ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ 'ಸಮಿತ್’ ಬಗ್ಗೆ ತಿಳಿದರೆ ನಿಮ್ಮ ತಲೆತಿರುಗುತ್ತದೆ!!

|

10 ವರ್ಷ ಹಿಂದೆ ಚೀನಾ ನಿರ್ಮಿಸಿದ್ದ ವಿಶ್ವದ ವೇಗದ ಸೂಪರ್ ಕಂಪ್ಯೂಟರ್ ದಾಖಲೆಯನ್ನು ಅಮೆರಿಕಾದ ಅತಿ ವೇಗದ ಸೂಪರ್ ಕಂಪ್ಯೂಟರ್ ಸಮಿತ್' ಮುರಿದಿದೆ. ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ ಸಮಿತ್' ಅನ್ನು ಅಮೆರಿಕಾ ಅಭಿವೃದ್ಧಿಪಡಿಸಿದೆ.

ಇದೀಗ ಅಭಿವೃದ್ದಿಯಾಗಿರುವ ವಿಶ್ವದಲ್ಲಿಯೇ ಅತಿ ವೇಗದ ಸೂಪರ್ ಕಂಪ್ಯೂಟರ್ 'ಸಮಿತ್' ಮೂಲಕ ಹಿಂದಿನ ಸೂಪರ್ ಕಂಪ್ಯೂಟರ್‌ಗಳಿಗಿಂತಲೂ ತೀಕ್ಷಣವಾಗಿ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ, ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ ಸಮಿತ್' ಈಗ ಸುದ್ದಿಯಲ್ಲಿದೆ.

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ ಬಗ್ಗೆ ತಿಳಿದರೆ ನಿಮ್ಮ ತಲೆತಿರುಗುತ್ತದೆ

ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್‌ಗಳ ಅವಶ್ಯಕತೆ ಇರುವುದರಿಂದ ಸೂಪರ್ ಕಂಪ್ಯೂಟರ್ ಸಮಿತ್' ಅನ್ನು ಬಿಡುಗಡೆ ಮಾಡಿಡುವುದಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಹೇಳಿದೆ. ಹಾಗಾದರೆ, ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ ಸಮಿತ್' ಸಾಮರ್ಥ್ಯವೇನು ಎಂಬುದನ್ನು ಮುಂದೆ ತಿಳಿಯಿರಿ.

ಅಸಾಮಾನ್ಯ ಸೂಪರ್ ಕಂಪ್ಯೂಟರ್

ಅಸಾಮಾನ್ಯ ಸೂಪರ್ ಕಂಪ್ಯೂಟರ್

ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಮಾನ್ಯ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದೆ ಎಂದು ಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಹೇಳಿದೆ.

2 ಟೆನ್ನಿಸ್ ಕೋರ್ಟ್‌ನಷ್ಟು ದೊಡ್ಡದು!

2 ಟೆನ್ನಿಸ್ ಕೋರ್ಟ್‌ನಷ್ಟು ದೊಡ್ಡದು!

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' 4,608 ಸರ್ವರ್‌ಗಳನ್ನು ಹೊಂದಿದೆ. 2 ಟೆನ್ನಿಸ್ ಕೋರ್ಟ್‌ಗಳ ಜಾಗವನ್ನು ತೆಗೆದುಕೊಂಡಿರುವ ಸಮಿತ್ 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದೆ. ಮತ್ತು 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್‌ಗಳನ್ನು ಹೊಂದಿದೆ.

200 ಪೆಟಾ ಫ್ಲಾಪ್ಸ್ ಸಾಮರ್ಥ್ಯ!!

200 ಪೆಟಾ ಫ್ಲಾಪ್ಸ್ ಸಾಮರ್ಥ್ಯ!!

ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ. ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು, ಚೀನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ.

ಏನಿದು ಫ್ಲಾಪ್ಸ್?

ಏನಿದು ಫ್ಲಾಪ್ಸ್?

ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ಸಾಮರ್ಥ್ಯ ಇದಾಗಿರುತ್ತದೆ.

ಸಮಿತ್ 200 ಪೆಟಾ ಫ್ಲಾಪ್ಸ್!

ಸಮಿತ್ 200 ಪೆಟಾ ಫ್ಲಾಪ್ಸ್!

ಒಂದು ಸೂಪರ್ ಕಂಪ್ಯೂಟರ್‌ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ. ಇನ್ನು 200 ಪೆಟಾ ಫ್ಲಾಪ್ಸ್ ಸಾಮರ್ಥ್ಯ ಹೊಂದಿರುವ ಸಮಿತ್ ವೇಗ ಎಷ್ಟು ಎಂಬುದನ್ನು ನೀವೆ ಲೆಕ್ಕಹಾಕಿ.!

ನಿರ್ವಹಣೆಯೇ ಕಷ್ಟ!!

ನಿರ್ವಹಣೆಯೇ ಕಷ್ಟ!!

2 ಟೆನ್ನಿಸ್ ಕೋರ್ಟ್‌ಗಳಷ್ಟು ದೊಡ್ಡದಾಗಿರುವ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್' ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ ಎಂದರೆ ಇದರ ನಿರ್ವಹಣೆ ಎಷ್ಟು ಕಷ್ಟ ಎಂಬುದು ನಿಮಗೆ ಅರ್ಥವಾಗಿರಬಹುದು.

Most Read Articles
Best Mobiles in India

English summary
Last week, the US Department of Energy and IBM unveiled Summit, America’s latest supercomputer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X