ಕೆಂಪು ಲ್ಯಾಪ್ ಟಾಪ್ ನಲ್ಲಿ ಒಮ್ಮೆ ಆಡಬಾರದೇ

Posted By: Staff
ಕೆಂಪು ಲ್ಯಾಪ್ ಟಾಪ್ ನಲ್ಲಿ ಒಮ್ಮೆ ಆಡಬಾರದೇ
ತೋಷಿಬಾ ಕಂಪನಿಯ Qosmio X770 ಲ್ಯಾಪ್ ಟಾಪಿನ ಕಂಪು ಹೆಚ್ಚಾಗಿದೆ. ಇದೀಗ ಕಂಪನಿಯು ಕೆಂಪು ಪೇಂಟ್ ನಲ್ಲಿ ಪರಿಷ್ಕೃತ ಕ್ಯೂಸೊಮಿಯೊ ಲ್ಯಾಪ್ ಟಾಪ್ ಹೊರತಂದಿದೆ. ಇದು ಗೇಮಿಂಗ್ ಲ್ಯಾಪ್ ಟಾಪ್.

Toshiba Qosmio X770 ಲ್ಯಾಪ್ ಟಾಪ್ ಹೈಡೆಫಿನೇಷನಿನ 17.3 ಇಂಚಿನ ಸ್ಕ್ರೀನ್ ಹೊಂದಿದೆ. ಇದರಲ್ಲಿ 3ಡಿ ಸಿನಿಮಾ ಮತ್ತು ಗೇಮ್ ಅನುಭವ ಅನನ್ಯವಾಗಿದೆ. ಇದರಲ್ಲಿ ಇಂಟೆಲ್ ಕಂಪನಿಯ ಕೋರ್ ಐ7 ಪ್ರೊಸೆಸರ್ ಇದೆ. ತೋಷಿಬಾ ಕೆಂಪು ಲ್ಯಾಪ್ ಟಾಪ್ ನಲ್ಲಿ 8 ಜಿಬಿಯ ಜೀಫೋರ್ಸ್ ಜಿಟಿಎಕ್ಸ್ 560ಎಂ RAM ಮತ್ತು ಎನ್ವಿಡಿಯಾ ಗ್ರಾಫಿಕ್ಸ್ ಕಾರ್ಡ್ ಇದೆ.

ಎಲ್ಲ ಓಕೆ ಈ ಕೆಂಪು ಸುಂದರಿಗೆ ದರವೆಷ್ಟು? ಇದರ ದರ ಸುಮಾರು 80 ಸಾವಿರ ರು.ನಿಂದ 1 ಲಕ್ಷ ರು.ವರೆಗಿದೆ. ಇದರ ಕೆಂಪು ಬಣ್ಣ ನೋಡಿ ಮೆಚ್ಚಿದವರು ದುಬಾರಿಯಾದರೂ ಖರೀದಿಸಬಹುದು.

ಈ ಸುಂದರ ಲ್ಯಾಪ್ ಟಾಪ್ ನಲ್ಲಿ ಕೆಲವು ಇಷ್ಟವಾಗದ ವಿಷ್ಯಗಳು ಇವೆ. ಅಂದರೆ ಇದು ಸುಮಾರು 3.4 ಕೆಜಿ ಇದೆ. ಹೀಗಾಗಿ ದಿನನಿತ್ಯ ಜೊತೆಗೆ ಕೊಂಡೊಯ್ಯುವರಿಗೆ ಕೊಂಚ ಭಾರವಾದೀತು. ಇದರ ಬ್ಯಾಟರಿ ಬ್ಯಾಕಪ್ ಕೂಡ ಇಷ್ಟವಾಗುವಂತೆ ಇಲ್ಲವೆಂದು ಗ್ಯಾಡ್ಜೆಟ್ ಗುರು ಹೇಳುತ್ತಾರೆ. ಇದು ಕೇವಲ ಎರಡುವರೆ ಗಂಟೆ ಬ್ಯಾಟರಿ ಬಾಳಿಕೆ ನೀಡುತ್ತದೆ.

ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ ಇಷ್ಟವಾಗುವ ಅಂಶಗಳು ಸಾಕಷ್ಟಿವೆ. ಈ ಗೇಮಿಂಗ್ ಲ್ಯಾಪ್ ಟಾಪ್ ಅನನ್ಯ ಆಟಕ್ಕೆ ಸಹಕರಿಸುತ್ತದೆ. ಅಂದರೆ ಇದರಲ್ಲಿ ಹೈಡೆಫಿನೆಷನ್ ವೀಡಿಯೋ, ಫೋಟೊ ವೀಕ್ಷಣೆ ಸಾಧ್ಯವಿದೆ.

ಇದು 3ಡಿ ಲ್ಯಾಪ್ ಟಾಪ್ ಕೂಡ ಹೌದು. ಇದರಲ್ಲಿ ತ್ರಿಡಿ ಸಿನಿಮಾಗಳನ್ನು, ಗೇಮ್ ಗಳನ್ನು 3ಡಿ ಕನ್ನಡಕ ಹಾಕಿ ನೋಡಬಹುದು. ಇದರಲ್ಲಿ ಎನ್ವಿಡಿಯಾ ಸಾಫ್ಟವೇರ್ ಇರುವುದರಿಂದ 3ಡಿ ಫೈಲ್ ಲೋಡ್ ಮಾಡುವುದು ಕಷ್ಟವಾಗುವುದಿಲ್ಲ. ಎನಿವೇ ಈ ಗೇಮಿಂಗ್ ಲ್ಯಾಪ್ ಟಾಪ್ ಗೆ ಒಂದು ಲಕ್ಷ ರು.ವರೆಗೆ ಪಾವತಿಸಲು ರೆಡಿ ಇರುವರು ಖರೀದಿಸಿ ಆಡಬ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot