ಟ್ಯಾಬ್ಲೆಟ್ ಪ್ರಮೋಷನಿಗೆ ಸೋನಿ 10 ಕೋಟಿ ರು. ವೆಚ್ಚ

Posted By: Staff
ಟ್ಯಾಬ್ಲೆಟ್ ಪ್ರಮೋಷನಿಗೆ ಸೋನಿ 10 ಕೋಟಿ ರು. ವೆಚ್ಚ
ದೇಶದ ಹೆಚ್ಚಿನ ಜನರು ಟ್ಯಾಬ್ಲೆಟ್ ಕಂಪ್ಯೂಟರುಗಳನ್ನು ಇಷ್ಟಪಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮಾರುಕಟ್ಟೆಗೆ ವಿನೂತನ ಟ್ಯಾಬ್ಲೆಟುಗಳು ಬರುತ್ತಿವೆ. ಇದೀಗ ಸೋನಿ ಕಂಪನಿಯು ತನ್ನ ಎಸ್ ಮತ್ತು ಪಿ ಟ್ಯಾಬ್ಲೆಟ್ ಗಳ ಪ್ರಮೋಷನಿಗಾಗಿ ಸುಮಾರು 10 ಕೋಟಿ ರುಪಾಯಿ ವಿನಿಯೋಗಿಸಲು ನಿರ್ಧರಿಸಿದೆ.

ಸೋನಿ ಕಳೆದ ಮೂರು ತಿಂಗಳಲ್ಲಿ ತನ್ನ ಟ್ಯಾಬ್ಲೆಟ್ ಕಂಪ್ಯೂಟರುಗಳ ಜಾಹೀರಾತು ಕಾರ್ಯಕ್ರಮಗಳಿಗೆ ಸುಮಾರು 10 ಕೋಟಿ ರುಪಾಯಿ ವಿನಿಯೋಗಿಸಿದೆಯಂತೆ. ಮುಂದಿನ ವರ್ಷ ಉತ್ತೇಜನ ಮತ್ತು ಮಾರುಕಟ್ಟೆ ಅಗತ್ಯಗಳಿಗಾಗಿ ಸುಮಾರು 360 ಕೋಟಿ ರುಪಾಯಿ ಹೂಡಿಕೆ ಮಾಡಲು ಕೂಡ ಕಂಪನಿ ನಿರ್ಧರಿಸಿದೆ.

ಸೋನಿ ಎಸ್ ಸೀರಿಸ್ ಮತ್ತು ಸೋನಿ ಪಿ ಸೀರಿಸ್ ಟ್ಯಾಬ್ಲೆಟ್ ಗಳು ಇತ್ತೀಚಿಗೆ ಕಂಪನಿ ಪರಿಚಯಿಸಿತ್ತು. ಈ ಟ್ಯಾಬ್ಲೆಟುಗಳು ಆಕರ್ಷಕ ಗೇಮ್ಸ್ ಮತ್ತು ಫೀಚರುಗಳನ್ನು ಹೊಂದಿದೆ. ಇದು ಪ್ಲೇ ಸ್ಟೇಷನ್ ಸಾಫ್ಟ್ ವೇರ್ ಹೊಂದಿರುವುದರಿಂದ ಟ್ಯಾಬ್ಲೆಟಿನಲ್ಲಿ ಪ್ಲೇ ಸ್ಟೇಷನ್ ವಿಡಿಯೋ ಗೇಮುಗಳನ್ನು ಆಡಬಹುದು.

ಸ್ಯಾಮ್ ಸಂಗ್ ಗ್ಯಾಲಾಕ್ಷಿ ಮತ್ತು ಆಪಲ್ ಐಪ್ಯಾಡ್ ನಲ್ಲಿರುವ ಫೀಚರುಗಳಂತೆ ಸೋನಿ ಎಸ್ ಮತ್ತು ಪಿ ಸೀರಿಸ್ ಟ್ಯಾಬ್ಲೆಟ್ ಕೂಡ ಆಕರ್ಷಕವಾಗಿದೆ. ಇದರಲ್ಲಿರುವ ಒಂದು ಬಟನ್ ಮೂಲಕ ಇದನ್ನು ಟಿವಿ, ಪರ್ಸನಲ್ ಕಂಪ್ಯೂಟರ್, ಹೋಮ್ ಥಿಯೆಟರ್ ಸಿಸ್ಟಮ್ ಇತ್ಯಾದಿಗಳಿಗೆ ಬದಲಾಯಿಸಿಕೊಳ್ಳಬಹುದು.

ಸೋನಿ ನೂತನ ಟ್ಯಾಬ್ಲೆಟ್ ಗಳು ಆಂಡ್ರಾಯ್ಡ್ ವಿ3.2 ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿರುವುದು ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ನೆರವಾಗಿದೆ. ಸೋನಿಯ ಎಸ್ ಮತ್ತು ಪಿ ಸರಣಿಯ ಟ್ಯಾಬ್ಲೆಟ್ ದರಗಳು ಸುಮರು 30 ಸಾವಿರ ರು. ಆಸುಪಾಸಿನಲ್ಲಿವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot