ಭಾರತದ ಮೊದಲ 3D ಟ್ಯಾಬ್ಲೆಟ್ ಕೇವಲ 5,999

By Varun
|
ಭಾರತದ ಮೊದಲ 3D ಟ್ಯಾಬ್ಲೆಟ್ ಕೇವಲ 5,999

ಟ್ಯಾಬ್ಲೆಟ್ ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟಿರುವ ಸ್ವೈಪ್ ಟೆಲಿಕಾಂ ಈಗ 3D Life Tab X74 ಹೆಸರಿನ ಭಾರತದ ಮೊದಲ 3D ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.

3D ಚಿತ್ರಗಳು ಈ ನಡುವೆ ಜಾಸ್ತಿಯಾಗುತ್ತಿದ್ದು, ಜನರಿಗೂ ಇದರ ಬಗ್ಗೆ ಕ್ರೇಜ್ ಹೆಚ್ಚಾಗಿದ್ದು, ಸ್ವೈಪ್ ಇದರ ಲಾಭ ಪಡೆಯಲು ಮೊಟ್ಟ ಮೊದಲ ಬಾರಿಗೆ ಟ್ಯಾಬ್ಲೆಟ್ ನಲ್ಲೆ 3D ನೋಡಲು ಅನುಕೂಲವಾಗುವಂತೆ ಟ್ಯಾಬ್ಲೆಟ್ ಬಿಟ್ಟಿದೆ. 3D ಗೇಮ್ಸ್ ಹಾಗು ವೀಡಿಯೋಗಳನ್ನು ನೋಡಬಹುದಾಗಿದ್ದು, ಉಚಿತ ಗ್ಲಾಸ್ ಜೊತೆ ಬರಲಿದೆ.

ಇದರ ಫೀಚರುಗಳು ಈ ರೀತಿ ಇವೆ:

 • 7-ಇಂಚಿನ TFT ಕೆಪಾಸಿಟಿವ್ ಟಚ್ ಸ್ಕ್ರೀನ್

 • 800x480 ಪಿಕ್ಸೆಲ್ ರೆಸಲ್ಯೂಶನ್

 • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

 • Allwinner A13 ಕಾರ್ಟೆಕ್ಸ್ A8 CPU, 1.2GHz-1.5GHz ಸ್ಪೀಡ್ ನೊಂದಿಗೆ

 • Mali 400 GPU

 • 512 MB ರಾಮ್

 • 4GB ಆಂತರಿಕ ಮೆಮೊರಿ

 • 16GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • Wi-Fi, ಬ್ಲೂಟೂತ್ 2G GSM ಸಿಮ್ ಸ್ಲಾಟ್

 • 1080p ವಿಡಿಯೋ ವಿಡಿಯೋ ಸಪೋರ್ಟ್

 • 2 ಮೆಗಾ ಪಿಕ್ಸೆಲ್ ಕ್ಯಾಮರಾ

 • 3.400 mAh ಬ್ಯಾಟರಿ
ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಇದನ್ನು 5,999 ರೂಪಾಯಿಗೆ ಕೊಳ್ಳಬಹುದು.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X