ಸ್ಪೈಸ್ ಮಿ vs ಐಬಾಲ್ ಸ್ಲೈಡ್: ಯಾವುದು ಗುಡ್?

Posted By: Staff
ಸ್ಪೈಸ್ ಮಿ vs ಐಬಾಲ್ ಸ್ಲೈಡ್: ಯಾವುದು ಗುಡ್?
ಟ್ಯಾಬ್ಲೆಟ್ ಕಂಪ್ಯೂಟರ್ ಮಾರುಕಟ್ಟೆಯ ವ್ಯಾಪ್ತಿ ಹಿಗ್ಗುತ್ತಿದೆ. ಪ್ರತಿದಿನ ಲೆಕ್ಕವಿಲ್ಲದಷ್ಟು ಹೊಸ ಹೊಸ ಉತ್ಪನ್ನಗಳು ಆಗಮಿಸುತ್ತಿದೆ. ಇಲ್ಲಿ Spice mi Tablet ಮತ್ತು iBall Slide Tablet ನಡುವಿನ ವ್ಯತ್ಯಾಸ, ಹೋಲಿಕೆ ನೀಡಲಾಗಿದೆ. ಯಾವುದು ನಿಮಗಿಷ್ಟ. ಆಯ್ಕೆ ಮಾಡಿಕೊಳ್ಳಿರಿ.

* ಇವೆರಡು ಟ್ಯಾಬ್ಲೆಟ್ ಗಳು ಆಕರ್ಷಕವಾಗಿವೆ. ಸೌಂದರ್ಯದಲ್ಲಿ ಸ್ಪೈಸ್ ಹೆಚ್ಚು ಇಷ್ಟವಾಗುತ್ತದೆ.

* iBall Slide Tablet ಮತ್ತು Spice mi Tablet ಎರಡೂ 7 ಇಂಚಿನ ಮಲ್ಟಿ ಟಚ್ ಸ್ಕ್ರೀನ್ ಹೊಂದಿದೆ. ಇದರಲ್ಲಿ ಸ್ಪೈಸ್ ಮಿ 116.5×12.5 ಸ್ಕೀನ್ ವಿಸ್ತಾರ ಹೊಂದಿದೆ. ಇದರ ತೂಕ 485 ಗ್ರಾಮ ಇದೆ. ಐಬಾಲ್ ಸ್ಲೈಡ್ ಟ್ಯಾಬ್ಲೆಟ್ ಕೂಡ ಆಕರ್ಷಕ ಸ್ಕ್ರೀನ್ ಮತ್ತು ಹೈಡೆಫಿನೇಷನ್ ಫೀಚರ್ಸ್ ಹೊಂದಿದೆ.

* ಇವರಡೂ ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಒಂದೇ ರೀತಿಯ ಸಂಗ್ರಹ ಸಾಮರ್ಥ್ಯ ಹೊಂದಿವೆ. ಅಂದರೆ ಇವೆರಡು ಟ್ಯಾಬ್ಲೆಟ್ ಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 32 ಜಿಬಿ.

* ಕೆಲವು ವರದಿಗಳ ಪ್ರಕಾರ ಐಬಾಲ್ ಸ್ಲೈಡ್ ನ ಮುಂಭಾಗದ ಕ್ಯಾಮರಾ ಚೆನ್ನಾಗಿದೆ. ಆದರೆ ಹಿಂಭಾಗದ ಕ್ಯಾಮರಾ ಅಷ್ಟು ಉತ್ತಮವಾಗಿಲ್ಲವಂತೆ. ಆದರೆ ಸ್ಲೈಡ್ ಮಿ 2 ಮೆಗಾ ಫಿಕ್ಸೆಲ್ ಹಿಂಭಾಗದ ಕ್ಯಾಮರಾ ಹೊಂದಿದ್ದು ಪರವಾಗಿಲ್ಲ ಎನಿಸುವಂತ್ತಿದೆ.

* ಅಪರೇಟಿಂಗ್ ಸಿಸ್ಟಮ್ ವಿಷ್ಯಕ್ಕೆ ಬಂದರೆ ಐಬಾಲ್ ಸ್ಲೈಡ್ ವಿ2.3 ಆಂಡ್ರಾಯ್ಡ್ ಜಿಂಜರ್ ಬ್ರಿಡ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಸ್ಪೈಸ್ ಮಿ ವಿ2.2 ಆಂಡ್ರಾಯ್ಡ್ ಫ್ರೊಯೊ ಸಿಸ್ಟಮ್ ಹೊಂದಿದೆ. ಇವೆರಡರಲ್ಲಿ ಐಬಾಲ್ ಅಪರೇಟಿಂಗ್ ಸಿಸ್ಟಮ್ ಹೆಚ್ಚು ಕಾರ್ಯಕ್ಷಮತೆ ಹೊಂದಿದೆ.

* ಐಬಾಲ್ ಒಂದುಗಿಗಾಹರ್ಟ್ಸ್ ಎಆರ್ಎಂ ಕೊರ್ಟೆಕ್ಸ್ ಪ್ರೊಸೆಸರ್ ಹೊಂದಿದೆ. ಸ್ಪೈಸ್ ಮಿ 800 ಮೆಗಾಹರ್ಟ್ಸ್ ನ ಸ್ನಾಪ್ ಡ್ರಾಗನ್ ಎಸ್1 ಪ್ರೊಸೆಸರ್ ಹೊಂದಿದೆ. ಇವೆರಡು ಪ್ರೊಸೆಸರ್ ಗಳು ಉತ್ತಮ ದಕ್ಷತೆ ಹೊಂದಿವೆ.

* ಸ್ಪೈಸ್ ಮಿ ಜಿಪಿಆರ್ಎಸ್ ಸಪೋರ್ಟ್ ಹೊಂದಿದ್ದರೂ 3ಜಿ ಕನೆಕ್ಟಿವಿಟಿ ಹೊಂದಿಲ್ಲ. ಆದರೆ ಐಬಾಲ್ ಸ್ಲೈಡ್ 3ಜಿ ಕನೆಕ್ಟಿವಿಟಿ ಹೊಂದಿದೆ. ಆದರೆ ಯುಎಸ್ ಬಿ ಉಪಯೋಗಿಸಲು ಬಳಕೆದಾರರು ಪ್ರತ್ಯೇಕ ಡೇಟಾ ಕಾರ್ಡ್ ಖರೀದಿಸುವ ಅಗತ್ಯವಿದೆ.

* ಇವೆರಡು ಟ್ಯಾಬ್ಲೆಟ್ ದರ ಕೂಡ ಭಿನ್ನವಾಗಿದೆ. ಐಬಾಲ್ ಸ್ಲೈಡ್ ದರ ಸುಮಾರು 14 ಸಾವಿರ ರು. ಮತ್ತು ಸ್ಪೈಸ್ ಮಿ ಟ್ಯಾಬ್ಲೆಟ್ ದರ ಸುಮಾರು 12 ಸಾವಿರ ರುಪಾಯಿ ಇದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot