ಇದು ಗಿಟಕ್ ಟ್ಯಾಬ್ಲೆಟ್ ಕಂಪ್ಯೂಟರ್ ಝಲಕ್ಕು

ನೂತನ ಗಿಟಕ್ ಟ್ಯಾಬ್ಲೆಟ್ ಹೆಸರು Getac Z710. ಇದು ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಈ ಟ್ಯಾಬ್ಲೆಟ್ ಐದು ಅಡಿ ಎತ್ತರದಿಂದ ಬಿದ್ದರೂ ಹಾನಿಯಾಗದಷ್ಟು ಗಟ್ಟಿಮುಟ್ಟಾಗಿದೆ. ಕಂಪನಿಯು ನೂತನ ಉತ್ಪನ್ನದ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ.
ಫೀಚರುಗಳು
* 5 ಅಡಿ ಎತ್ತರದಿಂದ(ಅಂದರೆ ಟೇಬಲಿನಷ್ಟು ಎತ್ತರ) ಬಿದ್ದರೆ ನೋ ಪ್ರಾಬ್ಲಂ
* ಧೂಳು ಮತ್ತು ವಾಟರ್ ಪ್ರೂಫ್
* ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್(ವದಂತಿಗಳ ಪ್ರಕಾರ ವಿ2.3 ಆಂಡ್ರಾಯ್ಡ್ ಅಥವಾ ಜಿಂಜರ್ ಬ್ರೀಡ್ ಪ್ರಮುಖ ಆವೃತ್ತಿಯ ಅಪರೇಟಿಂಗ್ ಸಿಸ್ಟಮ್ ಇರಲಿದೆ)
* ಸಣ್ಣ ಗಾತ್ರ
* ಯಾವುದೇ ಹಾಟ್ ಮತ್ತು ಕೂಲ್ ವಾತಾವರಣ(-30 ಡಿಗ್ರಿಯಿಂದ +60 ಡಿಗ್ರಿವರೆಗೆ)ದಲ್ಲಿ ಕಾರ್ಯನಿರ್ವಹಿಸುತ್ತದೆ.
* ಬಳಕೆದಾರರ ಸ್ನೇಹಿ ಸ್ಕ್ರೀನ್ ಗಾತ್ರ
* ಯುಎಸ್ ಬಿ, ಮೈಕ್ರೊ ಎಸ್ ಡಿ ಮೆಮೊರಿ ಕಾರ್ಡ್ ಸ್ಲಾಟ್, ಸಿಮ್ ಕಾರ್ಡ್ ಹೀಗೆ ಬಹುಸಂಪರ್ಕ ಸಾಧನ
* 16 ಜಿಬಿ ಸಂಗ್ರಹ ಸಾಮರ್ಥ್ಯ(ವದಂತಿ)
* ಅತ್ಯಧಿಕ ವೇಗದ 802.11 b/g/n ವೈಫೈ ಕನೆಕ್ಟಿವಿಟಿ
* ಜಿಪಿಎಸ್
* ಡ್ಯೂಯಲ್ ಕ್ಯಾಮರಾ (ಎಚ್ ಡಿ ಕ್ಯಾಮರಾ ಮುಂಭಾಗ, 5 ಮೆಗಾ ಫೀಕ್ಸೆಲ್ ಕ್ಯಾಮರಾ ಹಿಂಭಾಗದಲ್ಲಿ)
* ವೇಗದ ಬ್ಲೂಟೂಥ್ ಕನೆಕ್ಟಿವಿಟಿ
* 7 ಇಂಚಿನ ಡಿಸ್ ಪ್ಲೇ
ಸಣ್ಣಗಾತ್ರ ಆದರೆ ಸದೃಢವಾದ ಈ ಟ್ಯಾಬ್ಲೆಟ್ ನೋಡಲು ಆಕರ್ಷಕವಾಗಿ ಮತ್ತು ವಿಭಿನ್ನವಾಗಿ ಕಾಣುತ್ತದೆ. ಈ ಉತ್ಪನ್ನದ ದರದ ಕುರಿತು ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.


Click it and Unblock the Notifications







