Subscribe to Gizbot

ಎವ್ರಿವೇರ್ ಟೀವಿ ಅಪ್ಲಿಕೇಶನ್ ನಿಮ್ಮ ಕಂಪ್ಯೂಟರ್‌ಗೂ

Written By:

ದೇಶದಲ್ಲಿ ಉತ್ತಮವಾಗಿ ಹೆಸರು ಮಾಡಿಕೊಂಡು ಜನಪ್ರಿಯತೆಯನ್ನು ಗಳಿಸುತ್ತಿರುವ ಪೇ - ಟೀವಿ ಆಪರೇಟರ್‌ಗಳಾದ ಟಾಟಾ ಸ್ಕೈ ತನ್ನ ಜನಪ್ರಿಯ ಅಪ್ಲಿಕೇಶನ್ ಆದ ಎವ್ರಿವೇರ್ ಟೀವಿ ಅಪ್ಲಿಕೇಶನ್ ಅನ್ನು (ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್) ಗಳಿಗೆ ಲಾಂಚ್ ಮಾಡಿದೆ. ಎಲ್ಲಾ ಟಾಟಾ ಸ್ಕೈ ಚಂದಾದಾರರಿಗೆ, ಎವ್ರಿವೇರ್ ಟೀವಿ ಸೇವೆಯು ಸ್ಮಾರ್ಟ್‌ - ಫೋನ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ (ಐಓಎಸ್ ಮತ್ತು ಆಂಡ್ರಾಯ್ಡ್ ಡಿವೈಸ್) ಮಾತ್ರ ಇದೀಗ ಲಭ್ಯವಿದೆ.

ಟಾಟಾ ಸ್ಕೈ ಚಂದಾದಾರರು ಫಿಫಾ ವರ್ಲ್ಡ್‌ಕಪ್ ಅನ್ನು ಸೋನಿ ಸಿಕ್ಸ್‌ನಲ್ಲಿ ಇದೀಗ ವೀಕ್ಷಿಸಬಹುದಾಗಿದ್ದು ಇದಕ್ಕೆ ಹೆಚ್ಚುವರಿ ದುಡ್ಡನ್ನು ನೀವು ತೆರುವ ಅವಶ್ಯಕತೆಯಿಲ್ಲ. ಇದು ಕೂಡ ಎವ್ರಿವೇರ್ ಟೀವಿ ಸೇವೆಯ ಒಂದು ಕೊಡುಗೆಯಾಗಿದೆ.

ಟಾಟಾ ಸ್ಕೈಯಿಂದ ಹೊಸ ಟೀವಿ ಆಪ್ ಬಿಡುಗಡೆ

ಚಂದಾದಾರರ ಬದಲಾಗುತ್ತಿರುವ ಜೀವನ ಶೈಲಿ ಮತ್ತು ವೀಕ್ಷಣೆಯ ಆದ್ಯತೆಗಳನ್ನು ಗಮನವಿಟ್ಟುಕೊಂಡು ತನ್ನ 'ಟೆಲಿವಿಶನ್ ವೀಕ್ಷಣೆ' ಅನುಭವವನ್ನು ಲಿವಿಂಗ್ ರೂಮಿನಿಂದ ಹೆಚ್ಚು ವೀಕ್ಷಣೆ ಸಾಧನೆಗಳಿಗೆ ವಿಸ್ತರಿಸುವ ಆಶಯ ಟಾಟಾ ಸ್ಕೈನದ್ದಾಗಿದೆ.

ಟಾಟಾ ಸ್ಕೈನ ಮುಖ್ಯ ವಾಣಿಜ್ಯ ಅಧಿಕಾರಿಯಾಗಿರುವ ವಿಕ್ರಮ್ ಮೆಹ್ರಾ ಹೇಳುವಂತೆ, ಫೋನ್ ಹಾಗೂ ಟ್ಯಾಬ್ಲೆಟ್‌ನಲ್ಲಿ ಎವ್ರಿವೇರ್ ಟೀವಿ ಅಪ್ಲಿಕೇಶನ್‌ನ ಯಶಸ್ಸು ನಮ್ಮನ್ನು ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗೂ ಅಳವಡಿಸುವ ಪ್ರಯತ್ನಕ್ಕೆ ದೂಡಿದೆ. ಇದರಲ್ಲೀ ನಾವು ಯಶಸ್ಸನ್ನು ಹೊಂದುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂಬುದು ಅವರ ಮಾತಾಗಿದೆ. ಇನ್ನು ಫುಟ್ಬಾಲ್ ನಶೆಯನ್ನು ವೀಕ್ಷಕರೂ ತಮ್ಮ ವೈಯಕ್ತಿಕ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗಳಲ್ಲಿ ಕೂಡ ಆಸ್ವಾದಿಸಬಹುದೆಂದು ಅವರು ಹೇಳುತ್ತಾರೆ.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಸೋನಿ ಸಿಕ್ಸ್ ಮತ್ತು ಒನ್‌ಅಲೈನ್ಸ್ ಚಾನೆಲ್‌ಗಳು ನಮ್ಮ ಈ ಸಾಧನೆಗೆ ಬೆನ್ನೆಲುಬಾಗಿದ್ದು ನಮ್ಮ ಚಂದಾದಾರಿಕೆಗಳನ್ನು ಈ ಚಾನಲ್‌ಗಳಲ್ಲಿ ತರುವ ಅನುಮತಿಯನ್ನು ಇವುಗಳು ಮಾಡಿಕೊಟ್ಟಿವೆ ಎಂದವರು ತಿಳಿಸಿದ್ದಾರೆ.

ಎವ್ರಿವೆರ್ ಟೀವಿ ಅಪ್ಲಿಕೇಶನ್ ಅನ್ನು ಪಿಸಿಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಚಂದಾದಾರರು ವೆಬ್‌ಸೈಟ್‌ಗೆ ಭೇಟಿ ನೀಡುವುದು ಅತ್ಯವಶ್ಯಕವಾಗಿದೆ. ಕಳೆದ ವರ್ಷ ಸ್ಥಾಪನೆಗೊಂಡ ಟಾಟಾ ಸ್ಕೈನ ಎವ್ರಿವೇರ್ ಟೀವಿ ಸೇವೆಯು ಲಾಂಚ್ ಆದ ಎರಡು ವಾರಗಳಲ್ಲಿ ಒಂದು ಲಕ್ಷದಷ್ಟು ಚಂದಾದಾರರನ್ನು ಪಡೆದುಕೊಂಡಿತ್ತು.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot