Subscribe to Gizbot

ಮಾರುಕಟ್ಟೆಯಲ್ಲಿ ಆಪಲ್ ಮ್ಯಾಕ್ ಪ್ರೋ ಲಭ್ಯ: ಅತೀ ದುಬಾರಿ ಬೆಲೆ ಶಾಕ್ ಆಗಬೇಡಿ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಉತ್ಪನ್ನಗಳ ಬೇಡಿಕೆಯೂ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಆಪಲ್ ಸಹ ಭಾರತೀಯರಿಗಾಗಿಯೇ ಹೊಸ ಮಾದರಿಯಲ್ಲಿ ಬದಲಾವಣೆಯನ್ನು ಕಂಡದೆ. ಈಗಾಗಲೇ ಭಾರತದಲ್ಲಿಯೇ ತನ್ನ ಐಫೋನ್ ಅನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇದೆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೊಸದೊಂದು ಪವರ್ ಫುಲ್ ಮ್ಯಾಕ್ ಅನ್ನು ರಿಲೀಸ್ ಮಾಡಿದ್ದು, ಅತೀ ದುಬಾರಿ ಬೆಲೆಯದ್ದಾಗಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಆಪಲ್ ಮ್ಯಾಕ್ ಪ್ರೋ ಲಭ್ಯ: ಅತೀ ದುಬಾರಿ ಬೆಲೆ ಶಾಕ್ ಆಗಬೇಡಿ..!

ಒಂದು ಲಕ್ಷದ ಐಫೋನ್ X ಬಿಡುಗಡೆ ಮಾಡಿದ್ದ ಆಪಲ್, ಈ ಬಾರಿ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿಯೇ ಅತೀ ಹೆಚ್ಚು ಬೆಲೆಯ ಐಮ್ಯಾಕ್ ಪ್ರೋವನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ವೃತ್ತಿಪರ ಕೆಲಸಗಾರಿಗೆ ಹೇಳಿ ಮಾಡಿಸಿದ ಡೆಸ್ಕ್ ಟಾಪ್ ಇದಾಗಿದೆ. ಆದರೆ ಈ ಐಮ್ಯಾಕ್ ಪ್ರೋ ಬೆಲೆ ಕೇಳಿದರೆ ತಲೆ ತಿರುವುದಂತು ಗ್ಯಾರೆಂಟಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪ್ ಇನ್ ಒನ್:

ಆಪ್ ಇನ್ ಒನ್:

ಇದೊಂದು ಆಲ್ ಇನ್ ಒನ್ ಡೆಸ್ಕ್ ಟಾಪ್ ಆಗಿರುವ ಐಮ್ಯಾಕ್ ಪ್ರೋ ಈ ಹಿಂದೆ ಅಮೆರಿಕಾದಲ್ಲಿ ಮಾತ್ರವೇ ಲಭ್ಯವಿತ್ತು. ಸದ್ಯ ಇದು ಭಾರತದ ಆಪಲ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿಯೂ ಮಾರಾಟವಾಗುತ್ತಿದೆ. ನೋಡಲು ಇದು ಸಾಮಾನ್ಯ ಮ್ಯಾಕ್ ಮಾದರಿಯ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

5K ರೆಟಿನಾ ಡಿಸ್ ಪ್ಲೇ:

5K ರೆಟಿನಾ ಡಿಸ್ ಪ್ಲೇ:

ಆಲ್ ಇನ್ ಒನ್ ಡೆಸ್ಕ್ ಟಾಪ್ ಐಮ್ಯಾಕ್ ಪ್ರೋದಲ್ಲಿ 5K ರೆಟಿನಾ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು 27 ಇಂಚಿನದಾಗಲಿದೆ. 5200X 2880 ಪಿಕ್ಸಲ್ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಒಂದು ಬಿಲಿಯನ್ ಸಂಖ್ಯೆಯ ಬಣ್ಣಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಇಂಟೆಲ್ ಪ್ರೋಸೆಸರ್:

ಇಂಟೆಲ್ ಪ್ರೋಸೆಸರ್:

ಆಪಲ್ ಬಿಡುಗಡೆ ಮಾಡಿರುವ ಆಲ್ ಇನ್ ಒನ್ ಡೆಸ್ಕ್ ಟಾಪ್ ಐಮ್ಯಾಕ್ ಪ್ರೋ ವೃತ್ತಿಪರ ಬಳಕೆದಾರರಿಗಾಗಿಯೇ ವಿನ್ಯಾಸ ಮಾಡಲಾಗಿದ್ದು, 3.2GHz ವೇಗದ ಇಂಟೆಲ್ ಎಕ್ಸನಾ ಪ್ರೋಸೆಸರ್ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲು ಈ ಡೆಸ್ಕ್‌ಟಾಪ್ ಶಕ್ತವಾಗದೆ ಎನ್ನಲಾಗಿದೆ.

32GB ECC ಮೆಮೊರಿ:

32GB ECC ಮೆಮೊರಿ:

ಇದರಲ್ಲಿ 32GB ECC ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ 8GB ಗ್ರಾಫಿಕ್ ಕಾರ್ಡ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ವ ಆನ್‌ ಒನ್ ಒನ್ ಡೆಸ್ಕ್ ಟಾಪ್ ಐಮ್ಯಾಕ್ ಪ್ರೋ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ.

ಬೆಲೆ ತಲೆ ತಿರುಗುವಂತಿದೆ:

ಬೆಲೆ ತಲೆ ತಿರುಗುವಂತಿದೆ:

ಆಲ್ ಇನ್ ಒನ್ ಡೆಸ್ಕ್ ಟಾಪ್ ಐಮ್ಯಾಕ್ ಪ್ರೋ ಬೆಲೆ ಬರೋಬ್ಬರಿ ರೂ.4,15,0೦೦ವಾಗಲಿದೆ. ಲಕ್ಷ ರೂ ಕೊಟ್ಟು ಐಫೋನ್ ಖರೀದಿಸಿದವರಿಗೆ ಇದೇನು ದೊಡ್ಡ ಮೊತ್ತವೇನ್ನಲ್ಲ ಎನ್ನಿಸಬಹುದು ಆದರೆ ಮಾರುಕಟ್ಟೆಯಲ್ಲಿ ಲಭ್ಯವವಿರುವ ಅತೀ ದುಬಾರಿ ಡೆಸ್ಕ್ ಟಾಫ್ ಇದಾಗಿದೆ ಎನ್ನಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Apple iMac Pro will come to India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot