ಎನಿಸಿದ ಮಾರ್ಗದಲ್ಲಿ ಹಾರ್ಡ್‌ಡಿಸ್ಕ್‌ ಪಾರ್ಟಿಷನ್ ಮಾಡಿ.

ಡಿಸ್ಕ್‌ ಮ್ಯಾನೆಜ್‌ಮೆಂಟ್‌ ಯುಟಿಲಿಟಿ ಬಳಸಿ

ಡಿಸ್ಕ್‌ ಮ್ಯಾನೆಜ್‌ಮೆಂಟ್‌ ಯುಟಿಲಿಟಿ ಬಳಸಿ

ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಡಿಸ್ಕ್‌ ಮ್ಯಾನೆಜ್‌ಮೆಂಟ್‌ ಯುಟಿಲಿಟಿ ಟೂಲ್‌ ಮೊದಲೆ ಇನ್‌ಸ್ಟಾಲ್‌ ಆಗಿರುತ್ತದೆ. ಈ ಟೂಲ್‌ನಿಂದ ಹಾರ್ಡ್‌ಡಿಸ್ಕ್‌ ಪಾರ್ಟಿಷನ್‌ ಮಾಡಬಹುದಾಗಿದ್ದು, ಮುಂದಿನ ಹಂತಗಳನ್ನು ಅನುಸರಿಸುವ ಮೂಲಕ ಹಾರ್ಡ್‌ಡಿಸ್ಕ್‌ ವಿಭಜಿಸುವುದನ್ನು ಕಲಿಯಿರಿ.

ಹಂತ - 1

ಸ್ಟಾರ್ಟ್‌ ಬಟನ್‌ ಕ್ಲಿಕ್‌ ಮಾಡಿ, ನಂತರ disk mgmt.ms ಟೈಪ್‌ ಮಾಡಿ ಎಂಟರ್‌ ಕ್ಲಿಕ್‌ ಮಾಡಿ. ಈಗ ನಿಮ್ಮ ಮುಂದೆ ಡಿಸ್ಕ್‌ ನಿರ್ವಹಣಾ ವಿಂಡೋ ನಿಮ್ಮ ಮುಂದೆ ಕಾಣಿಸುತ್ತದೆ.

ಹಂತ - 2

ನಂತರ ನಿಮ್ಮ ಲ್ಯಾಪ್‌ಟಾಪ್‌ನಲ್ಲಿರುವ ಎಲ್ಲಾ ಡ್ರೈವ್‌ಗಳು ನಿಮಗೆ ಕಾಣಿಸುತ್ತವೆ. ಆ ಡ್ರೈವ್‌ಗಳಲ್ಲಿ ನೀವು ಶ್ರಿಂಕ್‌ ಅಥವಾ ವಿಸ್ತರಿಸಲು ಬಯಸುವ ಒಂದು ಡ್ರೈವ್‌ನ್ನು ಆಯ್ಕೆ ಮಾಡಿ. ಡ್ರೈವ್‌ನ್ನು ಶ್ರಿಂಕಿಂಗ್‌ ಮಾಡಲು ಹಾರ್ಡ್‌ಡಿಸ್ಕ್‌ನಲ್ಲಿ ಒಂದಿಷ್ಟು ಖಾಲಿ ಮೆಮೊರಿ ಇರಬೇಕಾಗಿದ್ದು ಅವಶಶ್ಯಕ. ಡ್ರೈವ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ, ನಂತರ ಶ್ರಿಂಕ್‌ ವಾಲ್ಯೂಮ್‌ ಆಯ್ಕೆಯನ್ನು ಆಯ್ದುಕೊಂಡರೆ ಒಂದು ಸಣ್ಣ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ.

ಹಂತ - 3

ಬಳಿಕ, ಡ್ರೈವ್‌ನ ಪ್ರಸ್ತುತ ಗಾತ್ರ, ಖಾಲಿ ಸಾಮರ್ಥ್ಯ ಮತ್ತು ಶ್ರಿಂಕ್‌ ಮಾಡಬೇಕಾದ ಗಾತ್ರ ನಿಮ್ಮ ಮುಂದೆ ಕಾಣುತ್ತದೆ. ಎಷ್ಟು ಗಾತ್ರದ ಡ್ರೈವ್‌ ಬೇಕೋ ಅಷ್ಟನ್ನು ಅಲ್ಲಿ ನಮೂದಿಸಿ. ಈ ಗಾತ್ರ ಖಾಲಿ ಇರುವ ಮೆಮೊರಿ ಸಾಮರ್ಥ್ಯವನ್ನು ಮೀರಬಾರದು. ಕೊನೆಗೆ ಶ್ರಿಂಕ್‌ ಬಟನ್‌ ಕ್ಲಿಕ್‌ ಮಾಡಿ.

ಹಂತ - 4

ನಂತರ, ಡಿಸ್ಕ್‌ ನಿರ್ವಹಣಾ ವಿಂಡೋದಲ್ಲಿ ನಿಮಗೆ ಅನ್‌ಅಲೋಕೆಟೆಡ್‌ ಸ್ಪೇಸ್‌ ಎಂಬ ಡ್ರೈವ್‌ ಕಾಣಿಸುತ್ತದೆ. ಅದರ ಮೇಲೆ ರೈಟ್‌ ಕ್ಲಿಕ್‌ ಮಾಡಿ, ನ್ಯೂ ಸಿಂಪಲ್‌ ವಾಲ್ಯೂಮ್‌ ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ.

ಹಂತ - 5

ನ್ಯೂ ಸಿಂಪಲ್‌ ವಾಲ್ಯೂಮ್‌ ಕ್ಲಿಕ್‌ ಮಾಡಿದ ನಂತರ, ನ್ಯೂ ಸಿಂಪಲ್‌ ವಾಲ್ಯೂಮ್‌ ವಿಜಾರ್ಡ್‌ ವಿಂಡೋ ನಿಮಗೆ ಕಾಣಿಸುತ್ತದೆ. ಹಾರ್ಡ್‌ಡಿಸ್ಕ್‌ ಪಾರ್ಟಿಷನ್ ಮಾಡಲು ನೆಕ್ಸ್ಟ್‌ ಕ್ಲಿಕ್ ಮಾಡಿ.

ಹಂತ - 6

ನಂತರ, ಮುಂದಿನ ಪೇಜ್‌ನಲ್ಲಿ ಡ್ರೈವ್‌ ಗಾತ್ರವನ್ನು ನಮೂದಿಸಬೇಕಾಗುತ್ತದೆ, ಗಾತ್ರ ನಮೂದಿಸಿದ ಮೇಲೆ ಮತ್ತೆ ನೆಕ್ಸ್ಟ್‌ ಕ್ಲಿಕ್ ಮಾಡಿ.

ಹಂತ - 7

ಇಲ್ಲಿ, ನೀವು ನಿಮ್ಮ ಹೊಸ ಡ್ರೈವ್‌ಗೆ ಡ್ರೈವ್‌ ಅಕ್ಷರವನ್ನು ಆಯ್ಕೆ ಮಾಡಬೇಕಾಗುತ್ತದದೆ. ಉದಾಹರಣೆಗೆ 'ಸಿ' ಡ್ರೈವ್‌, 'ಡಿ' ಡ್ರೈವ್‌ನಂತೆ ಮತ್ತೊಂದು ಡ್ರೈವ್‌.

ಹಂತ - 8

ಈಗ ಫಾರ್ಮ್ಯಾಟ್‌ ಪಾರ್ಟಿಷನ್‌ ಪೇಜ್‌ಗೆ ನೀವು ಬಂದು ನಿಲ್ಲುತ್ತಿರಿ. ಇಲ್ಲಿ ಎನ್‌ಟಿಎಫ್‌ಎಸ್‌ ಫೈಲ್‌ ವ್ಯವಸ್ಥೆ ಆಯ್ಕೆ ಮಾಡಿಕೊಂಡು ನೆಕ್ಸ್ಟ್‌ ಬಟನ್‌ ಕ್ಲಿಕ್ ಮಾಡಿ.

ಹಂತ - 9

ಈ ಹಂತದಲ್ಲಿ ಪಾರ್ಟಿಷನ್‌ ಪ್ರಕ್ರಿಯೆ ಮುಗಿದಿರುವ ವಿಂಡೋ ನಿಮಗೆ ಕಾಣಿಸುತ್ತದೆ. ಫಿನಿಶ್‌ ಬಟನ್‌ ಕ್ಲಿಕ್ ಮಾಡಿ, ಹಾರ್ಡ್‌ಡಿಸ್ಕ್‌ ಪಾರ್ಟಿಷನ್‌ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ.

AOMEI ಪಾರ್ಟಿಷನ್‌ ಅಸಿಸ್ಟಂಟ್ ಪ್ರೊಫೆಸಿನಲ್

AOMEI ಪಾರ್ಟಿಷನ್‌ ಅಸಿಸ್ಟಂಟ್ ಪ್ರೊಫೆಸಿನಲ್

ಡಿಸ್ಕ್‌ ಮ್ಯಾನೆಜ್‌ಮೆಂಟ್‌ನಂತೆ AOMEI ಪಾರ್ಟಿಷನ್‌ ಅಸಿಸ್ಟಂಟ್ ಕೂಡ ಹಾರ್ಡ್‌ಡಿಸ್ಕ್‌ನ್ನು ವಿಭಜಿಸಲು ಸಹಾಯ ಮಾಡುತ್ತದೆ. ಇಲ್ಲು ಕೂಡ ಫಾರ್ಮ್ಯಾಟ್‌ ಮಾಡಬೇಕಾದ ಅಗತ್ಯವಿರುವುದಿಲ್ಲ. ಈ ಮಾರ್ಗದಲ್ಲಿ ಹಾರ್ಡ್‌ಡಿಸ್ಕ್‌ ವಿಭಜಿಸಲು ಮುಂದಿನ ಹಂತಗಳನ್ನು ಅನುಸರಿಸಿ.

ಹಂತ 1

ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ AOMEI ಪಾರ್ಟಿಷನ್‌ ಅಸಿಸ್ಟಂಟ್ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಂಡು, ಇನ್‌ಸ್ಟಾಲ್‌ ಮಾಡಿ.

ಹಂತ 2

ನಂತರ, AOMEI ಪಾರ್ಟಿಷನ್‌ ಅಸಿಸ್ಟಂಟ್ ಸಾಫ್ಟ್‌ವೇರ್‌ನ್ನು ಒಪನ್‌ ಮಾಡಿ. ಇಲ್ಲಿ ಹಾರ್ಡ್‌ಡಿಸ್ಕ್‌ನ ಎಲ್ಲಾ ಡ್ರೈವ್‌ಗಳು ನಿಮಗೆ ಕಾಣಿಸುತ್ತವೆ.

ಹಂತ 3

ಮುಂದಿನ ಹಂತದಲ್ಲಿ ಪಾರ್ಟಿಷನ್‌ಗಾಗಿ ನೀವು ಡ್ರೈವ್‌ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಅಗತ್ಯದ ಡ್ರೈವ್‌ ಮೇಲೆ ರೈಟ್‌ ಕ್ಲಿಕ್ ಮಾಡಿ, ರಿಸೈಜ್‌ ಪಾರ್ಟಿಷನ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 4

ಇಲ್ಲಿ ಡ್ರಾಗ್‌ ವಿಧಾನದ ಮೂಲಕ ಪಾರ್ಟಿಷನ್‌ ವಾಲ್ಯೂಮ್‌ನ್ನು ರಿಸೈಜ್‌ ಮಾಡಬೇಕಾಗುತ್ತದೆ. ಸುಲಭವಾಗಿ ಸ್ಪೇಸ್‌ ಖಾಲಿಗೊಳಿಸುವುದರಿಂದ ಪಾರ್ಟಿಷನ್‌ನಲ್ಲಿ ಇನ್ನೊಂದಿಷ್ಟು ಅನ್‌ಅಲೊಕೆಟೆಡ್‌ ಜಾಗ ಡ್ರೈವ್‌ ಸೃಷ್ಟಿಸಲು ಸಿಗುತ್ತದೆ.

ಹಂತ 5

ನಂತರ, ಅನ್‌ಅಲೊಕೆಟೆಡ್‌ ಸ್ಪೇಸ್‌ ಮೇಲೆ ರೈಟ್‌ ಕ್ಲಿಕ್ ಮಾಡಿ, ಕ್ರಿಯೆಟ್‌ ಪಾರ್ಟಿಷನ್‌ ಆಯ್ಕೆಯನ್ನು ಆಯ್ದುಕೊಳ್ಳಿ, ನಂತರ ಅಪ್ಲೇ ಬಟನ್‌ ಕ್ಲಿಕ್ ಮಾಡಿದರೆ ಮುಗಿತು ನಿಮ್ಮ ಕಂಪ್ಯೂಟರ್‌ನಲ್ಲಿ ಹೊಸ ಡ್ರೈವ್‌ ಸೃಷ್ಟಿಯಾಗುತ್ತದೆ.

EaseUS ಪಾರ್ಟಿಷನ್‌ ಮಾಸ್ಟರ್

EaseUS ಪಾರ್ಟಿಷನ್‌ ಮಾಸ್ಟರ್

ಡಿಸ್ಕ್‌ ಮ್ಯಾನೆಜ್‌ಮೆಂಟ್‌ ಯುಟಿಲಿಟಿ ಮತ್ತು AOMEI ಪಾರ್ಟಿಷನ್‌ ಅಸಿಸ್ಟಂಟ್ ಪ್ರೊಫೆಸಿನಲ್‌ನಂತೆ EaseUS ಪಾರ್ಟಿಷನ್‌ ಮಾಸ್ಟರ್ ಕೂಡ ಹಾರ್ಡ್‌ಡಿಸ್ಕ್‌ ವಿಭಜಿಸಲು ಸಹಾಯ ಮಾಡುತ್ತದೆ. ಇಲ್ಲಿ, ನೀವು ಸುಲಭವಾಗಿ ಹಾರ್ಡ್‌ಡಿಸ್ಕ್‌ನ್ನು ಪಾರ್ಟಿಷನ್ ಮಾಡಬಹುದಾಗಿದೆ.

ಹಂತ 1

ಮೊದಲು, EaseUS ಪಾರ್ಟಿಷನ್‌ ಮಾಸ್ಟರ್ ಸಾಫ್ಟ್‌ವೇರ್‌ನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್‌ ಮಾಡಿಕೊಂಡು, ಇನ್‌ಸ್ಟಾಲ್‌ ಮಾಡಿ.

ಹಂತ 2

ಸಾಫ್ಟ್‌ವೇರ್‌ ಒಪನ್‌ ಮಾಡಿದ ನಂತರ ಎಲ್ಲಾ ಡ್ರೈವ್‌ಗಳಿರುವ ವಿಂಡೋ ನಿಮಗೆ ಕಾಣಿಸುತ್ತದೆ.

ಹಂತ 3

ನಂತರ, ನೀವು ರಿಸೈಜ್‌ ಮಾಡಬೇಕಾದ ಡ್ರೈವ್‌ ಮೇಲೆ ರೈಟ್‌ ಕ್ಲಿಕ್ ಮಾಡಿ, ರಿಸೈಜ್‌ ಅಥವಾ ಮೂವ್‌ ಆಯ್ಕೆಯನ್ನು ಆಯ್ದುಕೊಳ್ಳಿ.

ಹಂತ 4

ಈಗ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಗಾತ್ರವನ್ನು ಹೊಂದಿಸಿಕೊಳ್ಳಬೇಕು. ಇದಕ್ಕಾಗಿ ಅನ್‌ಅಲೊಕೆಟೆಡ್‌ ಸ್ಪೇಸ್‌ನಲ್ಲಿ ಪಾರ್ಟಿಷನ್‌ ಮಾಡಲು ಡ್ರಾಗ್‌ ಮಾಡಬೇಕಾಗುತ್ತದೆ.

ಹಂತ 5

ಡ್ರಾಗ್‌ ಮಾಡಿದ ಬಳಿಕ ಅನ್‌ಅಲೊಕೆಟೆಡ್‌ ಸ್ಪೇಸ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ, ಕ್ರಿಯೆಟ್‌ ಆಯ್ಕೆಯನ್ನು ಆಯ್ದುಕೊಳ್ಳಿ.

ಹಂತ 6

ಇಲ್ಲಿ, ಪಾರ್ಟಿಷನ್‌ ಗಾತ್ರ, ಲೇಬಲ್‌, ಡ್ರೈವ್‌ ಅಕ್ಷರ, ಫೈಲ್‌ ವ್ಯವಸ್ಥೆಯನ್ನು ಹೊಂದಿಸಬೇಕಾಗುತ್ತದೆ. ಬಳಿಕ ಒಕೆ ಬಟನ್‌ ಕ್ಲಿಕ್‌ ಮಾಡಿದರೆ, ನಿಮ್ಮ ಹೊಸ ಡ್ರೈವ್‌ ಬಳಕೆಗೆ ಸಿದ್ಧವಾಗಿರುತ್ತದೆ.

Best Mobiles in India

English summary
Simple trick to partition hard disk without formatting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+