ಸೋನಿ ಟ್ಯಾಬ್ಲೆಟ್ ನಲ್ಲಿ ಈಗ ಹೊಸ ಆಪರೇಟಿಂಗ್ ಸಿಸ್ಟಮ್ ನ ಪರಿಷ್ಕೃತ

ಹೊಸ ತಂತ್ರಜ್ಞಾನದ ಲ್ಯಾಪ್ ಟಾಪ್ ಗಳ ಗಳ ಮುಂದೆ ಹಳೆಯ ಲ್ಯಾಪ್ ಟಾಪ್ ಗಳು ಹಿಂದೆ ಸರಿಯಬಾರದೆಂದು ಕಂಪನಿಗಳು ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಪರಿಷ್ಕೃತಗೊಳಿಸುತ್ತಿವೆ. ಸೋನಿ ಮೊಬೈಲ್ ತನ್ನ ಟ್ಯಾಬ್ಲೆಟ್ ಎಸ್ ಮತ್ತು ಟ್ಯಾಬ್ಲೆಟ್ ಪಿ ಗಳಿಗೆ ಹೊಸ ಆಪರೇಟಿಂಗ್ ಸಿಸ್ಟಮ್ ನೀಡಲಿದೆ ಎಂದು ಈಗಾಗಲೆ ಘೋಷಿಸಿದೆ.ಈ ಸುದ್ಧಿ ಸೋನಿ ಬಳಕೆದಾರರಿಗೆ ಸಂತೋಷವನ್ನು ತಂದಿದೆ.
ಕಂಪನಿಯು ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಅನ್ನು ಸೋನಿ ಟ್ಯಾಬ್ಲೆಟ್ ನಲ್ಲಿ ಪರಿಷ್ಕೃತಗೊಳಿಸಲಾಗುವುದು ಎಂದು ಹೇಳಲಾಗಿದ್ದರೂ ಇದರ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲಿಲ್ಲ. ಈ ಎರಡೂ ಸೋನಿ ಟ್ಯಾಬ್ಲೆಟ್ ಗಳು ಆಕರ್ಷಕವಾದ ಗುಣಲಕ್ಷಣವನ್ನು ಹೊಂದಿದ್ದು ಸೋನಿ ಟ್ಯಾಬ್ಲೆಟ್ ಎಸ್ ನಲ್ಲಿ ಈ ಕೆಳಗಿನ ಪ್ರಮುಖ ಲಕ್ಷಣವನ್ನು ಕಾಣಬಹುದು.
* 9.4 ಸ್ಕ್ರೀನ್ ಗಾತ್ರ
* 1280 x 800 ಪಿಕ್ಸಲ್ ರೆಸ್ಯೂಲೇಶನ್
* NVIDIA ಟೆಗ್ರಾ ಡ್ಯುಯೆಲ್ ಕೋರ್ ಪ್ರೊಸೆಸರ್
* 16 GB ಮೆಮೊರಿ ಅಲ್ಲದೆ 32 GB ಆಂತರಿಕ ಮೆಮೊರಿ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಆಂಡ್ರಾಯ್ಡ್ 3.1 ಆಪರೇಟಿಂಗ್ ಸಿಸ್ಟಮ್
ಟ್ಯಾಬ್ಲೆಟ್ ಪಿ ನಲ್ಲಿ ಈ ಕೆಳಗಿನ ಲಕ್ಷಣವನ್ನು ಕಾಣಬಹುದು:
* 5.5 ಇಂಚಿನ ಸ್ಕ್ರೀನ್ ಗಾತ್ರ
* 1024 x 480 ಪಿಕ್ಸಲ್
* NVIDIA ಟೆಗ್ರಾ ಡ್ಯುಯೆಲ್ ಕೋರ್ ಪ್ರೊಸೆಸರ್
* ಆಂತರಿಕ ಮೆಮೊರಿ 4 GB
* ಮೈಕ್ರೊ SD ಬಳಸಿ ವಿಸ್ತರಿಸಬಹುದಾದ ಸೌಲಭ್ಯ
* 3.2 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್
ಇದೀಗ ಹೊಸ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಅನ್ನು ಈ ಟ್ಯಾಬ್ಲೆಟ್ ನಲ್ಲಿ ಅಳವಡಿಸಿದರೆ ಈ ಟ್ಯಾಬ್ಲೆಟ್ ಬಳಕೆದಾರರಿಗೆ ಇದರ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಲಿದೆ.


Click it and Unblock the Notifications








