ಹೊಸ ಅಭಿವೃದ್ಧಿ ಪಥದತ್ತ ಇನ್ನು ಸಿರಿ

By Shwetha
|

ಆಪಲ್‌ನ ಧ್ವನಿ ಸಹಾಯಕ ಸಿರಿ ತನ್ನ ನಿಖರತೆಗೆ ಮಾತ್ರ ಹೆಸರುವಾಸಿಯಾಗಿಲ್ಲ, ಆದರೆ ಕಂಪೆನಿಯು ಇದನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸುವ ನಿಟ್ಟಿನಲ್ಲಿದೆ. ಮತ್ತು ಈ ಕಾರ್ಯ ಆದಷ್ಟು ಬೇಗನೇ ನಡೆಯಲಿದೆ.

ವೈರ್ಡ್ ವರದಿಯಂತೆ ಆಪಲ್ ಸಿರಿಯ ಅಭಿವೃದ್ಧಿಗಾಗಿ ನುರಿತ ತಜ್ಞರು ಮತ್ತು ಸಂಶೋಧಕರ ತಂಡವನ್ನು ನಿಯೋಜಿಸುತ್ತಿದ್ದು ಸಿರಿಯ ಪೂರ್ಣ ರೀತಿಯ ಅಭಿವೃದ್ಧಿಗೆ ಈ ತಂಡ ಹೆಚ್ಚು ಪರಿಶ್ರಮವನ್ನು ವಹಿಸಲಿದೆ. ಮಾನವನಿಗಿರುವಷ್ಟೇ ವೇಗದಲ್ಲಿ ಮಾತನಾಡುವ ಭಾಷೆಯನ್ನು ಓದುವ ಮತ್ತು ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಇದು ಇನ್ನಷ್ಟು ವೇಗಗೊಳಿಸಲಿದೆ.

ಆಪಲ್‌ನಿಂದ ಸಿರಿಗೆ ಕಾಯಕಲ್ಪ

ಕೆಲವೊಂದು ಕೆಲಸಗಳಾದ ಮುಖವನ್ನು ಗುರುತಿಸುವುದು ಮತ್ತು ಧ್ವನಿ ಗುರುತಿಸುವಿಕೆಯನ್ನು ಕಂಪ್ಯೂಟರ್ ಮಾನವನ ಮೆದುಳಿನಂತೆ ಗುರುತಿಸುವುದು ಪ್ರಯಾಸದ ಕೆಲಸವಾಗಿದೆ. ಆದರೆ ಸಿರಿಯ ಈ ಅಭಿವೃದ್ಧಿ ಕಂಪ್ಯೂಟರ್‌ಗೆ ವರದಾಯಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಓದುವಿಕೆ ಮತ್ತು ಮಾತಿನ ವಿಧಾನದಲ್ಲಿ ಕೆಲವೊಂದು ಕಂಪೆನಿಗಳು ಸಾಕಷ್ಟು ಅನ್ವೇಷಣೆಗಳನ್ನು ಮಾಡಿದ್ದು ಅದರ ಜಾಡು ಹಿಡಿಯುವ ಕೆಲಸವನ್ನು ಆಪಲ್ ಮಾಡುತ್ತಿದೆ. ಆಂಡ್ರಾಯ್ಡ್‌ನ ಗೂಗಲ್ ನೌ ನ್ಯೂರಲ್ ನೆಟ್ಸ್ (ನರವ್ಯೂಹದ ಪರದೆಗಳು) ಅನ್ನು ಈಗಾಗಲೇ ಪರೀಕ್ಷಿಸಿದ್ದು, ಮೈಕ್ರೋಸಾಫ್ಟ್ ಸ್ಕೈಪ್‌ಗಾಗಿ ತನ್ನ ರಿಯಲ್ ಟೈಮ್ ಅನುವಾದವನ್ನು ಬಳಸುತ್ತಿದೆ. ಇದೆಲ್ಲವೂ ಕಳೆದ ವರ್ಷವಷ್ಟೇ ಅಸ್ತಿತ್ವಕ್ಕೆ ಬಂದಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ಆಪಲ್ ತನ್ನ ಈ ಸಿರಿ ಅಭಿವೃದ್ಧಿಯಲ್ಲಿ ಹೆಚ್ಚು ನುರಿತ ತಜ್ಞರನ್ನು ನೇಮಿಸುತ್ತಿದ್ದು ಇದು ತುಂಬಾ ಗಂಭೀರವಾಗಿ ಧ್ವನಿ ಗುರುತಿಸುವಿಕೆ ಪ್ರಯತ್ನಗಳಲ್ಲಿ ಮುಳುಗಿದೆ ಎಂದೇ ಹೇಳಬಹುದು. ಐಓಎಸ್8 ನಲ್ಲಿ ಸಿರಿಯ ರೀಬೂಟ್ ಅನ್ನು ಕಾಣಬಹುದೇ ಎಂಬುದು ಇನ್ನೂ ತಿಳಿದಿಲ್ಲ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X