Subscribe to Gizbot

ಚಂದದ ಮನೆಗೆ ಲೆನೊವೊ ಪುಟ್ಟ ಕಂಪ್ಯೂಟರ್

Posted By: Super
ಚಂದದ ಮನೆಗೆ ಲೆನೊವೊ ಪುಟ್ಟ ಕಂಪ್ಯೂಟರ್
ಮನೆಯಲ್ಲಿರುವ ಕಂಪ್ಯೂಟರ್ ಸ್ಥಾನಕ್ಕೆ ಲ್ಯಾಪ್ ಟಾಪ್ ತರಲು ಎಲ್ಲರೂ ಯೋಚಿಸುತ್ತಿದ್ದಾರೆ. ಯಾಕೆಂದರೆ ಇದೀಗ ಲ್ಯಾಪ್ ಟಾಪ್ ತಯಾರಕರು ಲ್ಯಾಪ್ ಟಾಪ್ ಗಳಿಗೆ ಅತ್ಯಧಿಕ ಸೌಲಭ್ಯ ಫೀಚರುಗಳನ್ನು ತುಂಬಿಸುತ್ತಿದ್ದಾರೆ. ಕೆಲವು ಲ್ಯಾಪ್ ಟಾಪ್ ಗಳ ದರ ಕೂಡ ಕೈಗೆಟುಕುವಂತ್ತಿದ್ದು, ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ಆದರೆ ಈಗಲೂ ಡೆಸ್ಕ್ ಟಾಪ್ ಕಂಪ್ಯೂಟರ್ ಅಂದ್ರೆ ತುಂಬಾ ಜನ ಇಷ್ಟಪಡುತ್ತಾರೆ. ಡೆಸ್ಕ್ ಟಾಪ್ ಕಂಪ್ಯೂಟರನ್ನು ಲ್ಯಾಪ್ ಟಾಪಿಗೆ ಹೋಲಿಕೆ ಮಾಡುವುದು ಅವರಿಗೆ ಇಷ್ಟವಾಗುವುದಿಲ್ಲ. ಆದರೆ ಸಮಸ್ಯೆ ಏನಪ್ಪ ಅಂದ್ರೆ ಕಂಪ್ಯೂಟರ್ ಗಳು ಮನೆಯ ಹೆಚ್ಚಿನ ಸ್ಥಾನ ಆಕ್ರಮಿಸುತ್ತವೆ.

ಸಣ್ಣ ಮನೆಯಿದ್ದವರಿಗೆ ಟಿವಿ, ಕಂಪ್ಯೂಟರ್, ವಾಷಿಂಗ್ ಮೆಷಿನ್ ಅಂತ ಇಡಲು ಹೋದರೆ ನಿದ್ದೆ ಮಾಡಲು ಸ್ಥಳವಿರುವುದಿಲ್ಲ. ದೊಡ್ಡ ಮನೆಯಿದ್ದರೂ ದೊಡ್ಡ ಕಂಪ್ಯೂಟರ್ ಇಷ್ಟವಾಗುವುದಿಲ್ಲ. ಪುಟ್ಟ ಕಂಪ್ಯೂಟರ್ ಇರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೆಚ್ಚಿನವರು ಯೋಚಿಸದೇ ಇರುವುದಿಲ್ಲ.

ಇದೀಗ ಲೆನೊವೊ ಪುಟ್ಟ ಕಂಪ್ಯೂಟರೊಂದನ್ನು ಹೊರತಂದಿದೆ.. ಕಂಪನಿಯ ಪ್ರಕಾರ ಇದು ವಿಶ್ವದ ಸಣ್ಣ ಡೆಸ್ಕ್ ಟಾಪ್ ಕಂಪ್ಯೂಟರ್. ಇದರ ಹೆಸರು ಐಡಿಯಾ ಸೆಂಟರ್ ಕ್ಯೂ180. ಬೃಹತ್ ಮಾರುಕಟ್ಟೆಯನ್ನು ಆಕರ್ಷಿಸಲು ಕಂಪನಿಯ ಸಣ್ಣ ಐಡಿಯಾ ಅದ್ಭುತವಾಗಿದೆಯಲ್ಲವೇ?

ಇದು ಚಿಕ್ಕದಾಗಿ, ಚೊಕ್ಕದಾಗಿರುವ ಕಂಪ್ಯೂಟರ್. ಇದರ ಗಾತ್ರ 7.5 ಇಂಚು ಎತ್ತರ x 6.1 ಇಂಚು ಅಗಲ x 0.86 ಇಂಚು ದಪ್ಪವಿದೆಯಷ್ಟೇ. ಇದು ಹೋಮ್ ಥಿಯೆಟರ್ ನಂತಹ ಸಾಧನ. ಅಂದರೆ ಇದಕ್ಕೆ ಟೆಲಿವಿಷನ್ ಕೂಡ ಕನೆಕ್ಟ್ ಮಾಡಬಹುದಾಗಿದೆ. ಅಥವಾ ಸಂಪೂರ್ಣವಾಗಿ ಕಂಪ್ಯೂಟರ್ ಆಗಿಯೂ ಉಪಯೋಗಿಸಬಹುದಾಗಿದೆ.

ಈ ಡೆಸ್ಕ್ ಟಾಪ್ ಕಂಪ್ಯೂಟರ್ ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ.. Q180-31102AU ಕಂಪ್ಯೂಟರಿನಲ್ಲಿ ಇನ್ ಬುಲ್ಟ್ ಆಪ್ಟಿಕಲ್ ಡ್ರೈವ್ ಇಲ್ಲ. ಇನ್ನೊಂದು ಆವೃತ್ತಿ Q180-31102BU ಡಿವಿಡಿ ಬರ್ನರ್ ಅಥವಾ ಬ್ಲೂರೇ ಪ್ಲೇಯರ್ ಇದೆ. ಇವೆರಡೂ ಸಾಧನಗಳು ಇಂಟೆಲ್ ಅಟಾಂ ಡಿ2700 ಪ್ರೊಸೆಸರ್ ಹೊಂದಿವೆ. ಪ್ರೊಸೆಸರ್ ವೇಗ 2.13 ಗಿಗಾ ಹರ್ಟ್ಸ್.

ಈ ಪ್ರೊಸೆಸರಿಗೆ ತುಂಬಾ ಕಡಿಮೆ ವೋಲ್ಟೆಜ್ ಕರೆಂಟ್ ಸಾಕಾಗುತ್ತದೆ. ಇವೆರಡು ಆವೃತ್ತಿಗಳು 500ಜಿಬಿ ಹಾರ್ಡ್ ಡಿಸ್ಕ್ ಹೊಂದಿವೆ. ಇದರಲ್ಲಿ ಆರು ಯುಎಸ್ ಬಿ ಪೋರ್ಟ್ ಇದೆ. ವೈಫೈ, ಬ್ಲೂಟೂಥ್ ಇತ್ಯಾದಿ ಸೌಲಭ್ಯಗಳು ಇದರಲ್ಲಿವೆ. ಎಎಂಡಿ ರೇಡಿಯೊನ್ ಎಚ್ ಡಿ 6450ಎ ಗ್ರಾಫಿಕ್ಸ್ ಕಾರ್ಡ್ ಇದೆ.

ಲೆನೊವೊ ಐಡಿಯಾ ಸೆಂಟರ್ ದರ: ಐಡಿಯಾ ಸೆಂಟರ್ Q180-31102AU ದರ ಸುಮಾರು 20 ಸಾವಿರ ರು. ಮತ್ತು Q180-31102BU ದರ ಸುಮಾರು 23,500 ರುಪಾಯಿ ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot