ಕೇಳಿರಪ್ಪ ಕೇಳಿರಿ ಇದು ಸ್ಕೈಪ್ಯಾಡ್ ಆಲ್ಪಾ ಟ್ಯಾಬ್ಲೆಟ್

ಇದನ್ನು ಹೊಸ ವರ್ಷದ ಉಡುಗೊರೆ ಎಂದು ಭಾವಿಸಬಹುದು. ಯಾಕೆಂದರೆ Skypad Alpha 2 ಟ್ಯಾಬ್ಲೆಟ್ ಕಾರ್ಯಕ್ಷಮತೆಗೆ ಮತ್ತೊಂದು ಹೆಸರು. ಇದು ಆಕರ್ಷಕ ವಿಶೇಷತೆಗಳನ್ನು, ಫೀಚರುಗಳನ್ನು ಹೊಂದಿದೆ. ಇದು 1.2 ಗಿಗಾಹರ್ಟ್ಸ್ ವೇಗದ ಎಆರ್ ಎಂ ಕಾರ್ಟೆಕ್ಸ್ ಎ8 ಪ್ರೊಸೆಸರ್ ಹೊಂದಿದೆ.
ಈ ಟ್ಯಾಬ್ಲೆಟ್ "ಮಲಿ 400 ಗ್ರಾಫಿಕ್ಸ್" ಪ್ರೊಸೆಸಿಂಗ್ ಸಿಸ್ಟಮ್ ಹೊಂದಿದೆ. ಇದರಲ್ಲಿ ಸಂಪೂರ್ಣ ಹೈಡೆಫಿನೆಷನ್ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಈ ಟ್ಯಾಬ್ಲೆಟ್ ಸ್ಟಿರಿಯೊಸ್ಕೋಪಿಕ್ 3ಡಿ ವಿಡಿಯೋ ಫೈಲುಗಳಿಗೂ ಬೆಂಬಲ ನೀಡುತ್ತದೆ. ಈ ಟ್ಯಾಬ್ಲೆಟಿನಲ್ಲಿ ಎಚ್ ಡಿ ವಿಡಿಯೋಗಳನ್ನು ಕೂಡ ವೀಕ್ಷಿಸಬಹುದು. ಈ ಟ್ಯಾಬ್ಲೆಟ್ ದರ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಟೆಕ್ ಮಾಹಿತಿ
* ಆಕರ್ಷಕ ವಿನ್ಯಾಸ
* 7 ಇಂಚಿನ ಮಲ್ಟಿ ಟಚ್ ಸ್ಕ್ರೀನ್
* 1.2 ಗಿಗಾಹರ್ಟ್ಸ್ ಎಆರ್ಎಂ ಕೊರ್ಟೆಕ್ಸ್ ಎ8 ಪ್ರೊಸೆಸರ್
* ಮಲಿ 400 ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್
* ಎಚ್ ಡಿಎಂಐ 1.4 ಔಟ್ ಪುಟ್
* ಫುಲ್ ಎಚ್ ಡಿ 1080p ಮತ್ತು ಸ್ಟಿರಿಯೊಸ್ಕೋಪಿಕ್ 3ಡಿ ವಿಡಿಯೋ ಸಪೋರ್ಟ್
* ಗೂಗಲ್ ಆಂಡ್ರಾಯ್ಡ್ ವಿ2.3 ಜಿಂಜರ್ ಬ್ರೀಡ್ ಅಪರೇಟಿಂಗ್ ಸಿಸ್ಟಮ್
* ಹಗುರ ಮತ್ತು ತೆಳ್ಳಗಿನ ಆಕರ್ಷಕ ಟ್ಯಾಬ್ಲೆಟ್
* ಮಿನಿ ಯುಎಸ್ ಬಿ ವಿ2.0 ಒಟಿಜಿ ಪೊರ್ಟ್
* 3.5 ಮಿ.ಮೀ. ಹೆಡ್ ಫೋನ್ ಜಾಕ್
* ಮುಂಭಾಗದಲ್ಲಿ ಕ್ಯಾಮರಾ
* ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಅವಕಾಶ.


Click it and Unblock the Notifications








