ಸೂಪರ್ ಗೇಮಿಂಗ್ ಅನುಭವ ನೀಡುತ್ತೆ ಈ ಟ್ಯಾಬ್ಲೆಟ್

|
ಸೂಪರ್ ಗೇಮಿಂಗ್ ಅನುಭವ ನೀಡುತ್ತೆ ಈ ಟ್ಯಾಬ್ಲೆಟ್

ಆಧುನಿಕ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳು ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಮತ್ತಷ್ಟು ಸಾಮರ್ಥ್ಯವನ್ನು ಹೊಂದುವಂತೆ ಮಾಡುತ್ತಿವೆ. ಅದರಲ್ಲೂ ಟ್ಯಾಬ್ಲೆಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂದು ವೇಳೆ ನೀವು ಟ್ಯಾಬ್ಲೆಟ್ ಕೊಳ್ಳಬೇಕೆಂದು ಬಯಸಿದ್ದು ಗೇಮ್ ಪ್ರಿಯರಾಗಿದ್ದರೆ ಅಂತಹವರಿಗೆ JXD ಟ್ಯಾಬ್ಲೆಟ್ ಸೂಕ್ತವಾದ ಟ್ಯಾಬ್ಲೆಟ್ ಆಗಿದೆ.

ಈ ಗೇಮಿಂಗ್ ಟ್ಯಾಬ್ಲೆಟ್ ಅನ್ನು JXD S7100 ಎಂದು ಗುರುತಿಸಲಾಗಿದ್ದು ಈ ಮಾಡಲ್ ಪ್ರಮುಖವಾಗಿ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.

* 7 ಇಂಚಿನ ಡಿಸ್ ಪ್ಲೇ

* 800 x 480 ಪಿಕ್ಸಲ್ ಸ್ಕ್ರೀನ್ ರೆಸ್ಯೂಲೇಶನ್

* ಡ್ಯುಯೆಲ್ ಕೋರ್ ಕೋರ್ ಟೆಕ್ಸ್ A9 ಪ್ರೊಸೆಸರ್

* ಮಾಲಿ-400 GPU

* 512 MB ಸಿಸ್ಟಮ್ ಮೆಮೊರಿ

* 16 GB ಆಂತರಿಕ ಮೆಮೊರಿ

* ವೈಫೈ

* HDMI ಸಂಪರ್ಕ

* ಆಂಡ್ರಾಯ್ಡ್ 2.2 ಪ್ರೊಯೊ ಆಪರೇಟಿಂಗ್ ಸಿಸ್ಟಮ್'

* 4 ಗಂಟೆ ವೆಬ್ ಬ್ರೌಸಿಂಗ್, 10 ಗಂಟೆ ಮ್ಯೂಸಿಕ್ ಪ್ಲೇ

ಈ ಸಾಧನದ ಕೆಲವು ಲಕ್ಷಣಗಳು ಆಪಲ್ ನಲ್ಲಿ ಇರುವಂತೆಯೆ ಇದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದರೆ, ಇನ್ನೂ ಕೆಲವರು ಇದರ ವೆಬ್ ಸೈಟ್ ಕೂಡ ಆಪಲ್ ರೀತಿಯೆ ಇದೆ ಎಂದು ಹೇಳಲಾಗುತ್ತಿದೆ, ಒಟ್ಟಿನಲ್ಲಿ ಬಳಕೆದಾರರಿಗೆ ಬಳಸಲು ಸುಲಭವಾಗುವಂತೆ ಈ ಸಾಧನವನ್ನು ತಯಾರಿಸಲಾಗಿದೆ.

ಇದರ ಮತ್ತೊಂದು ಪ್ರಮುಖ ಆಕರ್ಷಣೆ ಅದರೆ ಇದರ ಬೆಲೆ. ಈ JXD S7100 ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರು. 10, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X