ಸೋನಿ ಬ್ರವಿಯ 65 ಇಂಚ್ L.E.D ಟಿ.ವಿ ಬಿಡುಗಡೆ

Posted By: Varun
ಸೋನಿ ಬ್ರವಿಯ 65 ಇಂಚ್ L.E.D ಟಿ.ವಿ ಬಿಡುಗಡೆ

ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಮತ್ತೊಂದು ಹೆಸರೇ ಸೋನಿ ಎಂದರೆ ತಪ್ಪಾಗಲಾರದು. ತನ್ನ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನ ಪರಿಚಯಿಸುವಲ್ಲಿ ಅದು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅದಕ್ಕೆ ಮತ್ತೊಂದು ಉದಾಹರಣೆ ಈಗ ಬಿಡುಗಡೆ ಯಾಗಿರುವ ಸೋನಿ HX925 ಬ್ರವಿಯ ನ 65 ಇಂಚ್ ಎಲ್.ಇ .ಡಿ ಟಿ. ವಿ.

ಇದರಲ್ಲಿನ x -ರಿಯಾಲಿಟಿ ಪ್ರೊ ತಂತ್ರಜ್ಞಾನ ಪ್ರತಿ ಪಿಕ್ಸೆಲ್ ಅನ್ನು ವಿಶ್ಲೇಷಣೆ ಮಾಡಿ ಅತ್ಯುತ್ತಮ ಗುಣಮಟ್ಟದ ಚಿತ್ರ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ. ಮೋಶನ್ ಫ್ಲೋ ತಂತ್ರಜ್ಞಾನವೂ ಅಡಕವಾಗಿರುವ ಈ ಟಿ.ವಿ, ಇತರ ಟಿ.ವಿಗಳಿಗಿಂತ ನಾಲ್ಕು ಪಟ್ಟು ಸ್ಪಷ್ಟ ಚಿತ್ರ ಮೂಡಿಸುತ್ತದೆ.

ಇಂಟರ್ನೆಟ್ ಸೌಲಭ್ಯವೂ ಇದ್ದು ಯೂಟ್ಯೂಬ್, ಫೇಸ್ ಬುಕ್ , ಟ್ವಿಟರ್ , ಸ್ಕೈಪೆ ಬ್ರೌ ಸ್ ಮಾಡುವುದರ ಜೊತೆಗೆ, ಸೋನಿ ನೆಟ್ವರ್ಕ್ ನ ಲೈಬ್ರರಿ, ಸ್ಟಾರ್ ಮೀಡಿಯಾ ದ ಎಲ್ಲ ಹೊಸ ಚಲನಚಿತ್ರಗಳು, ಆಲ್ಬುಂ ಹಾಡುಗಳ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳಬಹುದು.ಟೂ- ಡಿ ಯಿಂದ ತ್ರೀ- ಡಿ ಗೆ ಬದಲಾಯಿಸುವ ತಂತ್ರಜ್ಞಾನದಿಂದ ನಿಮ್ಮ ವೀಕ್ಷಣೆ ಮತ್ತಷ್ಟುಉತ್ತಮವಾಗಲಿದ್ದು ಎರಡು ಜೊತೆ ತ್ರೀ- ಡಿ ಕನ್ನಡಕಗಳ ಜೊತೆ ಬರಲಿದೆ.

ಇಷ್ಟೆಲ್ಲಾ ಇದ್ದಮೇಲೆ ಇದರ ಬೆಲೆಯೂ ಜಾಸ್ತಿ ಇರಲೇಬೇಕು. ಸೋನಿ ವೆಬ್ ಸೈಟ್ ನ ಪ್ರಕಾರ ರೂ.3,59,900 ಗೆ ಇದು ನಿಮಗೆ ಲಭ್ಯ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot