Subscribe to Gizbot

ಸೊನಿ ವಯೊ: ಡ್ಯೂಯಲ್ ಕೋರ್ ಲ್ಯಾಪ್ ಟಾಪ್ ಧಮಾಕ

Posted By: Super
ಸೊನಿ ವಯೊ: ಡ್ಯೂಯಲ್ ಕೋರ್ ಲ್ಯಾಪ್ ಟಾಪ್ ಧಮಾಕ
ಸೋನಿ ವಯೊ ಸರಣಿ ಲ್ಯಾಪ್ ಟಾಪ್ ಗಳನ್ನು ಹೊರತರುವ ಮೂಲಕ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಸೋನಿ ಹೆಚ್ಚು ಸದೃಢವಾಗಿದೆ. ಈ ಸರಣಿ ಲ್ಯಾಪ್ ಟಾಪ್ ಗಳು ಅತ್ಯಧಿಕ ಟೆಕ್ ವಿಶೇಷಗಳಿಂದ ಮತ್ತು ಕಾರ್ಯಕ್ಷಮತೆಗಳಿಂದ ಹೆಚ್ಚು ಜನರನ್ನು ಸೆಳೆದಿದೆ.

ವಯೊ ಸರಣಿಗೆ ನೂತನ ಸೇರ್ಪಡೆ VAIO VPCEL25EN/B ಲ್ಯಾಪ್ ಟಾಪ್. ಇದು ಕೈಗೆಟುಕುವ ದರ ಮತ್ತು ಅತ್ಯುತ್ತಮ ದಕ್ಷತೆಯ ಉತ್ಪನ್ನವಾಗಿದೆ ಎಂದು ಗ್ಯಾಡ್ಜೆಟ್ ಗುರು ಹೇಳುತ್ತಾರೆ.

ಟೆಕ್ ಮಾಹಿತಿ

* ಎಎಂಡಿ ಡ್ಯೂಯಲ್ ಕೋರ್ ಪ್ರೊಸೆಸರ್

* 15.5 ಇಂಚಿನ ಡಿಸ್ ಪ್ಲೇ

* ಎಎಂಡಿ ಗ್ರಾಫಿಕ್ಸ್ ಕಾರ್ಡ್

* 2 ಜಿಬಿ RAM

* 500 ಎಂಬಿ ಹಾರ್ಡ್ ಡಿಸ್ಕ್

* ವೈಫೈ

* ಬ್ಲೂಟೂಥ್

* ಇಂಟೆಲ್ ಹೈಡೆಫಿನೇಷನ್ ವಿಡಿಯೋ

ಹಳೆಯ ವಯೊ ಸರಣಿಗಳ ವಿನ್ಯಾಸಕ್ಕೂ ಇದಕ್ಕೂ ಮಹತ್ವದ ವ್ಯತ್ಯಾಸಗಳಿಲ್ಲ. ಕೇವಲ ಗ್ರಾಫಿಕ್ಸ್ ಗಳಲ್ಲಿ ಕೊಂಚ ವ್ಯತ್ಯಾಸವಿದೆಯಷ್ಟೇ. ವಯೊ ಬ್ರಾಂಡಿನ ಕವರ್ ವಿನ್ಯಾಸ ಯಾವತ್ತೂ ಆಕರ್ಷಕ.

ನೂತನ ವಯೊ ಲ್ಯಾಪ್ ಟಾಪ್ ತೂಕ 2.7 ಕೆ.ಜಿ. ಇದು ಸಂಪೂರ್ಣವಾಗಿ ಕ್ವೆರ್ಟಿ ಕೀಬೋರ್ಡ್,  ನಂಬರ್ ಪ್ಯಾಡ್ ಮತ್ತು ಮಲ್ಟಿ ಗೆಸ್ಚರ್ ಟಚ್ ಪ್ಯಾಡ್ ಆಯ್ಕೆಗಳಲ್ಲಿ ದೊರಕುತ್ತದೆ. ಟಚ್ ಪ್ಯಾಡ್ ನಲ್ಲಿ ಎರಡು ಕ್ಲಿಕ್ ಬಟನ್ ಇದೆ.

ಸೋನಿ ವಯೊ VPCEL25EN/B ಡಿಸ್ ಪ್ಲೇ 15.5 ಇಂಚಿನದ್ದಾಗಿದ್ದು, 1366 x 768 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಇದು ಎಲ್ ಇಡಿ ಬ್ಯಾಕ್ ಲೈಟಿನೊಂದಿಗೆ ಟಿಎಫ್ ಟಿ ಕಲರ್ ಡಿಸ್ ಪ್ಲೇ ಹೊಂದಿದೆ. ಸೋನಿ ನೂತನ ವಯೊ ಲ್ಯಾಪ್ ಟಾಪ್ ಡ್ಯೂಯಲ್ ಕೋರ್ ಎಎಂಡಿ ಇ-450 ಪ್ರೊಸೆಸರ್ ಹೊಂದಿದೆ. ಈ ಲ್ಯಾಪಿ AMD A50M FCH ಚಿಪ್ ಸೆಟ್ ಹೊಂದಿದೆ.

ಇದು ಸಾಟಾ ಮಾದರಿಯ 500 ಜಿಬಿ ಹಾರ್ಡ್ ಡಿಸ್ಕ್ ಹೊಂದಿದೆ. ಇದರ ಆಪ್ಟಿಕಲ್ ಡ್ರೈವ್ ಡಿವಿಡಿ ಮಲ್ಟಿ ಫಾರ್ಮೆಟ್ ಮತ್ತು ಸಿಡಿಗಳಿಗೆ ಬೆಂಬಲ ನೀಡುತ್ತದೆ. ವಿಡಿಯೋ ಚಾಟಿಂಗ್ ಗೆ ಅನುಕೂಲವಾಗುವಂತೆ ಲ್ಯಾಪ್ ಟಾಪ್ ಮೇಲ್ಬಾಗದಲ್ಲಿ 0.3 ಮೆಗಾ ಫಿಕ್ಸೆಲ್ ವೆಬ್ ಕ್ಯಾಮರಾವಿದೆ.

ನಾಲ್ಕು ಯುಎಸ್ ಬಿ ಪೋರ್ಟ್, ವೈ-ಫೈ ಮತ್ತು ಬ್ಲೂಟೂಥ್ ಇತ್ಯಾದಿ ಕನೆಕ್ಟಿವಿಟಿ ಆಯ್ಕೆಗಳಿವೆ. ಸ್ಕ್ರೀನ್ ಅಥವಾ ಪ್ರಾಜೆಕ್ಟರಿಗೆ ಬೆಂಬಲ ನೀಡುವ ಎಚ್ ಡಿಎಂಐ ಪೋರ್ಟ್ ಕೂಡ ಇದರಲ್ಲಿದೆ. Sony VAIO VPCEL25EN/B ದರ ಸುಮಾರು 25,900 ರುಪಾಯಿ ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot